ವಾಶಿಂಗ್ಟನ್: ವಿಮಾ ಪಾಲಿಸಿ ದುರ್ಬಳಕೆ; ಬ್ಯಾಂಕ್ಗೆ 100 ದಶಲಕ್ಷ ಡಾಲರ್ ವಂಚಿಸಿದ ಭಾರತೀಯ ಮೂಲದ ವ್ಯಕ್ತಿ ಅರೆಸ್ಟ್!

ವಾಶಿಂಗ್ಟನ್: ವಿಮಾ ಪಾಲಿಸಿಗಳನ್ನು ದುರ್ಬಳಕೆ ಮಾಡಿಕೊಂಡು ಬ್ಯಾಂಕ್ಗೆ 100 ದಶಲಕ್ಷ ಡಾಲರ್ ವಂಚನೆಯೆಸಗಿದ ಆರೋಪದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬನನ್ನು ಕ್ಯಾಲಿಫೋರ್ನಿಯಾದಲ್ಲಿ ಬಂಧಿಸಲಾಗಿದೆ.
44 ವರ್ಷ ವಯಸ್ಸಿನ ಮಹೇಂದ್ರ ಮಖಿಜಿಯಾನಿ ಬಂಧಿತ ಆರೋಪಿಯಾಗಿದ್ದು, ಆತ ಗ್ರೀನ್ಾರ್ಡ್ ಸೌಲಭ್ಯದೊಂದಿಗೆ ಅಮೆರಿಕದಲ್ಲಿ ವಾಸವಾಗಿದ್ದ. ಒಂದು ವೇಳೆ ಆರೋಪ ದೃಢಪಟ್ಟಲ್ಲಿ ಆತ ಗರಿಷ್ಠ 30 ವರ್ಷ ಜೈಲು ಶಿಕ್ಷೆ ಅನುಭವಿಸುವ ಸಾಧ್ಯತೆಯಿದೆ.
ಕರೋನಾ ಡೆಲ್ ಮಾರ್ ಎಂಬಲ್ಲಿರುವ ಐಷಾರಾಮಿ ಬಂಗಲೆಯೊಂದರಲ್ಲಿ ವಾಸವಾಗಿದ್ದ ಆತನನ್ನು ಪೊಲೀಸರು ಬಂಧಿಸಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ.
ನ್ಯೂಪೋರ್ಟ್ ಬೀಚ್ ಎಂಬಲ್ಲಿ ಶೆಲ್ ಕಂಪೆನಿಯೊಂದನ್ನು ನಡೆಸುತ್ತಿದ್ದ ಆತ ವಿಮಾ ದಾಖಲೆಗಳನ್ನು ತಿರುಚಿ ಬ್ಯಾಂಕ್ಗಳಿಗೆ ಸುಮಾರು 100 ದಶಲಕ್ಷ ವಂಚಿಸಿದ್ದಾನೆಂದು ಕ್ಯಾಲಿಫೋರ್ನಿಯಾ ಕೇಂದ್ರ ಜಿಲ್ಲೆಯ ಪ್ರಥಮ ಸಹಾಯಕ ಅಟಾರ್ನಿ ಬಿಲಾಲ್ ಎಸ್ಸಾಯಿಲ್ ಅವರು ತಿಳಿಸಿದ್ದಾರೆ.
