Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಗುಜರಾತ್‌ನಲ್ಲಿ ಆತಂಕಕಾರಿ ಬೆಳವಣಿಗೆ: ಕಳೆದ 2 ವರ್ಷಗಳಲ್ಲಿ 307 ಏಷ್ಯಾಟಿಕ್ ಸಿಂಹಗಳ ಸಾವು

Spread the love

ಗುಜರಾತ್‌ : ಏಷ್ಯಾಟಿಕ್ ಸಿಂಹಗಳ (Asiatic lions) ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಈ ಕುರಿತು ಗುಜರಾತ್ (Gujarat) ವಿಧಾನಸಭೆ ಮುಂಗಾರು ಅಧಿವೇಶನದ (Monsoon session) ಅಧಿವೇಶನದ ಕೊನೆಯ ದಿನವಾದ ಇಂದು (ಸೆ.13) ಆಮ್ ಆದಿ ಪಕ್ಷದ (ಎಎಪಿ) ಶಾಸಕ ಉಮೇಶ್‌ ಮಕ್ವಾನಾ ಪ್ರಶ್ನಿಸಿದ್ದಾರೆ.

ಈ ವೇಳೆ ಉತ್ತರಿಸಿದ ಅರಣ್ಯ ಸಚಿವ ಮುಲುಭಾಯ್ ಬೇರಾ, ಕಳೆದ ಎರಡು ವರ್ಷಗಳಲ್ಲಿ 307 ಏಷ್ಯಾಟಿಕ್ ಸಿಂಹಗಳು ಮೃತಪಟ್ಟಿವೆ ಎಂದು ಮಾಹಿತಿ ನೀಡಿದ್ದಾರೆ.

ಈ ಪೈಕಿ 41 ಸಿಂಹಗಳ ಸಾವುಗಳು ಅಸಹಜ ಕಾರಣಗಳಿಂದ ಸಂಭವಿಸಿವೆ ಎಂದು ವಿಧಾನಸಭೆಯಲ್ಲಿ
ಅರಣ್ಯ ಸಚಿವ ಮುಲುಭಾಯ್ ಬೇರಾ ಹೇಳಿದ್ದಾರೆ.
ಏಷ್ಯಾಟಿಕ್ ಸಿಂಹಗಳ ಅಸಹಜ ಸಾವುಗಳ ಪ್ರಕರಣಗಳು ಹೆಚ್ಚಳವಾಗಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಎರಡು ವರ್ಷಗಳಲ್ಲಿ ಹಲವು ಕ್ರಮಗಳನ್ನ ಕೈಗೊಂಡಿದೆ ಎಂದಿದ್ದಾರೆ. 2023 ರ ಆಗಸ್ಟ್ ಮತ್ತು ಜುಲೈ 2024 ರ ನಡುವೆ 141 ಸಿಂಹಗಳು ಮೃತಪಟ್ಟಿದ್ದು, ಆಗಸ್ಟ್ 2024 ಮತ್ತು ಜುಲೈ 2025 ರ ನಡುವೆ 166 ಸಿಂಹಗಳು ಮೃತಪಟ್ಟಿವೆ ಎಂದು ಉಲ್ಲೇಖಿಸಿದ್ದಾರೆ

ಒಟ್ಟಾರೆ 307 ಸಿಂಹಗಳ ಪೈಕಿ, 41 ಅಸಹಜ ಕಾರಣಗಳಿಂದ ಸಾವನ್ನಪ್ಪಿವೆ. ಇನ್ನು 20 ಸಿಂಹಗಳು ಬಾವಿಗೆ ಬಿದ್ದು ಮೃತಪಟ್ಟಿದ್ದು, ಒಂಬತ್ತು ಸಿಂಹಗಳು ನೀರಿನಲ್ಲಿ ಮುಳು ಮೃತಪಟ್ಟಿವೆ. ಇನ್ನುಳಿದಂತೆ ಎರಡು ಸಿಂಹಗಳ ನಡುವಿನ ಕಿತ್ತಾಟ, ರಸ್ತೆ ಅಪಘಾತ, ರೈಲುಗಳಿಗೆ ಸಿಲುಕಿ ಹಾಗೂ ವಿದ್ಯುತ್ ಆಘಾತಗಳಲ್ಲಿ ಕೂಡ ಕೆಲವು ಸಿಂಹಗಳು ಮೃತಪಟ್ಟಿವೆ ಎಂದಿದ್ದಾರೆ. ಗುಜರಾತ್‌ನ ಗಿರ್ ವನ್ಯಜೀವಿ ಅಭಯಾರಣ್ಯ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ 2025 ರ ಸಮೀಕ್ಷೆ ಪ್ರಕಾರ, 891 ಏಷ್ಯಾಟಿಕ್ ಸಿಂಹಗಳಿವೆ ಎನ್ನಲಾಗಿದೆ


Spread the love
Share:

administrator

Leave a Reply

Your email address will not be published. Required fields are marked *