ಭಾರತ ಗಡಿಗೆ ಸಮೀಪ ಚೀನಾದ ಅತಿದೊಡ್ಡ ಅಣೆಕಟ್ಟಿನ ಆತಂಕ

ನವದೆಹಲಿ:ಭಾರತ ಹಾಗೂ ಚೀನಾ ನಡುವಿನ ಸಂಘರ್ಷ ಮೇಲ್ನೋಟಕ್ಕೆ ಶಾಂತವಾಗಿದ್ದರೂ ಪರಿಸ್ಥಿತಿ ಶಾಂತವಾಗಿಲ್ಲ. ಚೀನಾ ಸಿಕ್ಕ ಅವಕಾಶಗಳಲ್ಲಿ ಪಾಕಿಸ್ತಾನವನ್ನು ಬೆಂಬಲಿಸುತ್ತಾ ಲಾಭ ಪಡೆದುಕೊಳ್ಳುತ್ತಿದೆ. ಲಡಾಖ್ ಹಾಗೂ ಅರುಣಾಚಲ ಪ್ರದೇಶದಲ್ಲಿ ಚೀನಾ ಭಾರತದ ಜೊತೆ ಕಿರಿಕ್ ಮಾಡುತ್ತಿರುವ ಪ್ರಮುಖ ಕಾರಣಗಳಲ್ಲಿ ನೀರು ಕೂಡ ಒಂದು.
ಹಲವು ದಾಳ ಉರುಳಿಸಿದ ಚೀನಾ ಇದೀಗ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ವಿಶ್ವದಲ್ಲೇ ಅತೀ ದೊಡ್ಡ ಡ್ಯಾಮ್ ನಿರ್ಮಾಣ ಮಾಡುತ್ತಿದೆ. ಇದೀಗ ಚೀನಾ ಈ ಜಲಾಶಯ ನಿರ್ಮಾಣ ಕಾರ್ಯ ಆರಂಭಿಸಿದೆ. ಇದು ಭಾರತದ ಆತಂಕ ಹೆಚ್ಚಿಸಿದೆ. ವಿಶ್ವದಲ್ಲೇ ಅತೀ ದೊಡ್ಡ ಡ್ಯಾಮ್ ನಿರ್ಮಿಸುವುದರಿಂದ ಭಾರತ ಹಾಗೂ ಬಾಂಗ್ಲಾದೇಶ ಮೂಲಕ ಹರಿಯುವ ಬ್ರಹ್ಮಪುತ್ರ ನದಿ ಬತ್ತಿ ಹೋಗಲಿದೆ. ಇದು ಮತ್ತೊಂದು ವಿನಾಶಕ್ಕೆ ಕಾರಣವಾಗಲಿದೆ ಎಂದು ಭಾರತ ಎಚ್ಚರಿಸಿದೆ.

ಭಾರತದ ಗಡಿ ಪಕ್ಕದಲ್ಲೇ ಚೀನಾದ ಡ್ಯಾಮ್ ನಿರ್ಮಾಣ
ಚೀನಾ ಇದೀಗ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಕಟ್ಟುತ್ತಿರುವ ಡ್ಯಾಮ್ ಭಾರತದ ಗಡಿ ಸನಿಹದಲ್ಲಿದೆ. ಟಿಬೆರ್ ಪ್ರಾಂತ್ಯದಲ್ಲಿ ಅಂದರೆ ಭಾರತ ಗಡಿಗೆ ತಾಗಿಕೊಂಡಿರುವ ಟ್ರಿಬೆಟ್ ಪ್ರಾಂತ್ಯದಲ್ಲಿ ಈ ಡ್ಯಾಮ್ ನಿರ್ಮಾಣ ಮಾಡುತ್ತಿದೆ. ಈ ಡ್ಯಾಮ್ ನಿರ್ಮಾಣ ಕಾರ್ಯದ ಸಮಾರಂಭ ಅರುಣಾಚಲ ಪ್ರದೇಶದ ಹತ್ತಿರದಲ್ಲಿರುವ ಚೀನಾ ಆಕ್ರಮಿತ ನಿನ್ಗ್‌ಚಿಯಲ್ಲಿ ನಡೆದಿದೆ.
137 ಬಿಲಿಯನ್ ಡಾಲರ್ ಯೋಜನೆ
ವಿಶ್ವದ ಅತೀ ದೊಡ್ಡ ಅಣೆಕಟ್ಟು ಯೋಜನೆಗೆ ಚೀನಾ ಬರೋಬ್ಬರಿ 137 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತ ವಿನಿಯೋಗಿಸುತ್ತಿದೆ. ಈ ಅಣೆಕಟ್ಟಿನ ಮೂಲಕ ಬರೋಬ್ಬರಿ 5 ಹೈಡ್ರೋ ಪವರ್ ಯೋಜನೆ ಆರಂಭಗೊಳ್ಳುತ್ತಿದೆ. ಈ ಮೂಲಕ ಟಿಬೆಟ್ ಸೇರಿದಂತೆ ಚೀನಾದ ಭಾಗಗಳಿಗೆ ವಿದ್ಯುತ್ ಪೂರೈಕೆಯಾಗಲಿದೆ. ಯಾರ್ಲುಂಗ್ ತ್ಸಾಂಗ್ಪೋ ಪ್ರದೇಶವು ಪ್ರಭಾವಶಾಲಿ ಜಲವಿದ್ಯುತ್ ಸಾಮರ್ಥ್ಯವನ್ನು ಹೊಂದಿದೆ, 50 ಕಿಲೋಮೀಟರ್‌ಗಳಿಗಿಂತ ಹೆಚ್ಚು 2,000 ಮೀಟರ್‌ಗಳ ಲಂಬ ಕುಸಿತವನ್ನು ಹೊಂದಿದೆ. ಈ ಯೋಜನೆಯು ವಾರ್ಷಿಕವಾಗಿ 300 ಶತಕೋಟಿ kWh ಗಿಂತ ಹೆಚ್ಚು ವಿದ್ಯುತ್ ಉತ್ಪಾದಿಸಲು ಈ ಶಕ್ತಿಯನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ, ಇದು 300 ಮಿಲಿಯನ್ ಮನೆಗಳಿಗೆ ವಿದ್ಯುತ್ ಒದಗಿಸಲು ಸಾಕು. ನಮ್ಚಾ ಬಾರ್ವಾ ಪರ್ವತದ ಮೂಲಕ ನದಿಯ ಅರ್ಧದಷ್ಟು ಹರಿವನ್ನು ತಿರುಗಿಸಲು ಸುಮಾರು 20 ಕಿಮೀ ಉದ್ದದ ನಾಲ್ಕರಿಂದ ಆರು ಸುರಂಗಗಳನ್ನು ಕೊರೆಯುವ ಅಗತ್ಯವಿದೆ.
ಆರ್ಥಿಕ ಮತ್ತು ಪರಿಸರ ಪರಿಣಾಮಗಳು
ಟಿಬೆಟ್ ಸ್ವಾಯತ್ತ ಪ್ರದೇಶಕ್ಕೆ $3 ಶತಕೋಟಿ ವಾರ್ಷಿಕ ಆದಾಯ ಸೇರಿದಂತೆ ಯೋಜನೆಯ ಆರ್ಥಿಕ ಪ್ರಯೋಜನಗಳು ಗಣನೀಯವಾಗಿವೆ. ಆದಾಗ್ಯೂ, ಯೋಜನೆಯ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಪರಿಸರ ಅವನತಿ, ಸ್ಥಳೀಯ ಸಮುದಾಯಗಳ ಸ್ಥಳಾಂತರ ಮತ್ತು ಪ್ರಾದೇಶಿಕ ಅಸ್ಥಿರತೆಯ ಬಗ್ಗೆ ಕಾಳಜಿಗಳನ್ನು ಎಚ್ಚರಿಕೆಯಿಂದ ಪರಿಹರಿಸಬೇಕು. ಅಣೆಕಟ್ಟು ನಿರ್ಮಾಣದಿಂದ ಅಪಾಯದ ಕುರಿತು ಭಾರತ ಈಗಾಗಲೇ ಎಚ್ಚರಿಕೆ ನೀಡಿದೆ. ಪ್ರವಾಹ ಮತ್ತು ನೀರಿನ ಕೊರತೆಯ ಸಂಭಾವ್ಯ ಅಪಾಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
