Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನಟ ಅನಿರುದ್ಧಗೆ ಕ್ಯಾನ್ಸರ್ ನೆಪದಲ್ಲಿ ವಂಚನೆ – ಸೋಷಿಯಲ್ ಮೀಡಿಯಾದಲ್ಲಿ ಸಹಾಯಕ್ಕೆ ಮುಂದಾಗಿ ಮೋಸ ಹೋದ ನಟ!

Spread the love

ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಮಾರಣಾಂತಿಕ ಕಾಯಿಲೆಯಿದೆ, ಚಿಕಿತ್ಸೆಗೆ ಹಣ ಬೇಕಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಗಳು ಬರುವುದು ಸಹಜ. ಆದರೆ ನಟ ಅನಿರುದ್ಧ ಇದೇ ರೀತಿ ಮಗುವೊಂದಕ್ಕೆ ಸಹಾಯ ಮಾಡಲು ಹೋಗಿ ಮೋಸ ಹೋಗಿರುವ ಬಗ್ಗೆ ಬೇಸರ ಹಂಚಿಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ನನ್ನ ಮಗುವಿಗೆ ಕ್ಯಾನ್ಸರ್ ಕಾಯಿಲೆಯಿದೆ. ಚಿಕಿತ್ಸೆಗೆ ಹಣ ಬೇಕು. ಹೀಗಾಗಿ ನೀವು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡು ಸಹಾಯ ಮಾಡಿ ಎಂದು ನಟ ಅನಿರುದ್ಧ ಅವರಿಗೆ ಒಬ್ಬರು ಮನವಿ ಮಾಡಿದ್ದರು. ಸಾಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನಟ ಅನಿರುದ್ಧ ಈ ವಿಡಿಯೋವನ್ನು ಹಂಚಿಕೊಂಡಿದ್ದಲ್ಲದೆ, ತಮಗೆ ಪರಿಚಿತರಾದವರಿಗೆಲ್ಲಾ ಮಗುವಿನ ಚಿಕಿತ್ಸೆಗೆ ಹಣ ಸಹಾಯ ಮಾಡುವಂತೆ ಕೇಳಿಕೊಂಡಿದ್ದರಂತೆ.

ಆದರೆ ನಂತರ ಅವರಿಗೆ ಇದರ ಅಸಲಿಯತ್ತು ತಿಳಿದುಬಂದಿದೆ. ಯಾರೋ ಮಗುವಿನ ಹೆಸರು ಮುಂದಿಟ್ಟುಕೊಂಡು ಹಣ ಮಾಡಲು ಈ ರೀತಿ ಸುಳ್ಳು ಮಾಹಿತಿ ನೀಡಿದ್ದು ಅನಿರುದ್ಧ ಗಮನಕ್ಕೆ ಬಂದಿದೆ. ಮಗುವಿನ ಹೆಸರು ಹೇಳಿಕೊಂಡು ಇಲ್ಲದ ಕಾಯಿಲೆ ಹೆಸರು ಹೇಳಿ ಮೋಸದಿಂದ ಹಣ ಮಾಡಲು ಹೋದ ಆ ಪೋಷಕರಿಗಾಗಿ ಅನಿರುದ್ಧ ಸಾಕಷ್ಟು ಹುಡುಕಾಡುತ್ತಿದ್ದಾರಂತೆ. ಆದರೆ ಇದು ಮೋಸವೆಂದು ತಿಳಿದ ತಕ್ಷಣ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಿಂದ ವಿಡಿಯೋ ಡಿಲೀಟ್ ಮಾಡಿದ್ದು ವಿಶೇಷ ವಿಡಿಯೋ ಮೂಲಕ ಯಾರೂ ಈ ಖಾತೆಗೆ ಹಣ ಕಳುಹಿಸಬೇಡಿ ಎಂದು ಮನವಿಯನ್ನೂ ಮಾಡಿದ್ದಾರೆ. ಸಹಾಯ ಮಾಡಲು ಹೋದರೆ ಈ ರೀತಿ ಮಗುವಿನ ಹೆಸರು ಮುಂದಿಟ್ಟುಕೊಂಡು ಮೋಸ ಮಾಡಿದ ಪೋಷಕರ ಬಗ್ಗೆ ನಟ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಆ ಮಗುವಿಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *