ರಾಯಚೂರು: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಆರೋಪ; ಕೆಬಿಜೆಎನ್‌ಎಲ್ ಇಂಜಿನಿಯರ್ ಬಸನಗೌಡರ ನಿವಾಸ, ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ!

ರಾಯಚೂರು: ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ( ಕೆಬಿಜೆಎನ್ಎಸ್ಎಲ್)ದ ಕಾರ್ಯನಿರ್ವಾಹಕ ಇಂಜಿನಿಯರ್ ಬಸನಗೌಡ ಅವರ ಮನೆ ಹಾಗೂ ಕಚೇರಿ ಸೇರಿದಂತೆ ಏಳು ಕಡೆ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ.
ಆದಾಯಕ್ಕೂ ಮೀರಿ ಆಸ್ತಿ ಸಂಪಾದನೆ ಆರೋಪದ ಮೇಲೆ ಈ ಕಾರ್ಯಾಚರಣೆ ನಡೆಸಿರುವ ಲೋಕಾಯುಕ್ತರು ಕೆಬಿಜೆಎನ್‌ಎಲ್ ಇ.ಇ ಬಸನಗೌಡರಿಗೆ ಸೇರಿದ ಮೂರು ಮನೆ, ಕಚೇರಿ, ಫಾರ್ಮ್ ಹೌಸ್, ಗೋದಾಮು, ಪೆಟ್ರೋಲ್ ಬಂಕ್ ಸೇರಿದಂತೆ ಏಳು ಕಡೆಗಳಲ್ಲಿ ದಾಳಿ ನಡೆಸಿದ್ದಾರೆ.
ನಗರ ಎಚ್‌ಆರ್ಬಿ ಲೇಔಟ್ ಹಾಗೂ ಯಕ್ಲಾಸಪೂರನಲ್ಲಿಯೂ ರಾಯಚೂರು ಲೋಕಾಯುಕ್ತ ಎಸ್ ಪಿ ಸಿದ್ದರಾಜು ನೇತೃತ್ವದಲ್ಲಿ ದಾಳಿ ನಡೆಸಲಾಗುತ್ತಿದೆ.

ದೇವದುರ್ಗದ ಜಾಲಹಳ್ಳಿ ಬಳಿ ಕೃಷ್ಣಾ ನದಿ ದಂಡೆಯಲ್ಲಿ 30 ಎಕರೆ ಜಮೀನು ಖರೀದಿ ಪತ್ತೆಯಾಗಿದೆ. ದಾಖಲೆಗಳ ಪರಿಶೀಲನೆ ನಡೆಸಿರುವ ಲೋಕಾ ತಂಡಗಳು ನಡೆಸಿವೆ ಎಂದು ತಿಳಿದುಬಂದಿವೆ.
ಬಳ್ಳಾರಿಯಲ್ಲೂ ದಾಳಿ: ಬಳ್ಳಾರಿ, ಹೊಸಪೇಟೆ, ಕೊಪ್ಪಳ, ರಾಯಚೂರು ಜಿಲ್ಲೆಯ ಲೋಕಾಯುಕ್ತ ಅಧಿಕಾರಿಗಳ ಏಳು ತಂಡಗಳಿಂದ ಪರಿಶೀಲನೆ ನಡೆಸಿದ್ದು, ಲೋಕಾಯುಕ್ತ ದಾಳಿಗೊಳಗಾದ ಕೆಬಿಜೆಎನ್ಎಎಲ್ ಇಇ ಬಸನಗೌಡ ರಾಯಚೂರು ಬೈಪಾಸ್ ರಸ್ತೆಯಲ್ಲಿನ ಪತ್ನಿ ಹೆಸರಿನಲ್ಲಿನ ಪೆಟ್ರೋಲ್ ಬಂಕ್ ಪಕ್ಕದಲ್ಲೇ ಇರುವ ಬಾರ್ ಆಂಡ್ ರೆಸ್ಟೋರೆಂಟ್ ಹಾಗೂ ಗೋದಾಮು ಮೇಲೂ ಏಳು ತಂಡಗಳ 30ಕ್ಕೂ ಹೆಚ್ಚು ಲೋಕಾಯುಕ್ತ ಸಿಬ್ಬಂದಿ, ದಾಳಿಯಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಪ್ರಿನ್ಸ್ ಬಾರ್ ಅಂಡ್ ರೆಸ್ಟೋರೆಂಟ್, ಕೆಬಿಜೆಎನ್‌ಎಲ್ ದೇವದುರ್ಗ ತಾಲ್ಲೂಕಿನ ಚಿಕ್ಕಹೊನ್ನಕುಣಿ ಕಚೇರಿ, ಎಚ್ ಆರ್ ಬಿ ಲೇಔಟ್ ನಿವಾಸ, ಸೆಲೆಬ್ರಿಟಿ ಗಾರ್ಡನ್, ಯಾಕ್ಲಾಸಪುರ್ ಅಣ್ಣನ ಮನೆ (ಶಿವನಗೌಡ ), ಯಕ್ಲಾಸಪುರ್ ಗ್ರಾಮದ ಎರಡು ಮನೆ, ದೊಡ್ಡನ ಗೌಡ, ಯಾಕ್ಲಾಸಪುರ್ ಗ್ರಾಮದ ಮ ನಂ 201 ಶರಣಗೌಡ ಅಣ್ಣನ ಮನೆ, ಬೈಪಾಸ್ ರಸ್ತೆಯ ಪತ್ನಿ ಅನಿತಾ ಶೆಟ್ಟಿ ಹೆಸರಿನಲ್ಲಿರುವ ಶ್ರೀ ಫಿಲ್ಲಿಂಗ್ ನಾಯರಾಣ ಪೆಟ್ರೋಲ್ ಬಂಕ್ ಹಾಗೂ ಪಕ್ಕದಲ್ಲಿನ ಬಾರ್ ಹಾಗೂ ರೆಸ್ಟೋರೆಂಟ್, ಪಕ್ಕದಲ್ಲಿನ ಗೋದಾಮ,ಯಕ್ಲಾಪುರ ಪಕ್ಕದ ತೋಟದ ಮನೆಯಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.