Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕೊಚ್ಚಿಯಲ್ಲಿ ಭಾರಿ ಕಳ್ಳತನ: ಬಿಗಿ ಭದ್ರತೆಯ ವಿಲ್ಲಿಂಗ್ಡನ್ ದ್ವೀಪದಲ್ಲಿ ಅರ್ಧ ಕಿಲೋಮೀಟರ್ ರೈಲ್ವೆ ಹಳಿ ನಾಪತ್ತೆ!

Spread the love

ಕೊಚ್ಚಿ: ಬಿಗಿ ಭದ್ರತೆಯ ವಿಲ್ಲಿಂಗ್ಟನ್ ದ್ವೀಪದಲ್ಲಿ ಬಳಕೆಯಲ್ಲಿರದ ಸುಮಾರು ಅರ್ಧ ಕಿಲೋಮೀಟರ್ ರೈಲ್ವೆ ಹಳಿಯನ್ನು ಕಿತ್ತು ಸಾಗಿಸಿರುವುದು ಹಾಗೂ ಹಳಿ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದ್ದು, ರೈಲ್ವೆ ಮೂಲಸೌಕರ್ಯಕ್ಕೆ ಸಂಬಂಧಿಸಿದ ಭಾರಿ ಪ್ರಮಾಣದ ಕಳ್ಳತನ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕೊಚ್ಚಿನ್ ಬಂದರು ಪ್ರಾಧಿಕಾರ ಮತ್ತು ರೈಲ್ವೆ ಇಲಾಖೆ ಮಹತ್ವದ ತನಿಖೆ ಆರಂಭಿಸಿವೆ.
ಹಲವು ಹಂತಗಳ ಭದ್ರತಾ ವ್ಯವಸ್ಥೆ ಜಾರಿಯಲ್ಲಿರುವ ನಿರ್ಬಂಧಿತ ವಲಯದಿಂದ ಗಮನಾರ್ಹ ಪ್ರಮಾಣದ ಉಕ್ಕಿನ ರೈಲ್ವೆ ಹಳಿ ನಾಪತ್ತೆಯಾಗಿರುವ ಕುರಿತು ಕೊಚ್ಚಿನ್ ಬಂದರು ಪ್ರಾಧಿಕಾರ ಹಾಗೂ ರೈಲ್ವೆ ಇಲಾಖೆ ಪ್ರತ್ಯೇಕ ತನಿಖೆ ನಡೆಸುತ್ತಿವೆ.

ನಾಪತ್ತೆಯಾಗಿರುವ ಹಳಿ ಭಾಗವು ಮುಖ್ಯ ರೈಲ್ವೆ ಜಾಲಕ್ಕೆ ಸಂಪರ್ಕ ಕಲ್ಪಿಸುವ ಬಂದರಿನ ಕ್ಯೂ-9 ಬರ್ತ್ ರೈಲ್ವೆ ಮಾರ್ಗದ ಒಂದು ಭಾಗವಾಗಿದೆ. ಈ ಮಾರ್ಗವು ಟಾಟಾ ಗ್ಲೋಬಲ್ ಬೇವರೇಜಸ್ (ಹಿಂದಿನ ಟಾಟಾ ಟೆಟ್ಟಿ) ಕಚೇರಿಯ ಎದುರಿನಿಂದ ಹಾದು ಹೋಗುತ್ತದೆ. ಅಲ್ಲಿಂದ ಐತಿಹಾಸಿಕ ಹಾರ್ಬರ್ ಟರ್ಮಿನಸ್ ರೈಲ್ವೆ ನಿಲ್ದಾಣದತ್ತ ಸಾಗುವ ರಸ್ತೆಯನ್ನು ದಾಟಿ, ವಿಸ್ತಾರವಾದ ರೈಲ್ವೆ ಜಾಲದೊಂದಿಗೆ ಸಂಪರ್ಕ ಹೊಂದುತ್ತದೆ.
ಐತಿಹಾಸಿಕವಾಗಿ ಈ ಮಾರ್ಗವನ್ನು ವೆಲ್ಲೂರಿನಲ್ಲಿರುವ ಹಿಂದೂಸ್ತಾನ್ ನ್ಯೂಸ್‌ ಪ್ರಿಂಟ್ ಲಿಮಿಟೆಡ್‌ ಕಲ್ಲಿದ್ದಲು ಸಾಗಿಸಲು ಪ್ರಮುಖ ಸರಕು ಸಾಗಣೆ ಕಾರಿಡಾರ್ ಆಗಿ ಬಳಸಲಾಗುತ್ತಿತ್ತು. ಆದರೆ ವಲ್ಲರ್‌ಪದಮ್‌ನಲ್ಲಿ ಅಂತರರಾಷ್ಟ್ರೀಯ ಕಂಟೈನರ್ ಟ್ರಾನ್ಸ್‌ಶಿಪ್‌ಮೆಂಟ್ ಟರ್ಮಿನಲ್ ಸ್ಥಾಪನೆಯಾದ ಬಳಿಕ ಈ ಮಾರ್ಗ ನಿರುಪಯುಕ್ತಗೊಂಡಿತ್ತು. ಹಲವು ವರ್ಷಗಳಿಂದ ಕಾರ್ಯಾಚರಣೆ ನಡೆಯದ ಕಾರಣ ಹಳಿಯ ಮಾರ್ಗದಲ್ಲಿ ಗಿಡಗಂಟೆಗಳು ದಟ್ಟವಾಗಿ ಬೆಳೆದು, ಬಹುತೇಕ ಪ್ರದೇಶ ಮುಚ್ಚಿಹೋಗಿತ್ತು.

ಈ ಘಟನೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಕಾವಲು ಹೊಂದಿರುವ ವಿಲ್ಲಿಂಗ್ಟನ್ ದ್ವೀಪದ ಭದ್ರತಾ ವ್ಯವಸ್ಥೆಯ ಬಗ್ಗೆಯೇ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಬೇಲಿ ಹಾಕಿರುವ ಹಾಗೂ ನಿಯಂತ್ರಿತ ಪ್ರವೇಶ ಹೊಂದಿರುವ ಪ್ರದೇಶದಿಂದ ಭಾರೀ ತೂಕದ ಉಕ್ಕಿನ ಹಳಿಗಳು ಮತ್ತು ಕಾಂಕ್ರೀಟ್ ಸ್ವೀಪರ್‌ಗಳನ್ನು ಕಿತ್ತು ಸಾಗಿಸಲು ಗಮನಾರ್ಹ ಪ್ರಮಾಣದ ಸಮಯ, ಶ್ರಮ ಮತ್ತು ಯಂತ್ರೋಪಕರಣಗಳ ಅಗತ್ಯವಿರುವುದರಿಂದ, ಈ ಕೃತ್ಯ ಹೇಗೆ ನಡೆಯಿತು ಎಂಬುದು ತನಿಖೆಯ ಪ್ರಮುಖ ಅಂಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಆಂತರಿಕ ತನಿಖೆಗೆ ಚಾಲನೆ ನೀಡಿರುವುದಾಗಿ ಕೊಚ್ಚಿನ್ ಬಂದರು ಪ್ರಾಧಿಕಾರದ ಅಧಿಕಾರಿಗಳು ದೃಢಪಡಿಸಿದ್ದಾರೆ. ಆದರೆ ಈವರೆಗೆ ಯಾವುದೇ ಅಧಿಕೃತ ದೂರು ದಾಖಲಾಗದಿರುವುದರಿಂದ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್ ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ತಿಳಿದುಬಂದಿದೆ.


Spread the love
Share:

administrator

Leave a Reply

Your email address will not be published. Required fields are marked *