Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಚಲನಚಿತ್ರ ಜಗತ್ತಿನಲ್ಲಿ ಮತ್ತೊಂದು ಸೈಬರ್ ಕಳ್ಳತನ: ‘ಕಣ್ಣಪ್ಪ’ ಚಿತ್ರದ ವಿಎಫ್ಎಕ್ಸ್ ಹಾರ್ಡ್ ಡ್ರೈವ್ ಕಳವು!

Spread the love

ನವದೆಹಲಿ : ಪ್ರಭಾಸ್ (Prabhas), ಅಕ್ಷಯ್ ಕುಮಾರ್, ಮೋಹನ್ಲಾಲ್ ಅಂಥಹಾ ಸ್ಟಾರ್ ನಟರು ಅತಿಥಿ ಪಾತ್ರದಲ್ಲಿ ನಟಿಸಿರುವ, ಮಂಚು ಮನೋಜ್, ಮಂಚು ಮೋಹನ್ಬಾಬು, ಕನ್ನಡದ ನಟ ದೇವರಾಜ್ ಇನ್ನೂ ಹಲವಾರು ಪ್ರತಿಭಾವಂತ ನಟರು ನಟಿಸಿರುವ ನೂರಾರು ಕೋಟಿ ಬಜೆಟ್ನ ಪೌರಾಣಿಕ ಸಿನಿಮಾ ‘ಕಣ್ಣಪ್ಪ’ ಸಿನಿಮಾದ ಹಾರ್ಡ್ಡ್ರೈವ್ ಕಳುವಾಗಿದೆ.

ಇದರಿಂದಾಗಿ ನೂರಾರು ಕೋಟಿ ಬಜೆಟ್ ಹಾಕಿ ನಿರ್ಮಿಸಿದ್ದ ಸಿನಿಮಾ ಕಳ್ಳರ ಪಾಲಾದಂತಾಗಿದೆ.

ಹೈದರಾಬಾದ್ನ ಫಿಲಂ ನಗರ್ ಪೊಲೀಸ್ ಠಾಣೆಯಲ್ಲಿ ‘ಕಣ್ಣಪ್ಪ’ ಸಿನಿಮಾದ ನಿರ್ಮಾಪಕರು ದೂರು ದಾಖಲಿಸಿದ್ದಾರೆ. ಯಾರೋ ಕೆಲ ಅಗಂತುಕರು ಕಚೇರಿಗೆ ನುಗ್ಗಿ ಹಾರ್ಡ್ ಡ್ರೈವ್ಗಳನ್ನು ಎತ್ತಿಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ. ಈಗ ಕಳುವಾಗಿರುವ ಎರಡು ಹಾರ್ಡ್ ಡಿಸ್ಕ್ಗಳಲ್ಲಿ ಸಿನಿಮಾಕ್ಕೆ ಸಂಬಂಧಿಸಿದ ಫೈನಲ್ ವಿಎಫ್ಎಕ್ಸ್ ದೃಶ್ಯಗಳು ಇದ್ದವಂತೆ.

ಮುಂಬೈನ ಎಚ್ಐವಿಇ ಸ್ಟುಡಿಯೋನಲ್ಲಿ ‘ಕಣ್ಣಪ್ಪ’ ಸಿನಿಮಾದ ವಿಎಫ್ಎಕ್ಸ್ ಕೆಲಸ ಮಾಡಿಸಲಾಗಿತ್ತು. ಆ ಬಳಿಕ ಎಚ್ಐವಿಇ ಸ್ಟುಡಿಯೋನವರು ಕೊರಿಯರ್ನಲ್ಲಿ ಎರಡು ಹಾರ್ಡ್ ಡಿಸ್ಕ್ಗಳನ್ನು ಹೈದರಾಬಾದ್ನ ಫಿಲಂ ನಗರ್ನ ಫೋರ್ ಫ್ರೇಮ್ಸ್ ಸ್ಟುಡಿಯೋಕ್ಕೆ ಕೊರಿಯರ್ ಮಾಡಿದ್ದಾರೆ. ಆ ಕೊರಿಯರ್ ಅನ್ನು ರಘು ಎಂಬ ವ್ಯಕ್ತಿ ಪಡೆದುಕೊಂಡಿದ್ದಾರೆ. ಆ ಹಾರ್ಡ್ ಡಿಸ್ಕ್ಗಳನ್ನು ರಘು ಎಂಬಾತ ಚರಿತಾ ಹೆಸರಿನ ಯುವತಿಗೆ ನೀಡಿದ್ದರಂತೆ. ಆದರೆ ಈಗ ರಘು ಮತ್ತು ಚಿತ್ರಾ ಇಬ್ಬರೂ ಸಹ ಕಣ್ಮರೆಯಾಗಿದ್ದಾರೆ.

ಈ ಇಬ್ಬರೂ ಸೇರಿ ಹಾರ್ಡ್ ಡಿಸ್ಕ್ಗಳನ್ನು ತೆಗೆದುಕೊಂಡು ಪರಾರಿ ಆಗಿದ್ದಾರೆ ಎಂಬ ಅನುಮಾನವನ್ನು ನಿರ್ಮಾಪಕರು ವ್ಯಕ್ತಪಡಿಸಿದ್ದು, ಫಿಲಂ ನಗರ್ ಪೊಲೀಸರು ಇದೀಗ ಪ್ರಕರಣ ತನಿಖೆ ನಡೆಸುತ್ತಿದ್ದಾರೆ. ರಘು ಹಾಗೂ ಚರಿತಾಗಾಗಿ ಹುಡುಕಾಟ ಆರಂಭವಾಗಿದೆ. ಕಳೆದ ವರ್ಷ ಬಿಡುಗಡೆ ಆಗಿದ್ದ ರಜನೀಕಾಂತ್ ನಟನೆಯ ‘ಲಾಲ್ ಸಲಾಂ’ ಸಿನಿಮಾದ ಹಾರ್ಡ್ ಡ್ರೈವ್ ಸಹ ಇದೇ ರೀತಿ ಕಣ್ಮರೆಯಾಗಿತ್ತು. ಭಾರಿ ಬಜೆಟ್ ಹಾಕಿ ಮಾಡಿದ್ದ ಸಿನಿಮಾದ ಹಾರ್ಡ್ ಡ್ರೈವ್ ಕಾಣೆ ಆದ ಕಾರಣ ಸಿನಿಮಾಕ್ಕೆ ಭಾರಿ ಹೊಡೆತ ಬಿತ್ತು.

‘ಕಣ್ಣಪ್ಪ’ ಸಿನಿಮಾ ಬೇಡರ ಕಣ್ಣಪ್ಪ ಕತೆ ಆಧರಿಸಿದ್ದು, ಸಿನಿಮಾದಲ್ಲಿ ಮಂಚು ಮನೋಜ್ ನಾಯಕ. ಸಿನಿಮಾ ನಿರ್ಮಾಣ ಮಾಡಿರುವುದು ಅವರ ತಂದೆ ಮೋಹನ್ಬಾಬು. ಸಿನಿಮಾದ ಚಿತ್ರೀಕರಣವನ್ನು ನ್ಯೂಜಿಲೆಂಡ್, ಹೈದರಾಬಾದ್ ಇನ್ನೂ ಹಲವು ಕಡೆ ಮಾಡಲಾಗಿದೆ. ಸಿನಿಮಾದಲ್ಲಿ ಪ್ರಭಾಸ್, ಬಾಲಿವುಡ್ ನಟ ಅಕ್ಷಯ್ಕುಮಾರ್, ಮೋಹನ್ಲಾಲ್ ಇನ್ನೂ ಹಲವರು ನಟಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *