Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹುಲಿ ಬೆನ್ನಟ್ಟಿ ರೀಲ್ಸ್ ಮಾಡಿದ ತಮಿಳುನಾಡು ಸಚಿವ ವನ್ನಿ ಅರಸು? ತನಿಖೆಗೆ ಒತ್ತಾಯ

Spread the love

ಬೆಂಗಳೂರು: ಕರ್ನಾಟಕದಲ್ಲೂ ಹರಡಿಕೊಂಡಿರುವ ‘ನೀಲಗಿರಿ ಜೀವಗೋಳ ಮೀಸಲು ಪ್ರದೇಶ’ದ ಒಳಗೆ ವನ್ಯಜೀವಿ ಸಂರಕ್ಷಣಾ ನಿಯಮಗಳನ್ನು ತಮಿಳುನಾಡು ಸಾಮಾಜಿಕ ನ್ಯಾಯ ಸಚಿವ ವನ್ನಿ ಅರಸು ಮತ್ತು ಅವರ ಪರಿವಾರ ಉಲ್ಲಂಘಿಸಿದೆ. ಅವರ ವಿರುದ್ಧ ಔಪಚಾರಿಕ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಅವರು ಒತ್ತಾಯಿಸಿದ್ದಾರೆ.ತಮಿಳುನಾಡು ಸಚಿವರು ವನ್ಯಜೀವಿ ಪ್ರದೇಶದ ನಿಷೇಧಿತ ಪ್ರದೇಶದಲ್ಲಿ ರೀಲ್ಸ್ ವಿಡಿಯೋಗಾಗಿ ಸಚಿವರು ವಾಹನ ಸಫಾರಿ ಮಾಡಿದ್ದಾರೆ. ಹುಲಿ ಬೆನ್ನಟ್ಟುವುದು, ವನ್ಯಜೀವಿಗಳನ್ನು ಸಮೀಪಿಸುವುದು, ಮೀಸಲು ಪ್ರದೇಶದೊಳಗೆ ಚಾರಣ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಇದರಿಂದ ವನ್ಯಜೀವಿ ಸಂರಕ್ಷಣಾ ನಿಯಮಗಳ ಸ್ಪಷ್ಟ ಉಲ್ಲಂಘನೆ ಆಗಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಅವರು ತಿಳಿಸಿದ್ದಾರೆ.ನಾಗರಹೊಳೆ ರಸ್ತೆಯಲ್ಲಿ ನಿಂತಿದ್ದ ಆನೆಗೆ ಕಲ್ಲಿನಿಂದ ಎಸೆದ ಬೈಕ್ ಸವಾರರ ವಿಡಿಯೋ ವೈರಲ್ ಆಗಿತ್ತು. ಅದರ

ಬೆನ್ನಲ್ಲೆ ಸಚಿವರ ನಿಯಮ ಉಲ್ಲಂಘನೆ ಪ್ರಕರಣ ವರದಿ ಆಗಿದೆ.ವೈರಲ್ ವಿಡಿಯೋದಲ್ಲಿ ನಿಯಮ ಉಲ್ಲಂಘನೆ ಸೆರೆ, ಕ್ರಮ

ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಹರಡಿರುವ ‘ನೀಲಗಿರಿ ಜೀವಗೋಳ ಮೀಸಲು ಪ್ರದೇಶ’ (Nilgiri Biosphere Reserve) ದ ಒಳಗೆ ಯಾರೇ ಹೋದರೂ ವನ್ಯಜೀವಿಗಳಿಗೆ ತೊಂದರೆ ಕೊಡುವಂತಿಲ್ಲ. ಇಲ್ಲಿನ ನಿಯಮಗಳನ್ನು ಯಾರೇ ಆಗಲಿ ಪಾಲಿಸಬೇಕಿರುತ್ತದೆ. ಆದರೆ ತಮಿಳುನಾಡು ಸಚಿವರು ಅದನ್ನು ಪಾಲಿಸಿಲ್ಲ. ನಿರ್ಬಂಧಿತ ಪ್ರದೇಶದಲ್ಲಿ ಸಫಾರಿ ವಾಹನಗಳಿಂದ ಹೊರ ಬರುವುದು, ಹತ್ತುವುದು, ವನ್ಯಜೀವಿಗಳನ್ನು ಸಮೀಪಿಸುವ ವಿಡಿಯೋ ವೈರಲ್ ಆಗಿದೆ. ಅದರ ಬೆನ್ನಲ್ಲೆ ರಾಮಲಿಂಗಾ ರೆಡ್ಡಿ ಅವರು ಗುರುವಾರ ಕ್ರಮಕ್ಕೆ ಆಗ್ರಹಿಸಿದ್ದಾರೆ.ಕಳೆದ ತಿಂಗಳು ನಡೆದ ಪ್ರಕರಣ

ಇನ್ನೂ ವೈರಲ್ ವೀಡಿಯೊದಲ್ಲಿ ಅರಸು ಮತ್ತು ಅವರ ಪರಿವಾರ ಹುಲಿಯನ್ನು ಬೆನ್ನಟ್ಟಿ ವಿಡಿಯೋ ಮಾಡುವುದು, ಮೀಸಲು ಪ್ರದೇಶದೊಳಗೆ ಚಾರಣ ಮಾಡುವುದು ಸೇರಿ ನಿಯಮ ಉಲ್ಲಂಘಿಸಿದ್ದು ವಿಡಿಯೋದಲ್ಲಿ ಸೆರೆಯಾಗಿದೆ. ಅಕ್ಟೋಬರ್ 10 ರಂದು ನಡೆದ ಪ್ರಕರಣವಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ತಮಿಳುನಾಡು ಸಚಿವರು ತೆರಳಿದ ಸಫಾರಿ ವಾಹನಗಳಲ್ಲಿ ಕರ್ನಾಟಕದ ನೋಂದಣಿ ಸಂಖ್ಯೆಯ ವಾಹನವು ಇದೆ.

ಇದೆಲ್ಲ ಗಮನಿಸಿರುವ ರಾಮಲಿಂಗಾ ರೆಡ್ಡಿ ಅವರು, ಕ್ರಮ ಕೈಗೊಳ್ಳುವಂತೆ ಕೋರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಮತ್ತು ಪೊಲೀಸ್ ಮುಖ್ಯಸ್ಥ ಎಂಎ ಸಲೀಂ ಅವರಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.ಒಬ್ಬ ವ್ಯಕ್ತಿ ಎಷ್ಟೇ ಉನ್ನತ ಹುದ್ದೆಯಲ್ಲಿದ್ದರೂ, ಅವರಿಗೂ ಕಾಡಿನ, ಮೀಸಲು ಪ್ರದೇಶದ ಎಲ್ಲ ನಿಯಮಗಳು ಅನ್ವಯಿಸುತ್ತವೆ. ಅವರು ಸಹ ಕಟ್ಟುನಿಟ್ಟಿನ ಕಾನೂನುಗಳನ್ನು ಪಾಲಿಸಬೇಕು ಎಂದು ಹೇಳಿದರು.


Spread the love
Share:

administrator

Leave a Reply

Your email address will not be published. Required fields are marked *