ಅತ್ತಾವರ :ಬಾಗಿಲು ಲಾಕ್ ಮಾಡದೇ ನೇಮಕ್ಕೆ ಹೋಗಿದ್ದ ವೇಳೆ 10 ಲಕ್ಷ ನಗದು ಕಳವು

ಮಂಗಳೂರು: ಅತ್ತಾವರದ ಮನೆಯೊಂದರಿಂದ 10 ಲಕ್ಷ ರೂ. ನಗದು ಇದ್ದ ಬ್ಯಾಗ್ ಕಳವಾಗಿರುವ ಕುರಿತು ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶನಿವಾರ ರಾತ್ರಿ 8ರಿಂದ ರವಿವಾರ ಬೆಳಗ್ಗೆ 4.30ರ ಅವಧಿಯಲ್ಲಿ ಕಳವು ನಡೆದಿದೆ. ಮನೆಯ ಮಾಲಕ ಮತ್ತು ಮಗ ಶನಿವಾರ ಸಂಜೆ 5 ಗಂಟೆ ವೇಳೆಗೆ ಮನೆಯ ಪಕ್ಕದಲ್ಲಿ ನಡೆಯುತ್ತಿದ್ದ ನೇಮಕ್ಕೆ ಹೋಗಿದ್ದಾರೆ.
ಮಾಲಕರ ಪತ್ನಿ ರಾತ್ರಿ ಸುಮಾರು 8 ಗಂಟೆಯ ವೇಳೆಗೆ ನೇಮಕ್ಕೆ ಹೋಗಿದ್ದಾರೆ. ಪತಿ ವಾಪಸು ಬರಬಹುದು ಎನ್ನುವ ಕಾರಣಕ್ಕೆ ಬಾಗಿಲಿಗೆ ಬೀಗ ಹಾಕದೆ ಬಿಟ್ಟಿದ್ದರು.
ಬೆಳಗ್ಗಿನ ಜಾವ ಬಂದು ನೋಡಿದಾಗ ಮನೆಯ ಮುಖ್ಯದ್ವಾರ ತೆರೆದಿತ್ತು. ಬೆಡ್ ರೂಮ್‌ನಲ್ಲಿದ್ದ ಬೀರುವಿನ ಬಾಗಿಲು ತೆರೆದಿದ್ದು, ಬಟ್ಟೆಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಬಳಿಕ ಸಂಶಯಗೊಂಡು ಪರಿಶೀಲಿಸಿದಾಗ 10 ಲಕ್ಷ ರೂ. ದುಡ್ಡು ಇಟ್ಟಿದ್ದ ಬ್ಯಾಗ್ ಇರಲಿಲ್ಲ. ಮನೆಯಲ್ಲೆಲ್ಲ ಹುಡುಕಾಡಿದರೂ ಬ್ಯಾಗ್ ಪತ್ತೆಯಾಗಿಲ್ಲ. ಹಣವಿದ್ದ ಬ್ಯಾಗ್ ಕಳವಾಗಿರುವ ಕುರಿತಂತೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
