ಮಂಗಳೂರು: ತಾಯಿ ಮತ್ತು ಮಗು ನಾಪತ್ತೆ – ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಮಂಗಳೂರು: ಎಮ್ಮೆಕರೆ ಬಳಿಯ ಅಪಾರ್ಟ್ಮೆಂಟ್ ಒಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದ ಬೆಳಗಾವಿ ಮೂಲದ ನಾಗಪ್ಪ ಗೋಡಿ ಅವರ ಪತ್ನಿ ಸುಜಾತಾ (30) ತಮ್ಮ 3 ವರ್ಷದ ಗಂಡು ಮಗುವಿನೊಂದಿಗೆ ಮನೆಯಿಂದ ನಾಪತ್ತೆಯಾಗಿದ್ದಾರೆ.
ಈ ಮಹಿಳೆಯೂ ಬೆಳಗಾವಿ ಮೂಲದವರು. ಮೂಲತಃ ಮುಸ್ಲಿಂ ಆಗಿದ್ದ ಆಕೆಯನ್ನು 12 ವರ್ಷದ ಹಿಂದೆ ಪ್ರೀತಿಸಿ ನಾಗಪ್ಪ ಮದುವೆಯಾಗಿದ್ದರು.
ಇವರಿಗೆ 8 ವರ್ಷ ಮತ್ತು 2 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ಎ.6ರಂದು ನಾಗಪ್ಪ ಮಂಕಿಸ್ಟ್ಯಾಂಡ್ ಕಡೆಗೆ ಮಾವಿನಕಾಯಿ ಕೊಯ್ಯುವ ಕೆಲಸದ ನಿಮಿತ್ತ ಹೋಗಿದ್ದು, ಸಂಜೆ 3 ಕ್ಕೆ ವಾಪಸು ಬಂದು ನೋಡಿದಾಗ ಮನೆಯಲ್ಲಿ 8 ವರ್ಷದ ಮಗ ಮಾತ್ರ ಇದ್ದು ಪತ್ನಿ ಇರಲಿಲ್ಲ. ಆಕೆ ಬ್ಯಾಗ್ ಸಹಿತ ಮನೆ ಬಿಟ್ಟು ಹೋಗಿರುವುದು ತಿಳಿದು ಬಂದಿದ್ದು, ಎಲ್ಲ ಕಡೆ ವಿಚಾರಿಸಿದರೂ ಪತ್ತೆಯಾಗಿಲ್ಲ.
ಸುಮಾರು 5.2 ಅಡಿ ಎತ್ತರ, ಎಣ್ಣೆ ಕಪ್ಪು ಮೈ ಬಣ್ಣ, ಕನ್ನಡ, ಹಿಂದಿ ಮತ್ತು ಉರ್ದು ಭಾರ್ಷೆ ಬಲ್ಲವರಾಗಿದ್ದಾರೆ. ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.