Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅಪಘಾತ ರಹಿತ ಚಾಲಕರಿಗೆ ಬಂಪರ್ ಬಹುಮಾನ: ಕೆಎಸ್‌ಆರ್‌ಟಿಸಿ ಪ್ರೋತ್ಸಾಹಧನ ಹೆಚ್ಚಳ

Spread the love

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಅಪಘಾತ ರಹಿತ ಸೇವೆ ಸಲ್ಲಿಸುವ ಚಾಲಕರಿಗೆ ಪ್ರೋತ್ಸಾಹ ಧನ ಹೆಚ್ಚಳ ಮಾಡಿದೆ.

ಈ ಕುರಿತು ಕೆಎಸ್‌ಆರ್‌ಟಿಸಿ ಎಂಡಿ ಅಕ್ರಂ ಪಾಷಾ ಅವರು ಆದೇಶ ಹೊರಡಿಸಿದ್ದಾರೆ. ಈ ಮೊದಲು ಮುಖ್ಯಮಂತ್ರಿ ಚಿನ್ನದ ಪದಕ ಪಡೆದ ಚಾಲಕರಿಗೆ 5,000 ರೂ. ನಗದು ಪುರಸ್ಕಾರವಿತ್ತು. ಈ ನಗದು ಮೊತ್ತವನ್ನು ಇದೀಗ 10,000ರೂ.ಗೆ ಹೆಚ್ಚಿಸಿದೆ ಹಾಗೂ ಚಿನ್ನದ ಪದಕ ಪಡೆದ ಚಾಲಕರಿಗೆ ಮಾಸಿಕ ಭತ್ಯೆ 500ರೂ. – 1,000ರೂ.ಗೆ ಏರಿಕೆ ಮಾಡಿದೆ. 

ಇನ್ನೂ ಬೆಳ್ಳಿ ಪದಕ ಪಡೆದ ಚಾಲಕರಿಗೆ ನೀಡಲಾಗುತ್ತಿದ್ದ 2,500 ರೂ. ನಗದು ಪುರಸ್ಕಾರವನ್ನು ಇದೀಗ 5,000 ರೂ.ಗೆ ಹೆಚ್ಚಿಸಲಾಗಿದೆ. ಜೊತೆಗೆ ಮಾಸಿಕ ಭತ್ಯೆ 250ರೂ.ಯಿಂದ 500 ರೂ.ಗೆ ಏರಿಕೆ ಮಾಡಲಾಗಿದೆ. ಈ ಪರಿಷ್ಕ್ರತ ನಗದು ಪುರಸ್ಕಾರ ಜನವರಿ 1, 2026 ರಿಂದ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *