ಅನುಪಮಾ ಪರಮೇಶ್ವರನ್ ನಟನೆಯ ‘ಜಾನಕಿ ವರ್ಸಸ್ ಸ್ಟೇಟ್ ಆಫ್ ಕೇರಳ’ ಚಿತ್ರ ವಿವಾದಕ್ಕೆ ತೆರೆ: ‘ಜಾನಕಿ ವಿ’ ಎಂದು ಶೀರ್ಷಿಕೆ ಬದಲಾವಣೆ!

ತೆಲುಗು ನಟಿ ಅನುಪಮಾ ಪರಮೇಶ್ವರನ್ ನಟಿಸಿರುವ ಬಹುನಿರೀಕ್ಷಿತ ‘ಜಾನಕಿ ವರ್ಸಸ್ ಸ್ಟೇಟ್ ಆಫ್ ಕೇರಳ’ ಚಿತ್ರ ಸದ್ಯ ವಿವಾದದಿಂದ ಕೇರಳ ಹೈಕೋರ್ಟ್ ಮೆಟ್ಟಿಲೇರಿತ್ತು. ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದೇ ಆದರೂ ಬಿಡುಗಡೆಗೆ ಬೇಕಾದ ಅನುಮತಿಗೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಸಂಪೂರ್ಣವಾಗಿ ನಿರಾಕರಿಸಿತ್ತು.

ಜಾನಕಿ ಹೆಸರನ್ನೇ ವಿರೋಧಿಸಿದ್ದ ಸಿಬಿಎಫ್ಸಿ, ಟೈಟಲ್ ಬದಲಾವಣೆ ಜೊತೆಗೆ 96 ಕಟ್ಗಳ ಅಗತ್ಯವಿದೆ ಎಂದು ವಾದಿಸಿತ್ತು. ಸಿಬಿಎಫ್ಸಿ ಮತ್ತು ಚಿತ್ರತಂಡದ ಕಾನೂನು ಸಮರ ಇದೀಗ ಕಡೆಗೂ ಅಂತ್ಯಗೊಂಡಿದೆ.
ಜಾನಕಿ ಬಿಟ್ಟು ಇನ್ಯಾವುದೇ ಹೆಸರು ಕೈಗೊಂಡರು ಸಮಸ್ಯೆಯಿಲ್ಲ ಎಂದಿದ್ದ ಸಿಬಿಎಫ್ಸಿ, ಜೆಎಸ್ಕೆ ರಿಲೀಸ್ಗೆ ಅನುಮತಿ ನೀಡಿರಲಿಲ್ಲ. ಈ ವಿವಾದ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದ ತಡ, ಎರಡೂ ಕಡೆಯಿಂದ ವಾದ-ವಿವಾದಗಳು ಜೋರಾಗಿಯೇ ನಡೆಯಿತು. ಜುಲೈ 5ರಂದು ಸಿನಿಮಾ ನೋಡಿದ ಬಳಿಕವೇ ಆದೇಶ ಹೊರಡಿಸುವುದಾಗಿ ನ್ಯಾಯಾಲಯ ತಿಳಿಸಿತು. ಅಂತೆಯೇ ಜು.9ರಂದು ನಡೆದ ವಿಚಾರಣೆಯಲ್ಲಿ ಸಿಬಿಎಫ್ಸಿ ಪರ ವಕೀಲ ಅಭಿನವ್ ಚಂದ್ರಚೂಡ್ ಅವರ ಮಾತಿಗೆ ಚಿತ್ರತಂಡ ಕಡೆಗೂ ಒಪ್ಪಿಗೆ ಸೂಚಿಸಿದೆ.
ನಾಯಕಿಯ ಪೂರ್ಣ ಹೆಸರು ಜಾನಕಿ ವಿದ್ಯಾಧರನ್ ಆಗಿರುವುದರಿಂದ ‘ಜಾನಕಿ ವಿ’ ಎಂದು ಶೀರ್ಷಿಕೆಯಲ್ಲಿ ಬದಲಾವಣೆ ತನ್ನಿ ಎಂದು ಅಭಿನವ್ ಚಂದ್ರಚೂಡ್ ಸಲಹೆ ನೀಡಿದರು. ಚಿತ್ರದಲ್ಲಿ ಬರುವ ಎರಡು ಸನ್ನಿವೇಶಗಳಲ್ಲಿ ನಟಿಯ ಹೆಸರನ್ನು ಮ್ಯೂಟ್ ಮಾಡುವುದಾಗಿ ಚಲನಚಿತ್ರ ನಿರ್ಮಾಪಕರು ಒಪ್ಪಿಕೊಂಡಿದ್ದಾರೆ. ಚಿತ್ರದ 1:6:45 ಸೆಕೆಂಡ್ಗಳ ಮತ್ತು 1:8:32 ಸೆಕೆಂಡ್ಗಳ ನಡುವೆ ಬದಲಾವಣೆಗಳನ್ನು ಮಾಡಲಾಗುತ್ತದೆ. ಎರಡನೇ ಬದಲಾವಣೆಯನ್ನು 1:8:33 ಸೆಕೆಂಡ್ಗಳ ಮತ್ತು 1:8:36 ಸೆಕೆಂಡ್ಗಳ ನಡುವೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ. ಈ ಮೂಲಕ ‘ಜಾನಕಿ’ ಚಿತ್ರದ ವಿವಾದಕ್ಕೆ ತೆರೆಬಿದ್ದಿದೆ.
ಕೇರಳದ ಚಲನಚಿತ್ರ ನಿರ್ಮಾಪಕರ ಒಕ್ಕೂಟವಾದ ಫಿಲ್ಮ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಕೇರಳ (FEFKA), ಸೋಮವಾರ (ಜೂ.30) ತಿರುವನಂತಪುರಂನಲ್ಲಿರುವ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಕಚೇರಿಯ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಇದಕ್ಕೆ ಕಾರಣ ಜೆಸ್ಕೆ: ಜಾನಕಿ ವರ್ಸಸ್ ಸ್ಟೇಟ್ ಆಫ್ ಕೇರಳ ಚಿತ್ರದ ಶೀರ್ಷಿಕೆಯಲ್ಲಿರುವ ಜಾನಕಿ ಹೆಸರು. ಚಿತ್ರದಲ್ಲಿ ಹಿಂದೂ ದೇವತೆ ಸೀತೆಯನ್ನು ಉಲ್ಲೇಖಿಸುವ ಪಾತ್ರ ಜಾನಕಿಯ ಹೆಸರನ್ನು ಬದಲಾಯಿಸಬೇಕೆಂದು ಸಿಬಿಎಫ್‌ಸಿ ಒತ್ತಾಯಿಸಿದೆ. ಆದ್ರೆ, ಇದಕ್ಕೆ ಚಿತ್ರತಂಡ ಸುತಾರಾಮ್ ಒಪ್ಪಿಗೆ ನೀಡಿಲ್ಲ,
