Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನಾಗರಿಕ ಪ್ರಜ್ಞೆ ಮರೆತ ಮಹಿಳೆ: ಎಳನೀರು ಗೆರಟೆಯಲ್ಲಿ ಮಗನಿಂದ ಮೂತ್ರ ಮಾಡಿಸಿ ರಸ್ತೆಗೆ ಎಸೆದ ದೃಶ್ಯ ವೈರಲ್!

Spread the love

ಸೋಶಿಯಲ್ ಮೀಡಿಯಾದಲ್ಲಿ (social media) ವೈರಲ್ ಆಗುವ ಕೆಲ ದೃಶ್ಯಗಳನ್ನು ಕಂಡಾಗ ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂದೆನಿಸುವುದು ಸಹಜ. ತಿಳಿದವರೇ ಈ ರೀತಿ ಮಾಡಿದ್ರೆ ಏನು ಅರಿಯದವರೇ ಯಾವ ರೀತಿ ವರ್ತಿಸಬೇಕು. ಇಲ್ಲೊಬ್ಬ ಮಹಿಳೆ (Woman) ನಾಗರಿಕ ಪ್ರಜ್ಞೆ ಮರೆತು ನಡೆದುಕೊಂಡಿದ್ದು, ಎಳನೀರಿನ ಗೆರಟೆಯಲ್ಲಿ ಮಗನಿಂದ ಮೂತ್ರ ಮಾಡಿಸಿ ರಸ್ತೆಗೆ ಎಸೆದಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೇಹಾ (Neha) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಕ್ಲಿಪಿಂಗ್‌ನಲ್ಲಿ ಮಹಿಳೆಯೊಬ್ಬರು ಎಳನೀರು ಕುಡಿದ ಬಳಿಕ ಉಳಿಯುವ ಗೆರಟೆಯಲ್ಲಿ ಮಗನಿಂದ ಮೂತ್ರ ಮಾಡಿಸಿದ್ದಾರೆ. ಆ ಬಳಿಕ ಈ ಗೆರಟೆಯನ್ನು ರಸ್ತೆಗೆ ಎಸೆದಿರುವುದನ್ನು ನೋಡಬಹುದು.ಈ ವಿಡಿಯೋ ಏಳು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ಒಬ್ಬ ಬಳಕೆದಾರ, ಭಾರತೀಯ ತಾಯಿ ಎಂದರೆ, ಮತ್ತೊಬ್ಬರು, ನಾಗರಿಕ ಪ್ರಜ್ಞೆಯ ಕೊರತೆ ಎದ್ದು ಕಾಣುತ್ತಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಪ್ರತಿಯೊಂದು ಸಮಸ್ಯೆಗೆ ಪರಿಹಾರ ಕಂಡುಹಿಡಿಯೋದರಲ್ಲಿ ಭಾರತೀಯ ಹೆಣ್ಣು ಮಕ್ಕಳು ಎತ್ತಿದ ಕೈ ಎಂದು ಕಾಮೆಂಟ್ ಮಾಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *