ಇರಾನ್ ಮಾಜಿ ವಿದೇಶಾಂಗ ಸಚಿವ ಕಮಲ್ ಖರಾಜಿ ಮೇಲೆ ವೈಮಾನಿಕ ದಾಳಿ: ಅಮೆರಿಕ-ಇಸ್ರೇಲ್ ಕೈವಾಡದ ಶಂಕೆ

ಟೆಹ್ರಾನ್: ಶಾಂತಿ ಮಾತುಕತೆಯಲ್ಲಿ ಭಾಗಿಯಾಗಿದ್ದ ಇರಾನ್‌ನ ಹಿರಿಯ ಅಧಿಕಾರಿ ಕಮಲ್ ಖರಾಜಿ ಅವರು ಶಂಕಿತ ಅಮೆರಿಕ-ಇಸ್ರೇಲ್ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಸಂಭಾವ್ಯ ಶಾಂತಿ ಮಾತುಕತೆಯ ಬಗ್ಗೆ ಪಾಕಿಸ್ತಾನದೊಂದಿಗೆ ಅನಧಿಕೃತ ಸಭೆಯಲ್ಲಿ ಪಾಲ್ಗೊಂಡಿದ್ದ ಖರಾಜಿ ಅವರ ಟೆಹ್ರಾನ್‌ನ ನಿವಾಸದ ಮೇಲೆ ಬುಧವಾರ ನಡೆದ ವೈಮಾನಿಕ ದಾಳಿಯಲ್ಲಿ ಖರಾಜಿ ಗಾಯಗೊಂಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಮೆಹರ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಖರಾಜಿ ಅವರು 1977ರಿಂದ 2005ರವರೆಗೆ ಇರಾನ್‌ನ ವಿದೇಶಾಂಗ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
