Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹಾರ್ಮುಜ್ ಜಲಸಂಧಿಯ ಆತಂಕ ಸವರಿ ಗುಜರಾತ್ ಬಂದರು ತಲುಪಿದ ದೈತ್ಯ ಇಂಧನ ಹಡಗು ‘ಸಿಮಿ’!

Spread the love

ನವದೆಹಲಿ:  ಹಾರ್ಮುಜ್ ಜಲಸಂಧಿಯಲ್ಲಿನ (Strait of Hormuz) ತೀವ್ರ ಉದ್ವಿಗ್ನ ಪರಿಸ್ಥಿತಿಯ ನಡುವೆ  ಮಾರ್ಷಲ್ ದ್ವೀಪಗಳ ಧ್ವಜ ಹೊತ್ತ ‘ಸಿಮಿ’ (Symi) ಹೆಸರಿನ ದೈತ್ಯ ಎಲ್‌ಪಿಜಿ ಟ್ಯಾಂಕರ್ ಹಡಗು ಇತ್ತೀಚೆಗೆ ಗುಜರಾತ್‌ನ ಕಚ್ ಜಿಲ್ಲೆಯ ಕಾಂಡ್ಲಾದ ದೀನ್‌ದಯಾಳ್ ಬಂದರನ್ನು ಸುರಕ್ಷಿತವಾಗಿ ತಲುಪಿದೆ.

ಸುಮಾರು 20,000 ಟನ್ ದ್ರವ ಪ್ರೊಪೇನ್ ಮತ್ತು ಬ್ಯುಟೇನ್ ಇಂಧನವನ್ನು ಹೊತ್ತಿದ್ದ ಈ ಟ್ಯಾಂಕರ್ ಮೇ 13 ರಂದು ಅತ್ಯಂತ ಆಯಕಟ್ಟಿನ ಹಾಗೂ ಸೂಕ್ಷ್ಮ ಜಲಮಾರ್ಗವಾಗಿದ್ದ ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿ ಭಾರತಕ್ಕೆ ಆಗಮಿಸಿದೆ. ಹಡಗಿನಲ್ಲಿ 8 ಉಕ್ರೇನಿಯನ್ನರು ಹಾಗೂ 13 ಫಿಲಿಪಿನೋಗಳು ಸೇರಿದಂತೆ ಒಟ್ಟು 21 ಸಿಬ್ಬಂದಿ ಇದ್ದಾರೆ. ಪ್ರಸ್ತುತ ಜಾಗತಿಕ ಬಿಕ್ಕಟ್ಟಿನ ಮೇಲ್ವಿಚಾರಣೆಯಡಿಯಲ್ಲಿ ಈ ಕಡಲ ಮಾರ್ಗವನ್ನು ದಾಟಿದ 11ನೇ ಎಲ್‌ಪಿಜಿ ಟ್ಯಾಂಕರ್ ಇದಾಗಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಫೆ.28ರಂದು ಇರಾನ್ ಮೇಲೆ ಅಮೆರಿಕ, ಇಸ್ರೇಲ್ ಜಂಟಿ ದಾಳಿ ನಡೆಸಿದ ಬಳಿಕ ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದ ವಾತಾವರಣ ಉಂಟಾಗಿತ್ತು. ಮಾರ್ಚ್‌ 13ರ ನಂತರ ಭಾರತ ಮೂಲದ 12 ಎಲ್‌ಪಿಜಿ ಟ್ಯಾಂಕರ್ ಇದ್ದ ಹಡಗುಗಳು ಮತ್ತು ಕಚ್ಚಾತೈಲದ ಟ್ಯಾಂಕರ್‌ ಹೊಂದಿದ್ದ ಒಂದು ಹಡಗು, ಹೊರ್ಮುಜ್ ಜಲಸಂಧಿಯನ್ನು ದಾಟಿ ಬಂದಿವೆ.

ಮೇ 13ರಂದು ಒಮಾನ್ ಕರಾವಳಿಯಲ್ಲಿ ಭಾರತ ಮೂಲದ ವಾಣಿಜ್ಯ ಹಡಗಿನ ಮೇಲೆ ದಾಳಿ ನಡೆಸಲಾಗಿತ್ತು. ಸೊಮಾಲಿಯಾದಿಂದ ಪ್ರಯಾಣಿಸುತ್ತಿದ್ದ ಆ ಹಡಗಿನಲ್ಲಿದ್ದ ಎಲ್ಲಾ 14 ಸಿಬ್ಬಂದಿಯನ್ನು ಅಲ್ಲಿನ ಅಧಿಕಾರಿಗಳು ರಕ್ಷಿಸಿದ್ದರು. ಆದರೆ, ದಾಳಿಯನ್ನು ಯಾರು ನಡೆಸಿದ್ದಾರೆಂದು ಇದುವರೆಗೂ ತಿಳಿದುಬಂದಿಲ್ಲ.


Spread the love
Share:

administrator

Leave a Reply

Your email address will not be published. Required fields are marked *