ದುಬೈನಲ್ಲಿ ನಿಧನರಾಗಿದ್ದ ಉದ್ಯಮಿ ತಿಲಕಾನಂದ ಪೂಜಾರಿ ಪಾರ್ಥಿವ ಶರೀರ ಊರಿಗೆ ರವಾನೆ

ಯುಎಇಯಲ್ಲಿ ಯಶಸ್ವಿ ಉದ್ಯಮಿಯಾಗಿದ್ದ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪದ ನೀರಬೈಲು ನಿವಾಸಿ ತಿಲಕಾನಂದ ಪೂಜಾರಿ ಅವರು ಇತ್ತೀಚೆಗೆ ದುಬೈನಲ್ಲಿ ದುರದೃಷ್ಟಕರವಾಗಿ ಮೃತಪಟ್ಟಿದ್ದರು. ಇದೀಗ ಅವರ ಪಾರ್ಥಿವ ಶರೀರವು ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಯುಎಇ ತಂಡದ ನೆರವಿನೊಂದಿಗೆ ಉಪ್ಪಿನಂಗಡಿಯಲ್ಲಿರುವ ಅವರ ಸ್ವಂತ ಊರನ್ನು ತಲುಪಿದೆ.

ಇವರು ಮೃತರ ಸಂಪೂರ್ಣ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ, ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ, ಮೃತದೇಹವನ್ನು ಸ್ವಂತ ಊರಿಗೆ ಕಳುಹಿಸುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಈ ಪ್ರಕ್ರಿಯೆಯ ಫಲವಾಗಿ ಇಂದು ರಾತ್ರಿ ವೇಳೆಗೆ ಮೃತದೇಹವು ಉಪ್ಪಿನಂಗಡಿಗೆ ತಲುಪಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅನಿವಾಸಿ ಕನ್ನಡಿಗರಿಗೆ ಅಭಯ ಕೇಂದ್ರ:
ಕಳೆದ ಹದಿಮೂರು ವರ್ಷಗಳಿಂದ ಯುಎಇ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್), ತನ್ನ ವಿವಿಧ ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಗಳಿಂದ ಅನಿವಾಸಿ ಕನ್ನಡಿಗರಿಗೆ ಅಭಯ ಕೇಂದ್ರವಾಗಿ ನಿಂತಿದೆ. ಇಂತಹ ಸಂದರ್ಭಗಳಲ್ಲಿ ಕೆಸಿಎಫ್ ನೀಡಿದ ತ್ವರಿತ ಮತ್ತು ನಿಸ್ವಾರ್ಥ ನೆರವು ಸಮುದಾಯದ ಬದ್ಧತೆಯನ್ನು ಎತ್ತಿ ಹಿಡಿದಿದೆ.
