ತಿಪ್ಪೆಗುಂಡಿಯಲ್ಲಿ ಸಿಕ್ಕಿತು ದೇವರ ವಿಗ್ರಹ- ಪ್ಲಾಸ್ಟಿಕ್, ಕಬ್ಬಿಣ,ಆಯುವವರೇ ಆರೋಪಿಗಳು

ಆರೋಪಿಗಳು ಬೆಂಗಳೂರಿನಲ್ಲಿ ರಸ್ತೆ ಬದಿ ಪ್ಲಾಸ್ಟಿಕ್, ಕಬ್ಬಿಣ ಆಯುತಿದ್ದರು. ಧಿಡೀರನೆ ಸಿರಿವಂತರಾಗಲು ಪ್ಲಾನ್ ಮಾಡಿ ಕೊಂಡ ಖದೀಮರು ದೇವಾಲಯ ಬಾಗಿಲು ಒಡೆದು ಕಳ್ಳತನ ಮಾಡಲು ಶುರು ಹಚ್ಚಿಕೊಂಡಿದ್ದರು. ದೇವಾಲಯದ ಬಾಗಿಲು ಒಡೆದು ಗರ್ಭಗುಡಿಯ ಒಳ ಹೋಗ್ತಿದ್ದ ಆರೋಪಿಗಳು ದೇವರ ವಿಗ್ರಹವನ್ನು ಕಳ್ಳತನ ಮಾಡುವುದನ್ನೇ ಕಸುಬಾಗಿಸಿಕೊಂಡಿದ್ದರು. ಹನ್ನೆರಡು ದೇವರ ವಿಗ್ರಹ ಮತ್ರು ಪೂಜಾ ಸಾಮಗ್ರಿಗಳು ಸೇರಿ ಒಟ್ಟು ಇಪತ್ತೆರಡು ವಿಗ್ರಹ ಕಳ್ಳತನ ಮಾಡಿದ್ದರು. ಶ್ರೀರಾಮ,ಲಕ್ಷಣ, ಸೀತಾ, ಹನುಮಂತ, ವೆಂಕಟರಮಣ. ಮುನೇಶ್ವರ, ಸಪ್ಪಲಮ್ಮದೇವಿ , ಸಿಡಿ ಈರಣ್ಣ, ಸುಬ್ರಹ್ಮಣ್ಯ ಸ್ವಾಮಿ ,ವಿಗ್ರಹಗಳನ್ನು ಕಳ್ಳತನ ಮಾಡಿದ್ದರು.ಈ ಗ್ಯಾಂಗ್ ಹಿಂದೆ ಕಾಪರ್ ವೈರ್ ಕಳವು ಮಾಡಿ ತಿರುಮಶೆಟ್ಟಿಹಳ್ಳಿ ಪೊಲೀಸರಿಂದ ಅರೆಸ್ಟ್ ಆಗಿತ್ತು. ಈ ವೇಳೆ ಪೊಲೀಸರು ಆರೋಪಿಗಳ ಫಿಂಗರ್ ಪ್ರಿಂಟ್ ಮಾದರಿಯನ್ನು ಸಂಗ್ರಹಿಸಿತ್ತು. ದೇವಸ್ಥಾನದಲ್ಲಿ ಕಳವು ನಡೆದ ಬಗ್ಗೆ ದಾಖಲಾಗಿದ್ದ ದೂರುಗಳನ್ನು ತನಿಖೆ ಮಾಡುವಾಗ ಪಿಗರ್ ಫ್ರಿಂಟ್ ಪರಿಶೀಲನೆ ನಡೆಸಿದಾಗ ಮಹಮದ್ ರಬ್ಬಿ ಫ್ರಿಂಗರ್ ಪ್ರಿಂಟ್ ಮ್ಯಾಚ್ ಆಗಿತ್ತು. ನಂತರ ಆರೋಪಿಗಳ ಒಂದು ತಿಂಗಳಿಂದ ಹುಡುಕುತ್ತಿದ್ದ ಪೊಲೀಸರು ಕಾಡುಗೋಡಿಯ ಸೀಗೆಹಳ್ಳಿಯಲ್ಲಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದರು. ವಿಚಾರಣೆ ವೇಳೆ ವಿಗ್ರಹಗಳನ್ನು ಗುಜರಿಗೆ ಮಾರಾಟ ಮಾಡಲು ಪ್ರಯತ್ನ ಮಾಡಿದ್ದ ವಿಷಯ ಬೆಳಕಿಗೆ ಬಂದಿತ್ತು. ಗುಜರಿ ಅಂಗಡಿಯವರು ದೇವರ ವಿಗ್ರಹ ಎಂದು ಖರೀದಿಸಲು ನಿರಾಕರಿಸಿದ್ದರು. ಹೀಗಾಗಿ ಹೀಗಾಗಿ ಕಳ್ಳತನ ಮಾಡಿದ್ದ ಅಷ್ಟೂ ವಿಗ್ರಹಗಳನ್ನು ಮೂಟೆ ಕಟ್ಟಿ ಗುಜರಿ ಬಳಿಯೆ ಬಿಸಾಕಿ ಹೋಗಿದ್ದೆವು ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಸದ್ಯ ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರೆಸಲಾಗಿದ್ದು ಕಾಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
