ಕ್ಯಾನ್ಸರ್ ಗೆ ತುತ್ತಾಗಿದ್ದಾರೆ ಎನ್ನಲಾದ ಮಮ್ಮುಟ್ಟಿ ಹೆಸರಿನಲ್ಲಿ ಶಬರಿಮಲೆಯಲ್ಲಿ ಪೂಜೆ -ವಿವಾದದ ಹವಾ!

ನಟ ಮೋಹನ್ಲಾಲ್ ಶಬರಿಮಲೆಯಲ್ಲಿ ‘ಉಷಾ ಪೂಜೆ’ ಸಲ್ಲಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಕಾರಣ – ಈ ಪೂಜೆ ಮಮ್ಮುಟ್ಟಿ ಹೆಸರಿನಲ್ಲಿ ಮಾಡಲಾಗಿದೆ, ಮತ್ತು ದೇಗುಲ ನೀಡಿದ ರಸೀದಿಯಲ್ಲಿ ಅವರ ಮೂಲ ಹೆಸರು ‘ಮೊಹಮ್ಮದ್ ಕುಟ್ಟಿ’ ಎಂದು ನಮೂದಾಗಿದೆ. ಇದು ವೈರಲ್ ಆಗುತ್ತಿದ್ದಂತೆ ಮುಸ್ಲಿಂ ಸಮುದಾಯದ ಕೆಲವರು ವಿರೋಧ ವ್ಯಕ್ತಪಡಿಸಿದರು. ಪತ್ರಕರ್ತ ಅಬ್ದುಲ್ಲಾ ಇದನ್ನು ಟೀಕಿಸಿ, ಬಳಿಕ ತಮ್ಮ ಪೋಸ್ಟ್ ಡಿಲೀಟ್ ಮಾಡಿದರು. ಇದರೊಂದಿಗೆ, ಮಮ್ಮುಟ್ಟಿಗೆ ಕ್ಯಾನ್ಸರ್ ಎಂಬ ವದಂತಿಯೂ ಹರಡಿತ್ತು. ಆದರೆ ಅವರ ಆಪ್ತರು ಈ ಸುದ್ದಿಯನ್ನು ಸುಳ್ಳು ಎಂದು ಸ್ಪಷ್ಟಪಡಿಸಿದ್ದು, ಅಭಿಮಾನಿಗಳಿಗೆ ನಿರಾಳತೆ ತಂದಿದೆ.