Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವಿಂಬಲ್ಡನ್‌ನಲ್ಲಿ ಜಾನಿಕ್ ಸಿನ್ನರ್ ಹವಾ: ಅಲೆಕ್ಸಾಂಡರ್ ಜೈರೆವ್‌ಗೆ ಸೋಲುಣಿಸಿ ಸತತ 2ನೇ ಬಾರಿಗೆ ಚಾಂಪಿಯನ್!

Spread the love

ಲಂಡನ್: ಇಟಲಿಯ ಜಾನಿಕ್ ಸಿನ್ನರ್ ಅವರು ಜರ್ಮನಿಯ ಅಲೆಕ್ಸಾಂಡರ್ ಜೈರೆವ್ ಅವರನ್ನು 3-1 ಸೆಟ್ ಗಳಿಂದ ಮಣಿಸಿ ವಿಂಬಲ್ಡನ್ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಸತತ ಎರಡನೇ ಬಾರಿಗೆ ಗೆದ್ದರು.
ಜುಲೈ 12ರಂದು ಸೆಂಟರ್ ಕೋರ್ಟ್ ನಲ್ಲಿ ನಡೆದ ಫೈನಲ್ ನಲ್ಲಿ ಜ್ಜೆರೆವ್ ಮೊದಲ ಸೆಟ್ ಅನ್ನು ಟೈಬ್ರೇಕ್ ನಲ್ಲಿ 9-7 ಅಂತರದಿಂದ ಗೆದ್ದು ಮೇಲುಗೈ ಸಾಧಿಸಿದ್ದರು. ಆದರೆ ಸಿನ್ನರ್ ನಂತರದ ಮೂರು ಸೆಟ್ ಗಳಲ್ಲಿ ಮೇಲುಗೈ ಸಾಧಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಎರಡನೇ ಸೆಟ್ ನ ಟೈಬ್ರೇಕ್ ನಲ್ಲಿ 7-2 ಅಂತರದಿಂದ ಗೆದ್ದ ಸಿನ್ನರ್ ಪಂದ್ಯವನ್ನು ಸಮಬಲಕ್ಕೆ ತಂದರು. ಮೂರನೇ ಸೆಟ್ ಅನ್ನು 6-3 ಅಂತರದಿಂದ ಗೆದ್ದ ಅವರು, ನಾಲ್ಕನೇ ಸೆಟ್ ನಲ್ಲೂ ಪ್ರಾಬಲ್ಯ ಮೆರೆದು ಪ್ರಶಸ್ತಿಗೆ ಮುತ್ತಿಕ್ಕಿದರು.

ಪಂದ್ಯದ ಕೊನೆಯ ಹಂತದಲ್ಲಿ ಸಿನ್ನರ್ ಆಡಿದ ಡ್ರಾಪ್ ಶಾಟ್ ಗೆ ಪ್ರೇಕ್ಷಕರಿಂದ ಭರ್ಜರಿ ಮೆಚ್ಚುಗೆ ವ್ಯಕ್ತವಾಯಿತು. ಅಂತಿಮವಾಗಿ ಫೋರ್‌ಹ್ಯಾಂಡ್‌ ವಿಜೇತ ಹೊಡೆತದ ಮೂಲಕ ಮ್ಯಾಚ್ ಪಾಯಿಂಟ್ ಪರಿವರ್ತಿಸಿಕೊಂಡ ಅವರು ತಮ್ಮ ವೃತ್ತಿಜೀವನದ ಎರಡನೇ ವಿಂಬಲ್ಡನ್ ಟ್ರೋಫಿಯನ್ನು ಎತ್ತಿಹಿಡಿದರು.
2025ರಲ್ಲಿ ಗೆದ್ದಿದ್ದ ವಿಂಬಲ್ಡನ್ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಂಡ ಸಿನ್ನರ್, ಈ ಜಯದೊಂದಿಗೆ ಒಟ್ಟು ಐದನೇ ಗ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದರು. ಅಲ್ಲದೆ, ವಿಂಬಲ್ಡನ್ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಂಡ ಓಪನ್ ಯುಗದ 10ನೇ ಆಟಗಾರ ಎಂಬ ದಾಖಲೆಯನ್ನೂ ನಿರ್ಮಿಸಿದರು.
ಜೈರೆವ್ ವಿರುದ್ಧ ಇದು ಸಿನ್ನರ್ ಅವರ ಸತತ 10ನೇ ಗೆಲುವಾಗಿದೆ. 2026ರ ಋತುವಿನಲ್ಲಿ ಇದು ಅವರ ಆರನೇ ಪ್ರಶಸ್ತಿಯಾಗಿದೆ. ಗ್ಯಾಂಡ್‌ ಸ್ಲಾಮ್‌ಗಳು, ಎಟಿಪಿ ಫೈನಲ್ಸ್ ಮಾಸ್ಟರ್ಸ್ 1000 ಟೂರ್ನಿಗಳು ಹಾಗೂ ಒಲಿಂಪಿಕ್ ಚಿನ್ನದ ಪದಕಗಳನ್ನು ಒಳಗೊಂಡಂತೆ ಅವರು ಈಗ ಒಟ್ಟು 17 ‘ಬಿಗ್ ಟೈಟಲ್ಸ್’ ಗೆದ್ದಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *