ಬೆಂಗಳೂರು ಹೊರವಲಯದಲ್ಲಿ ಗೂಳಿ ಅಟ್ಟಹಾಸ: ರಸ್ತೆಯಲ್ಲಿ ಹೋಗುತ್ತಿದ್ದ ವೃದ್ಧನನ್ನೇ ಚುಚ್ಚಿ ಕೊಂದ ಬಸವ!

ಬೆಂಗಳೂರು: ರಸ್ತೆಯಲ್ಲಿ ಹೋಗುತ್ತಿದ್ದ ಗೂಳಿ ದಾಳಿ ಮಾಡಿದ ಪರಿಣಾಮ ವೃದ್ಧ ಸಾವನ್ನಪ್ಪಿರುವ ಘಟನೆ ಬೆಂಗಳೂರು (Bengaluru) ಹೊರವಲಯದ ಆನೇಕಲ್ (Anekal) ತಾಲೂಕಿನ ಹುಲಿಮಂಗಲ ಗ್ರಾಮದಲ್ಲಿ ನಡೆದಿದೆ.


ಹುಲಿಮಂಗಲ ಗ್ರಾಮದ ಮೂಲದ ರಾಮರೆಡ್ಡಿ (57) ಮೃತ ವೃದ್ಧ ಎಂದು ಗುರುತಿಸಲಾಗಿದೆ.
ಸಾಮಾನ್ಯವಾಗಿ ಪ್ರತಿದಿನ ವೃದ್ಧ ಇದೇ ರಸ್ತೆಯಲ್ಲಿ ಓಡಾಡುತ್ತಿದ್ದರು. ಇಂದು ಮದ್ಯಾಹ್ನ 3 ಗಂಟೆ ಸಮಯದಲ್ಲಿ ಕೂಡ ಅದೇ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಗೂಳಿ ದಾಳಿ ನಡೆಸಿದ್ದು, ಪರಿಣಾಮ ವೃದ್ಧ ಸಾವನ್ನಪ್ಪಿದ್ದಾರೆ.

ಗೂಳಿ ದಾಳಿ ನಡೆಸಿರುವ ದೃಶ್ಯ ಅಲ್ಲೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗೂಳಿ ದಾಳಿ ನಡೆಸಿದ್ದು ಸ್ಥಳೀಯರಲ್ಲೇ ಭಯದ ವಾತಾವರಣ ಸೃಷ್ಟಿ ಮಾಡಿದೆ. ಈ ಸಂಬಂಧ ಹೆಬ್ಬಗೋಡು (Hebbagodu) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.