ತಂದೆಯ ಸ್ನೇಹಿತನೆಂದು ಮೋಸ ಮಾಡಲಿದ್ದ ಸೈಬರ್ ವಂಚಕನಿಗೆ ತಲೆ ಕೆಡಿಸಿದ ಯುವತಿ!

ನಾವಿಂದು ತಂತ್ರಜ್ಞಾನ ದ ಯುಗದಲ್ಲಿದ್ದು, ಆದರೆ ಈ ಹೊಸ ತಂತ್ರಜ್ಞಾನಕ್ಕೆ ತೆರೆದುಕೊಳ್ಳುತ್ತಿದ್ದಂತೆ ಮೋಸ ಹೋಗುವವರ ಸಂಖ್ಯೆಯೂ ಹೆಚ್ಚಾಗಿದೆ. ಆದರಲ್ಲಿ ಸೈಬರ್ ವಂಚನೆ ಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೌದು, ಕೆಲಸ ಕೊಡಿಸುವುದಾಗಿ, ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಡುವುದಾಗಿ ಹಾಗೂ ಬ್ಯಾಂಕ್ ನಿಂದ ಕರೆ ಮಾಡಿರುವುದಾಗಿ ಹೀಗೆ ನಾನಾ ರೀತಿಯ ನೆಪ ಹೇಳಿಕೊಂಡು ಕರೆ ಮಾಡುವ ಸೈಬರ್ ವಂಚಕರ ಜಾಲಕ್ಕೆ ಕೆಲವರು ಅರಿವಿಲ್ಲದೇನೆ ಬಿದ್ದು ಹಣ ಕಳೆದುಕೊಳ್ಳುತ್ತಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಯುವತಿಯೊಬ್ಬಳಿಗೆ ತಂದೆಯ ಸ್ನೇಹಿತ ಎಂದು ಹೇಳಿಕೊಂಡು ಬಂದ ಸೈಬರ್ ವಂಚಕನನ್ನು.
ಈ ವಿಡಿಯೋವನ್ನು Ghar Ke Kalesh ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ಯುವತಿಗೆ ಕರೆಯೊಂದು ಬಂದಿದೆ. ಹೌದು, ಸೈಬರ್ ವಂಚಕನು ಯುವತಿಗೆ, ನಾನು ನಿನ್ನ ತಂದೆಯ ಸ್ನೇಹಿತ, ನಿನ್ನ ತಂದೆ ನನಗೆ ಹಣ ಬೇಕೆಂದು ಕೇಳಿದ್ದರು, ನಿನ್ನ ಮೊಬೈಲ್ ಗೆ ಹಣ ಹಾಕುತ್ತೇನೆ ಎಂದು ಹೇಳುವುದನ್ನು ನೋಡಬಹುದು. ಆ ವೇಳೆಯಲ್ಲಿ ಈತನು ಸೈಬರ್ ವಂಚಕ ಎಂದು ಅರಿವಿಗೆ ಬರುತ್ತಿದ್ದಂತೆ ಯುವತಿ ಕೂಡ ತನ್ನ ತಲೆ ಉಪಯೋಗಿಸಿದ್ದಾಳೆ. ಹೌದು, ಈ ಯುವತಿಯೂ ಆತನಿಗೆ ಹಣ ಹಾಕಿ ಎಂದು ಹೇಳಿದ್ದಾಳೆ. ಆ ವ್ಯಕ್ತಿಯೂ ಯುವತಿ ಖಾತೆಗೆ ಹತ್ತು ರೂಪಾಯಿ ಹಾಕಿದ್ದು,ಹಣ ಬಂದಿದೆಯೇ ಎಂದು ನೋಡಲು ಹೇಳಿದ್ದಾನೆ. ಯುವತಿ ಕೂಡ ಈ ಸ್ಕ್ಯಾಮರ್ ಹೇಳಿದ್ದಂತೆ ಹಣ ಬಂದಿದೆ ಎಂದು ಹೇಳುತ್ತಿದ್ದಂತೆ ಆಕೆಯ ಖಾತೆಗೆ ಹತ್ತು ಸಾವಿರ ರೂಪಾಯಿ ಹಣವನ್ನು ವರ್ಗಾಯಿಸಿದ್ದಾನೆ.