ಬೋಯಿಂಗ್ 787 ವಿಮಾನದಲ್ಲಿ ಮತ್ತೆ ದೋಷ: ತುರ್ತು ಟರ್ಬೈನ್ (RAT) ಆನ್; ಪೈಲಟ್‌ಗಳ ಸಂಘದಿಂದ ಸಮಗ್ರ ತಪಾಸಣೆಗೆ ಆಗ್ರಹ

ಮುಂಬೈ : ಕಳೆದ ಜೂ.12ಕ್ಕೆ ಪತನಗೊಂಡು 260 ಜನರು ಸಾವಿಗೀಡಾದ ಅಹಮದಾಬಾದ್-ಲಂಡನ್ విరా ಇಂಡಿಯಾ ಬೋಯಿಂಗ್ ವಿಮಾನದ ರೀತಿಯಲ್ಲೇ, ಇದೀಗ ಅಮೃತಸರದಿಂದ ಬರ್ಮಿಂಗ್‌ಹ್ಯಾಮ್‌ಗೆ ತೆರಳುತ್ತಿದ್ದ ವಿಮಾನದಲ್ಲೂ ತಾಂತ್ರಿಕ ದೋಷ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಘಟನೆ ಶನಿವಾರ ನಡೆದಿದೆ. ಈ ಬಗ್ಗೆ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ತನಿಖೆಗೆ ಆದೇಶಿಸಿದೆ.

ಅ.4ರಂದು ಏರ್‌ಇಂಡಿಯಾದ ವಿಮಾನ ಸಂಖ್ಯೆ ‘117’ ಅಮೃತಸರದಿಂದ ಬರ್ಮಿಂಗ್‌ಹ್ಯಾಂಗೆ ತೆರಳುತ್ತಿತ್ತು. ಇದು ಕೂಡ ಬೋಯಿಂಗ್ 787 ಡ್ರೀಮ್ ಲೈನರ್ ವಿಮಾನ ಆಗಿತ್ತು. ಎಂಜಿನ್ ಫೇಲ್ ಆದರೆ ಕೆಲಸ ಮಾಡುವ ಹಾಗೂ ಇತರ ತುರ್ತು ಸ್ಥಿತಿಯಲ್ಲಿ ಕಾರ್ಯನಿರ್ವಹಿಸುವ ‘ರಾಮ್ ಏರ್ ಟರ್ಬೈನ್’ (ಆರ್ ಎಟಿ ಅಥವಾ ಕ್ಯಾಟ್) ದಿಢೀರ್ ಆಗಿ ಆನ್ ಆಗಿದೆ.
ಸಮಗ್ರ ತಪಾಸಣೆಗೆ ಪೈಲಟ್‌ಗಳ ಸಂಘ ಆಗ್ರಹ
ವಿಮಾನದ ಎಲೆಕ್ಟ್ರಿಕ್ ಹಾಗೂ ಹೈಡ್ರಾಲಿಕ್ ವಿಭಾಗಗಳು ಸಹಜಸ್ಥಿತಿಯಲ್ಲಿ ಕಾರ್ಯಾಚರಿಸುತ್ತಿದ್ದರೂ ಹೀಗಾಗಿದೆ ಎಂದು ಏರ್ ಇಂಡಿಯಾ ಹೇಳಿದೆ. ಹೀಗಾಗಿ RAT ಹೇಗೆ ಚಾಲೂ ಆಯಿತು ಎಂಬುದು ನಿಗೂಢವಾಗಿದೆ. ಈ ನಡುವೆ, ಡೀಮ್‌ಲೈನರ್ ವಿಮಾನಗಳ ಸಮಗ್ರ ತಪಾಸಣೆಗೆ ಪೈಲಟ್ ಗಳ ಸಂಘ ಆಗ್ರಹಿಸಿದೆ.