Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹುಟ್ಟುಹಬ್ಬದ ದಿನವೇ ಯುವತಿಯ ಬರ್ಬರ ಹತ್ಯೆ, ಪ್ರೇಮಿ ಆತ್ಮಹತ್ಯೆ

Spread the love

ಉಡುಪಿ: ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಕೋಪಗೊಂಡ ಪಾಗಲ್ ಪ್ರೇಮಿ ಯುವತಿಯ ಕತ್ತು ಮತ್ತು ಎದೆಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಆಕೆಯ ಹುಟ್ಟುಹಬ್ಬ ದಿನವೇ ಡೆತ್​ ಡೇ ಮಾಡಿದ್ದಾನೆ. ಇನ್ನು ಕೊಲೆ ಮಾಡಿ ಪರಾರಿಯಾಗಿದ್ದ ಪ್ರಿಯಕರ ಸ್ವಲ್ಪ ಹೊತ್ತಿನಲ್ಲೇ ಶವವಾಗಿ ಪತ್ತೆಯಾಗಿದ್ದಾನೆ. ಹೌದು..ಈ ಘಟನೆ ಉಡುಪಿ  ಜಿಲ್ಲೆ ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ ಗ್ರಾಮ ನಡೆದಿದೆ. ಪ್ರಿಯಕರ ಕಾರ್ತಿಕ್ ಇಂದು (ಸೆ.12) ಬೆಳಗ್ಗೆ ರಕ್ಷಿತಾ ಪೂಜಾರಿ ಹುಟ್ಟುಹಬ್ಬ ದಿನವೇ ಆಕೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಬಳಿಕ ತಾನೂ ಸಹ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕಾರ್ತಿಕ್ ಹಾಗೂ ರಕ್ಷಿತಾ ಪೂಜಾರಿ ಅಕ್ಕಪಕ್ಕದ ನಿವಾಸಿಗಳಾಗಿದ್ದು, ಕಾರ್ತಿಕ್ ರಕ್ಷಿತಾಳನ್ನು ಪ್ರೀತಿಸುತ್ತಿದ್ದ. ಆದ್ರೆ, ಇಬ್ಬರ ಮದುವೆಗೆ ರಕ್ಷಿತಾಳ ಮನೆಯವರು ಒಪ್ಪಿಕೊಂಡಿಲ್ಲ. ಇದರಿಂದ ರಕ್ಷಿತಾ, ಕಾರ್ತಿಕ್​ ಮೊಬೈಲ್ ನಂಬರ್ ಬ್ಲಾಕ್ ಲಿಸ್ಟ್​ ಗೆ ಹಾಕಿದ್ದಳು. ಇದರಿಂದ ಕೆರಳಿದ ಕಾರ್ತಿಕ್, ಇಂದು ಆಕೆ ಹುಟ್ಟುಹಬ್ಬ ದಿನೇ ಚಾಕುವಿನಿಂದ ಇರಿದು ಪರಾರಿಯಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ರಕ್ಷಿತಾ ಮಣಿಪಾಲ್ ಕೆಎಂಸಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ,

ಇನ್ನು ಪ್ರೇಯಸಿಗೆ ಚಾಕುವಿನಿಂದ ಚುಚ್ಚಿ ಬಳಿಕ ಕಾರ್ತಿಕ್ ಅಲ್ಲೇ ಇದ್ದ ಒಂದು ಬಾವಿಗೆ ಹಾರಿದ್ದಾನೆ. ಆದ್ರೆ, ಇತ್ತ ಪೊಲೀಸರು ಎಲ್ಲೋ ಪರಾರಿಯಾಗಿದ್ದಾನೆಂದು ಹುಡುಕಾಟ ನಡೆಸಿದ್ದರು. ಆದ್ರೆ, ಘಟನಾ ಸ್ಥಳದಲ್ಲಿ ಬಾವಿಯಲ್ಲೇ ಕಾರ್ತಿಕನ ಶವ ಪತ್ತೆಯಾಗಿದೆ.


Spread the love
Share:

administrator

Leave a Reply

Your email address will not be published. Required fields are marked *