Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸಂತ್ರಸ್ತ ತಾಯಿಗೆ ಬಿಗ್ ರಿಲೀಫ್; ಮಾನವೀಯತೆ ಮರೆತ ಸಂಸ್ಥೆಗೆ ನ್ಯಾಯಾಲಯದಿಂದ ತಕ್ಕ ಶಾಸ್ತಿ

Spread the love

ಗರ್ಭಿಣಿ ಉದ್ಯೋಗಿಯೊಬ್ಬರು ಮನೆಯಿಂದ ಕೆಲಸ ಮಾಡಲು (ವರ್ಕ್ ಫ್ರಂ ಹೋಂ) ಅವಕಾಶ ಕೇಳಿದರೂ ಕಂಪನಿ ಕೊಡಲಿಲ್ಲ. ಇದರಿಂದಾಗಿ ಆಕೆಗೆ ಅವಧಿಪೂರ್ವ ಹೆರಿಗೆಯಾಗಿ, ಹುಟ್ಟಿದ ಮಗು ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದೆ. ಈ ಘಟನೆಗೆ ಕಂಪನಿಯೇ ಹೊಣೆ ಎಂದು ತೀರ್ಮಾನಿಸಿದ ಅಮೆರಿಕದ ಕೋರ್ಟ್, ಸಂತ್ರಸ್ತ ತಾಯಿಗೆ ಬರೋಬ್ಬರಿ 211 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ.

ಈ ಘಟನೆ ನಡೆದಿದ್ದು 2021ರಲ್ಲಿ. ಅಮೆರಿಕದ ‘ಟೋಟಲ್ ಕ್ವಾಲಿಟಿ ಲಾಜಿಸ್ಟಿಕ್ಸ್’ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಚೆಲ್ಸಿ ವಾಲ್ಷ್ ಎಂಬುವವರೇ ಈ ದುರಂತವನ್ನು ಎದುರಿಸಿದವರು. ಅವರ ದೂರಿನ ಮೇಲೆ ಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ.
ಕಂಪನಿ ತಿರಸ್ಕರಿಸಿದ ವರ್ಕ್ ಫ್ರಂ ಹೋಂ ಮನವಿ
ಚೆಲ್ಸಿ ವಾಲ್ಷ್ ಎಂಬ ಮಹಿಳೆ ಗರ್ಭಿಣಿಯಾಗಿದ್ದಾಗ ಅವರಿಗೆ ಕೆಲವು ಆರೋಗ್ಯ ಸಮಸ್ಯೆಗಳಿದ್ದವು. ಹೀಗಾಗಿ, ವೈದ್ಯರು ಅವರಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಮತ್ತು ವಿಶೇಷ ಬೆಡ್ ಮೇಲೆ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಚೆಲ್ಸಿ, ಕಂಪನಿಗೆ ವರ್ಕ್ ಫ್ರಂ ಹೋಂಗೆ ಅರ್ಜಿ ಸಲ್ಲಿಸಿದ್ದರು. ಆದರೆ, ‘ಟೋಟಲ್ ಕ್ವಾಲಿಟಿ ಲಾಜಿಸ್ಟಿಕ್ಸ್’ ಕಂಪನಿ ಅವರ ಅರ್ಜಿಯನ್ನು ತಿರಸ್ಕರಿಸಿತು. ಅಷ್ಟೇ ಅಲ್ಲ, ಕಚೇರಿಗೆ ಹಾಜರಾಗಬೇಕು, ಇಲ್ಲದಿದ್ದರೆ ಸಂಬಳ ರಹಿತ ರಜೆ (unpaid leave) ತೆಗೆದುಕೊಳ್ಳಿ ಎಂದು ತಾಕೀತು ಮಾಡಿತ್ತು.

ಸಂಬಳ ರಹಿತ ರಜೆ ತೆಗೆದುಕೊಂಡರೆ ಆರೋಗ್ಯ ವಿಮೆ (health insurance) ಕಳೆದುಕೊಳ್ಳಬೇಕಾಗುತ್ತದೆ ಎಂದೂ ಕಂಪನಿ ಎಚ್ಚರಿಸಿತ್ತು. ಇದರಿಂದಾಗಿ ಚೆಲ್ಸಿ ರಜೆ ರದ್ದುಗೊಳಿಸಿ ಮತ್ತೆ ಕೆಲಸಕ್ಕೆ ಹೋಗಲು ನಿರ್ಧರಿಸಿದರು. ಫೆಬ್ರವರಿ 22ರಂದು ಅವರು ಮತ್ತೆ ಕೆಲಸಕ್ಕೆ ಹಾಜರಾದರು. ಆದರೆ, ಎರಡೇ ದಿನಗಳಲ್ಲಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಫೆಬ್ರವರಿ 24ರಂದು ವಾಲ್ಷ್ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಆದರೆ, ಹುಟ್ಟಿದ ಕೆಲವೇ ಗಂಟೆಗಳಲ್ಲಿ ಮಗು ಸಾವನ್ನಪ್ಪಿತು. ದುರಂತವೆಂದರೆ, ಅವರಿಗೆ ಹೆರಿಗೆ ನೋವು ಕಾಣಿಸಿಕೊಳ್ಳುವ ಕೆಲವೇ ಗಂಟೆಗಳ ಮೊದಲು ಕಂಪನಿ ವರ್ಕ್ ಫ್ರಂ ಹೋಂಗೆ ಅನುಮತಿ ನೀಡಿತ್ತು.
ಕೋರ್ಟ್ ಮೆಟ್ಟಿಲೇರಿದ ತಾಯಿ, ಸಿಕ್ಕಿತು ನ್ಯಾಯ
ಮ್ಯಾಗ್ನೋಲಿಯಾ ಎಂದು ಹೆಸರಿಟ್ಟಿದ್ದ ಆ ಮಗು, ಹುಟ್ಟಿದ ನಂತರ ಕೇವಲ 1 ಗಂಟೆ 30 ನಿಮಿಷಗಳ ಕಾಲ ಮಾತ್ರ ಬದುಕಿತ್ತು. ನಿಗದಿತ ದಿನಾಂಕಕ್ಕಿಂತ 18 ವಾರಗಳ ಮುಂಚೆಯೇ ಮಗು ಜನಿಸಿತ್ತು. ಮಗಳ ಸಾವಿಗೆ ಕಂಪನಿಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಚೆಲ್ಸಿ ವಾಲ್ಷ್ ಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಕಂಪನಿ ವರ್ಕ್ ಫ್ರಂ ಹೋಂ ನೀಡದ ಕಾರಣ ಉಂಟಾದ ಒತ್ತಡವೇ ಮಗಳ ಸಾವಿಗೆ ಕಾರಣವಾಯಿತು ಎಂದು ಅವರು ವಾದಿಸಿದ್ದರು.
ವಿಚಾರಣೆ ನಡೆಸಿದ ಓಹಾಯೋದ ಹ್ಯಾಮಿಲ್ಟನ್ ಕೌಂಟಿ ನ್ಯಾಯಾಲಯ, ಮ್ಯಾಗ್ನೋಲಿಯಾಳ ಸಾವಿಗೆ ಕಂಪನಿಯೇ ಹೊಣೆ ಎಂದು ತೀರ್ಪು ನೀಡಿತು. ವೈದ್ಯರು ಗರ್ಭಿಣಿಗೆ ಹೆಚ್ಚು ಅಪಾಯವಿದೆ ಎಂದು ತಿಳಿಸಿದ್ದರೂ, ಕಂಪನಿ ಮನೆಯಿಂದ ಕೆಲಸ ಮಾಡಲು ಅವಕಾಶ ನಿರಾಕರಿಸಿದ್ದೇ ಮಗುವಿನ ಸಾವಿಗೆ ಕಾರಣವಾಯಿತು ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ಜೊತೆಗೆ, ಕಂಪನಿಯು 22.5 ಮಿಲಿಯನ್ ಡಾಲರ್ (ಸುಮಾರು 211 ಕೋಟಿ ರೂಪಾಯಿ) ಪರಿಹಾರ ನೀಡಬೇಕೆಂದು ಆದೇಶಿಸಿತು.


Spread the love
Share:

administrator

Leave a Reply

Your email address will not be published. Required fields are marked *