Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಂಡ್ಯ ಬಸ್ ದುರಂತದಲ್ಲಿ ಮೃತಪಟ್ಟ ಮಕ್ಕಳ ಆತ್ಮ ಬಸ್‌ನ ಸುತ್ತ ಇತ್ತು: ಅಧಿಮನೋವಿಜ್ಞಾನಿಯ ಹೇಳಿಕೆ

Spread the love

ಬೆಂಗಳೂರು: ಮಂಡ್ಯ ಜಿಲ್ಲೆಯ ಪಾಂಡವಪುರ (Pandavapur, Mandya) ತಾಲೂಕಿನ ಕನಗನಮರಡಿ ಗ್ರಾಮದ ವಿಶ್ವೇಶ್ವರಯ್ಯ ನಾಲೆಗೆ ಬಸ್‌ ಉರುಳಿದ್ದರಿಂದ 30 ಜನರು ಮೃತರಾಗಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳೇ ಈ ದುರಂತದಲ್ಲಿ (Bus Accident) ಸಾವನ್ನಪ್ಪಿದ್ದರು. ಅಪಘಾತಕ್ಕೊಳಗಾದ ಬಸ್‌ನಲ್ಲಿ ಅಥವಾ ಅದರ ಸುತ್ತಮುತ್ತ ಮೃತ ಮಕ್ಕಳ ಅತ್ಮವಿತ್ತು ಎಂದು ಅಧಿಮನೋವಿಜ್ಞಾನಿಯಾಗಿರುವ ಡಾ.

ಡಾ.ರಾಹುಲ್ ಕುಮಾರ್ ಹೇಳಿದ್ದಾರೆ. (Paranormal Expert) ಡಾ.ರಾಹುಲ್ ಕುಮಾರ್ ಓರ್ವ ಅಧಿಮನೋವಿಜ್ಞಾನ ಅಧ್ಯಯನ ಮಾಡಿರುವ ವ್ಯಕ್ತಿಯಾಗಿದ್ದಾರೆ. ಈ ರೀತಿಯ ಹಲವು ಪ್ರಕರಣದ ತನಿಖೆಯನ್ನು ಮಾಡಿದ್ದಾರೆ.SHLLOKA ಪಾಡ್‌ಕಾಸ್ಟ್ ಸಂದರ್ಶನದಲ್ಲಿ ಡಾ.ರಾಹುಲ್ ಕುಮಾರ್ ಅತೀಂದ್ರಿಯ ಅಥವಾ ಅಗೋಚರ ಶಕ್ತಿಗಳು, ತಮಗಾದ ಅನುಭವಗಳ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ಪಾಂಡವಪುರ ತಾಲೂಕಿನ ಕನಗನಮರಡಿಯ ದುರಂತ ನಡೆದ ಬಳಿಕ ಏನಾಯ್ತು ಎಂಬುದನ್ನು ವಿವರಿಸಿದ್ದು, ಈ ವೇಳೆ ತಮಗಾದ ಅನುಭವ ಜೀವನದಲ್ಲಿ ಎಂದಿಗೂ ಮರೆಯಲ್ಲ ಅಂತಾನೂ ರಾಹುಲ್ ಕುಮಾರ್ ಹೇಳಿದ್ದಾರೆ.

ಡಾ.ರಾಹುಲ್ ಕುಮಾರ್ ತನಿಖೆಯಲ್ಲಿ ಕಂಡಿದ್ದೇನು?

ಪಾಂಡವಪುರ ಬಳಿ ಬಸ್ ಅಪಘಾತಕ್ಕೊಳಗಾಗಿದ್ದು, 30 ಮಕ್ಕಳು ಮೃತರಾಗಿರುವ ವಿಷಯ ತಿಳಿಯಿತ್ತು. ಚಿಕ್ಕ ಮಕ್ಕಳು ಅಂದ್ರೆ ಯಾರಿಗೆ ಆಗಲಿ ನೋವು ಆಗುತ್ತದೆ. ನಾನು ಸಹ ಈ ಪ್ರಕರಣದ ಪ್ರತಿಯೊಂದು ಮಾಹಿತಿ ಪಡೆದುಕೊಳ್ಳುತ್ತಿದ್ದೆ. ಬಸ್ ಅಪಘಾತವಾದ ಸ್ಥಳದ ಪಕ್ಕದಲ್ಲಿಯೇ ಮೃತ ಮಕ್ಕಳ ಮರಣೋತ್ತರ ಶವ ಪರೀಕ್ಷೆ ನಡೆಸಲಾಗಿತ್ತು. ಇದಕ್ಕೂ ಮೊದಲು ಇದೇ ಜಾಗದಲ್ಲಿ ಕಾರ್ ಅಪಘಾತಕ್ಕೊಳಗಾಗಿತ್ತು. ನಂತರ ಅಪಘಾತಕ್ಕೊಳಗಾದ ಬಸ್‌ ನ್ನು ಕಾಲುವೆಯಿಂದ ಹೊರಗೆ ತೆಗೆದು ಪಾಂಡವಪುರ ಪೊಲೀಸ್ ಠಾಣೆ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿಯೇ ನಿಲ್ಲಿಸಲಾಗಿತ್ತು. ಪೊಲೀಸರು ತಮ್ಮ ತನಿಖೆಯನ್ನು ನಡೆಸುತ್ತಿದ್ದರು.

ಆ ವಿಡಿಯೋ ನೋಡಿದ್ರೆ ನನಗೆ ಒಂದು ಕ್ಷಣ ಭಯ ಆಗುತ್ತೆ

ಈ ಘಟನೆ ನಡೆದ ಮೂರ್ನಾಲ್ಕು ದಿನಗಳ ನಂತರ ಪೊಲೀಸ್ ಠಾಣೆಯಿಂದ ನಮಗೊಂದು ಫೋನ್ ಕರೆ ಬರುತ್ತದೆ. ಬಸ್ ನಿಲ್ಲಿಸಿದ ಸ್ಥಳದ ಸುತ್ತಮುತ್ತ ಮನೆಗಳಿದ್ದು, ರಾತ್ರಿಯಾಗುತ್ತಿದ್ದಂತೆ ಇಲ್ಲಿಂದ ಚೀರಾಟ, ಕಿರುಚಾಟ ಕೇಳಿಸುತ್ತದೆ. ಹಾಗಾಗಿ ಈ ಬಸ್‌ ಇಲ್ಲಿಂದ ಶಿಫ್ಟ್ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ನೀವು ಬಂದು ತನಿಖೆ ನಡೆಸಬೇಕು ಎಂದು ಪೊಲೀಸರು ಹೇಳಿದರು. ನಾವು ಅಲ್ಲಿಗೆ ಹೋಗಿ ರೆಕಾರ್ಡ್ ಮಾಡಿರುವ ವಿಡಿಯೋ ನೋಡಿದ್ರೆ ಒಂದು ಕ್ಷಣ ನನಗೆ ಭಯವಾಗುತ್ತದೆ ಎಂದು ರಾಹುಲ್ ಕುಮಾರ್ ಹೇಳುತ್ತಾರೆ.

ಪೊಲೀಸರ ಸೂಚನೆ ಮೇರೆಗೆ ನಮ್ಮ ತಂಡದೊಂದಿಗೆ ಬಸ್ ನಿಲ್ಲಿಸಿದ ಸ್ಥಳಕ್ಕೆ ಅಲ್ಲಿಗೆ ಹೋಗಲಾಯ್ತು. ಅಪಘಾತವಾದ ಸ್ಥಳದಲ್ಲಿಯೇ ಪೋಸ್ಟ್ ಮಾರ್ಟಮ್ ನಡೆದಿದ್ದರಿಂದ ಅಲ್ಲಿ ನೆಗೆಟಿವ್ ಹೆಚ್ಚಿತ್ತು. ಆದ್ದರಿಂದ ಬಸ್‌ ಬಳಿ ಟಾರ್ಚ್ ಇಟ್ಟು, ಇಲ್ಲಿ ಎನರ್ಜಿ ಇದ್ರೆ ಟಾರ್ಚ್ ಆನ್ ಮಾಡಿಕೊಳ್ಳುವಂತೆ ಕೇಳಿಕೊಳ್ಳಲಾಯ್ತು. ಇದಾದ ಐದು ನಿಮಿಷದಲ್ಲಿ ಟಾರ್ಚ್ ಆನ್ ಆಯ್ತು. ಇದೆಲ್ಲವೂ ರೆಕಾರ್ಡ್ ಆಗಿದ್ದು, ಟಾರ್ಚ್ ಬಳಿ ಯಾರೂ ಅಲ್ಲಿರಲಿಲ್ಲ. ನಂತರ ಬಸ್ ಚಕ್ರದ ಬಳಿ ಗೊಂಬೆಯನ್ನು (Electromagnetic Doll) ಇರಿಸಲಾಗಿತ್ತು, ಅದು ಸಹ ಅಲ್ಲಾಡಲು ಆರಂಭವಾಯ್ತು. ಅಲ್ಲಿದ್ದ ಎನರ್ಜಿ ಟಾರ್ಚ್ ಬಳಿಯಲ್ಲಿ ಬಂದು, ಗೊಂಬೆ ಹತ್ರ ಬರುತ್ತಿತ್ತು. ನಂತರ ಮೃತ ಮಕ್ಕಳ ಹೆಸರು ಕೂಗಲು ಆರಂಭಿಸಲಾಯ್ತು.

ಟಾರ್ಚರ್‌ ಆನ್ ಆಂಡ್ ಆಫ್ ಆಗಲು, ಗೊಂಬೆ ಶೇಕಿಂಗ್

ನಮ್ಮ ಟೀಂನಲ್ಲಿ ಲೇಡಿ, ತಾಯಿ ಮಕ್ಕಳನ್ನು ಕರೆಯುವಂತೆ ಒಂದೊಂದೆ ಹೆಸರು ಕರೆಯಲಾರಂಭಿಸಿದರು. ಕೆಲವು ಹೆಸರು ಹೇಳಿದಂತೆ ಟಾರ್ಚ್ ಆನ್ ಆಂಡ್ ಆಫ್ ಆಗಲು ಶುರುವಾಯ್ತು. ಇತ್ತ ಗೊಂಬೆ ಅಲ್ಲಾಡಿಸುವಿಗೆ ಹೆಚ್ಚಾಯ್ತು ಎಂದು ಡಾ.ರಾಹುಲ್ ಕುಮಾರ್ ಹೇಳಿದ್ದಾರೆ. ನಂತರ ಬಸ್ ಅಲ್ಲಿಂದ ಶಿಫ್ಟ್ ಮಾಡಲಾಯ್ತು ಎಂದಿದ್ದಾರೆ. ಮಕ್ಕಳಿಗೆ ಗೊಂಬೆ ಅಂದ್ರೆ ತುಂಬಾನೇ ಇಷ್ಟ. ಆದ್ದರಿಂದ ತನಿಖೆಯಲ್ಲಿ ಸುಂದರವಾದ ಗೊಂಬೆ ಬಳಕೆ ಮಾಡಲಾಗಿತ್ತು.

ಈ ದುರಂತ ನಡೆದಿದ್ದು ಯಾವಾಗ?

ಖಾಸಗಿ ಬಸ್ (ಕೆಎ-19, ಎ-5676) ಸಾಗುತ್ತಿದ್ದ ರಸ್ತೆ ತುಂಬಾನೇ ಕಿರಿದಾಗಿತ್ತು ಮತ್ತು ರಸ್ತೆಗುಂಡಿಗಳಳಿಂದ ತುಂಬಿತ್ತು. ಹಾಗಾಗಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ಕಾಲುವೆಗೆ ಉರುಳಿತ್ತು. ಕಾಲುವೆಗೆ ಉರಳುವ ಮುನ್ನ ಬಸ್ ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿತ್ತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದರು. ಬಸ್ ಪಾಂಡವಪುರದಿಂದ ಕನಗನಮರಡಿ-ವದೇಸಮುದ್ರ-ಶಿವಳ್ಳಿ ಮಾರ್ಗಕ್ಕೆ ಮಂಡ್ಯಕ್ಕೆ ಹೊರಟಿತ್ತು. ಆದರೆ ಕನಗನಮರಡಿ ಬಿಟ್ಟು ಸ್ವಲ್ಪ ದೂರ ಬರುತ್ತಿದ್ದಂತೆ ರಸ್ತೆಯ ಎಡ ಬದಿಯ ವಿಸಿ ನಾಲೆಗೆ ಮಗುಚಿ ಬಿದ್ದಿತ್ತು. 2018ರ ನವೆಂಬರ್‌ 24ರಂದು ಬಸ್ ಅಪಘಾತ ಸಂಭವಿಸಿತ್ತು. ಇನ್ನು ಅಪಘಾತ ನಡೆದ ಸ್ಥಳದಲ್ಲಿಯೂ ಜನರಿಗೆ ವಿಚಿತ್ರ ಅನುಭವ ಉಂಟಾಗಿತ್ತು. ಹೀಗಾಗಿ ಗ್ರಾಮಸ್ಥರು ಬಸ್ ದುರಂತ ನಡೆದ ಸ್ಥಳದಲ್ಲಿ ವಿಶೇಷ ಹೋಮ ಮತ್ತು ಯಜ್ಞಗಳನ್ನು ಮಾಡಲಾಗಿತ್ತು


Spread the love
Share:

administrator

Leave a Reply

Your email address will not be published. Required fields are marked *