Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಏಷ್ಯನ್ ಗೇಮ್ಸ್ 2026: ಭಾರತೀಯ ಪುರುಷ ಮತ್ತು ಮಹಿಳಾ ಫುಟ್‌ಬಾಲ್ ತಂಡಗಳಿಗೆ ಆಘಾತ; ಟೂರ್ನಿಯಿಂದ ಅಧಿಕೃತವಾಗಿ ಹೊರಕ್ಕೆ!

Spread the love

ಭಾರತದ ಪುರುಷರ ಮತ್ತು ಮಹಿಳೆಯರ ರಾಷ್ಟ್ರೀಯ ಫುಟ್‌ಬಾಲ್ ತಂಡಗಳು ಮುಂಬರುವ ಏಷ್ಯನ್ ಗೇಮ್ಸ್ 2026 ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿವೆ. ಇದಕ್ಕೆ ಮುಖ್ಯ ಕಾರಣ ಕ್ರೀಡಾ ಸಚಿವಾಲಯದ ಕಠಿಣ ನಿಯಮಾವಳಿಗಳು. ಅಂದರೆ ಭಾರತ ಸರ್ಕಾರದ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಬಹು-ಕ್ರೀಡಾಕೂಟಗಳಿಗೆ ಕಳುಹಿಸುವ ತಂಡಗಳಿಗೆ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೆ ತಂದಿದೆ.

ಏಷ್ಯನ್ ಗೇಮ್ಸ್ ಕೇವಲ ಅನುಭವ ಪಡೆಯುವ ಪ್ರವಾಸವಲ್ಲ. ಅದು ಪದಕ ಗೆಲ್ಲುವ ವೇದಿಕೆ ಎಂದು ಕೇಂದ್ರ ಕೀಡಾ ಸಚಿವಾಲಯ ಸ್ಪಷ್ಟಪಡಿಸಿದೆ. ಅಲ್ಲದೆ ಇದಕ್ಕಾಗಿಯೇ ಸರ್ಕಾರ ಕೆಲ ಮಾನದಂಡಗಳನ್ನು ಪರಿಚಯಿಸಿದೆ.

ಭಾರತ ಸರ್ಕಾರದ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಅಧಿಕೃತ ಪಾಲಿಸಿಯ ಪ್ರಕಾರ, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ನಂತಹ ಪ್ರಮುಖ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಿಗೆ ಕ್ರೀಡಾಪಟುಗಳು ಮತ್ತು ತಂಡಗಳನ್ನು ಆಯ್ಕೆ ಮಾಡಲು ಕಟ್ಟುನಿಟ್ಟಾದ “ಮೆಡಲ್ ಪ್ರೊಫೈಲ್” ಮಾನದಂಡಗಳನ್ನು ನಿಗದಿಪಡಿಸಲಾಗಿದೆ.

ಕ್ರೀಡಾ ಸಚಿವಾಲಯದ ಪ್ರಮುಖ ನಿಯಮಗಳು ಇಲ್ಲಿವೆ:

ಫುಟ್‌ಬಾಲ್, ಹಾಕಿ, ಕ್ರಿಕೆಟ್, ಬ್ಯಾಸ್ಕೆಟ್‌ಬಾಲ್‌ನಂತಹ ತಂಡಗಳು ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆಯಬೇಕಾದರೆ ಈ ಕೆಳಗಿನ ಮಾನದಂಡವನ್ನು ತಲುಪಿರಬೇಕು.

  • ಏಷ್ಯನ್ ಕ್ರೀಡಾ ಒಕ್ಕೂಟಗಳ ಅಧಿಕೃತ ಶ್ರೇಯಾಂಕದ ಪ್ರಕಾರ ಆ ತಂಡ ಏಷ್ಯಾದಲ್ಲಿ ಮೊದಲ 8 ಸ್ಥಾನಗಳ ಒಳಗೆ ಇರಬೇಕು.
  • ಕಳೆದ ಒಂದು ವರ್ಷದಲ್ಲಿ ತಂಡದ ಪ್ರದರ್ಶನವು ಪದಕ ಗೆಲ್ಲುವ ಮಟ್ಟದಲ್ಲಿರಬೇಕು.

ಈ ಎರಡು ನಿಯಮಗಳ ಕಾರಣವೇ ಇದೀಗ ಭಾರತ ಫುಟ್‌ಬಾಲ್ ತಂಡ ಏಷ್ಯನ್ ಗೇಮ್ಸ್ 2026 ರಿಂದ ಹೊರಗುಳಿಯಬೇಕಾಗಿ ಬಂದಿದೆ.

  • ಟಾಪ್-8 ನಿಯಮದ ಅಡ್ಡಿ: ಕ್ರೀಡಾ ಸಚಿವಾಲಯದ ನಿಯಮದ ಪ್ರಕಾರ, ಯಾವುದೇ ತಂಡವು ಏಷ್ಯನ್ ಗೇಮ್ಸ್‌ಗೆ ಹೋಗಬೇಕಾದರೆ ಅದು ಏಷ್ಯಾದಲ್ಲಿ ಮೊದಲ 8 ಶ್ರೇಯಾಂಕಗಳ ಒಳಗೆ ಇರಬೇಕು.
  • ಕಡಿಮೆ ಶ್ರೇಯಾಂಕ: ಭಾರತ ಪುರುಷರ ಫುಟ್‌ಬಾಲ್ ತಂಡವು ಸದ್ಯ ಏಷ್ಯಾದಲ್ಲಿ 26ನೇ ಸ್ಥಾನದಲ್ಲಿದೆ ಮತ್ತು ಮಹಿಳಾ ತಂಡವು 13ನೇ ಸ್ಥಾನದಲ್ಲಿದೆ. ಎರಡೂ ತಂಡಗಳು ಸರ್ಕಾರದ ‘ಟಾಪ್-8’ ಮಾನದಂಡವನ್ನು ತಲುಪಲು ವಿಫಲವಾಗಿವೆ.

ವಿಶೇಷ ವಿನಾಯಿತಿ ನಿರಾಕರಣೆ:

ಕಳೆದ ಬಾರಿ (2023ರ ಏಷ್ಯನ್ ಗೇಮ್ಸ್‌ನಲ್ಲಿ) ಸರ್ಕಾರವು ಕೊನೆಯ ಕ್ಷಣದಲ್ಲಿ ನಿಯಮ ಸಡಿಲಿಸಿ ಫುಟ್‌ಬಾಲ್ ತಂಡಕ್ಕೆ ಅನುಮತಿ ನೀಡಿತ್ತು. ಆದರೆ ಈ ಬಾರಿ ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (AIFF) ಮಾಡಿದ ವಿಶೇಷ ಮನವಿಯನ್ನು ಕ್ರೀಡಾ ಸಚಿವಾಲಯ ತಿರಸ್ಕರಿಸಿದೆ.

ಅರ್ಹತೆ ಪಡೆದು ಹೊರಬಿದ್ದ ಭಾರತ:

ಪುರುಷರ ತಂಡ: ಪುರುಷರ ವಿಭಾಗದಲ್ಲಿ, 2026ರ AFC U-23 ಏಷ್ಯನ್ ಕಪ್ ಟೂರ್ನಿಗೆ ಅರ್ಹತೆ ಪಡೆದ ಅಗ್ರ 16 ತಂಡಗಳ ಪೈಕಿ 15 ತಂಡಗಳಿಗೆ ಏಷ್ಯನ್ ಗೇಮ್ಸ್‌ನಲ್ಲಿ ಆಡುವ ಅವಕಾಶ ನೀಡಲಾಗಿತ್ತು (ಆಸ್ಟ್ರೇಲಿಯಾವನ್ನು ಹೊರತುಪಡಿಸಿ). ಭಾರತ ತಂಡವು ಈ ಕಠಿಣ ಅರ್ಹತಾ ಸುತ್ತಿನ ಮಾನದಂಡಗಳನ್ನು ಯಶಸ್ವಿಯಾಗಿ ಪೂರೈಸಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತ್ತು.

ಮಹಿಳಾ ತಂಡ: ಮಹಿಳಾ ವಿಭಾಗದಲ್ಲಿ, ಪ್ರಮುಖ ಕಾಂಟಿನೆಂಟಲ್ ಟೂರ್ನಿಯಾದ 2026ರ AFC ಮಹಿಳಾ ಏಷ್ಯನ್ ಕಪ್ ಒಟ್ಟು 12 ತಂಡಗಳ ಟೂರ್ನಿಯಾಗಿದೆ. ಈ ಪ್ರತಿಷ್ಠಿತ ಟೂರ್ನಿಗೆ ಅಧಿಕೃತವಾಗಿ ಅರ್ಹತೆ ಗಿಟ್ಟಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಭಾರತ ಮಹಿಳಾ ತಂಡಕ್ಕೂ ಏಷ್ಯನ್ ಗೇಮ್ಸ್‌ನಲ್ಲಿ ಅವಕಾಶ ಲಭಿಸಿತ್ತು.

ಹೀಗೆ ಏಷ್ಯನ್ ಕ್ರೀಡಾ ಸಂಸ್ಥೆಗಳು ನಿಗದಿಪಡಿಸಿದ್ದ ಕ್ರೀಡಾ ನಿಯಮಾವಳಿಗಳ ಅಡಿಯಲ್ಲಿ ಭಾರತದ ಎರಡೂ ತಂಡಗಳು ನ್ಯಾಯಯುತವಾಗಿಯೇ ಟೂರ್ನಿಗೆ ಆಯ್ಕೆಯಾಗಿದ್ದವು. ಇದಾಗ್ಯೂ ಭಾರತ ಸರ್ಕಾರದ ಕ್ರೀಡಾ ಸಚಿವಾಲಯದ ಆಂತರಿಕ ಶ್ರೇಯಾಂಕದ ನಿಯಮಗಳ ಕಾರಣದಿಂದಾಗಿ ಇದೀಗ ಭಾರತ ಏಷ್ಯನ್ ಗೇಮ್ಸ್ ಫುಟ್​ಬಾಲ್ ಟೂರ್ನಿಯಿಂದ ಹೊರಗುಳಿಯಬೇಕಾಗಿ ಬಂದಿದೆ.

ಖುಲಾಯಿಸಿದ ಅದೃಷ್ಟ:

ಭಾರತ ಪುರುಷರ ತಂಡವು ಏಷ್ಯನ್ ಗೇಮ್ಸ್​ನಿಂದ ಹೊರಗುಳಿಯುತ್ತಿರುವ ಪರಿಣಾಮ ಫಿಲಿಪೈನ್ಸ್ ದೇಶಕ್ಕೆ ಅವಕಾಶ ಸಿಕ್ಕಿದೆ. ಇನ್ನು ಮಹಿಳಾ ಫುಟ್‌ಬಾಲ್ ವಿಭಾಗದಲ್ಲಿ ಭಾರತ, ಇರಾನ್ ಹಾಗೂ ಆಸ್ಟ್ರೇಲಿಯಾ ಹೊರಗುಳಿದಿದ್ದು, ಈ ತಂಡಗಳ ಬದಲಿಗೆ ಹಾಂಗ್ ಕಾಂಗ್, ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ ತಂಡಗಳನ್ನು ಅಂತಿಮ ಪಟ್ಟಿಗೆ ಸೇರಿಸಿಕೊಳ್ಳಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *