Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸಿಡ್ನಿ: ಆಸ್ಟ್ರೇಲಿಯನ್ ಓಪನ್‌ನಲ್ಲಿ ಪಿ.ವಿ ಸಿಂಧು ಭರ್ಜರಿ ಆರಂಭ; ಸುಲಭವಾಗಿ ಪ್ರಿ-ಕ್ವಾರ್ಟರ್ಸ್ ಪ್ರವೇಶ!

Spread the love

ಸಿಡ್ನಿ: ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ ಸಿಂಧು ಸುಲಭ ಗೆಲುವು ದಾಖಲಿಸಿ ಆಸ್ಟ್ರೇಲಿಯನ್ ಓಪನ್ ಸೂಪರ್-500 ಬ್ಯಾಡ್ಮಿಂಟನ್‌ ಟೂರ್ನಮೆಂಟ್‌ನಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪ್ರಿ-ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದರು.
ಮೂರನೇ ಶ್ರೇಯಾಂಕದ ಸಿಂಧು ಅವರಲ್ಲದೆ, ತನ್ವಿ ಶರ್ಮಾ, ಮಾಳವಿಕಾ ಬಾಸ್ಪೋಡ್, ಇಶಾರಾಣಿ ಬರುಚಾ ಹಾಗೂ ತನ್ಯಾ ಹಿರೇಮ‌ರ್ ಕೂಡ ಅಂತಿಮ-16ರ ಸುತ್ತು ಪ್ರವೇಶಿಸಿದರು. ಭಾರತದ ಆಟಗಾರರಾದ ಕಿರಣ್ ಜಾರ್ಜ್, ಮನ್ನಪಲ್ಲಿ ಹಾಗೂ ಕ್ವಾಲಿಫೈಯರ್ ಸನೀತ್ ದಯಾನಂದ್ ಮೊದಲ ಸುತ್ತಿನಲ್ಲಿ ಸೋತು ನಿರ್ಗಮಿಸಿದರು.
ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಸಿಂಧು ಕೇವಲ 32 ನಿಮಿಷಗಳ ಹಣಾಹಣಿಯಲ್ಲಿ ಪೆರು ಆಟಗಾರ್ತಿ ಇನೆಸ್ ಕಾಸ್ಪಿಲ್ಲೊ ಸಲಾಝರ್‌ರನ್ನು 21-13, 21-11 ಗೇಮ್‌ ಗಳ ಅಂತರದಿಂದ ಮಣಿಸಿದರು.
ಸಿಂಧು ಮುಂದಿನ ಸುತ್ತಿನಲ್ಲಿ ತಮ್ಮದೇ ದೇಶದ ಇಶಾರಾಣಿ ಅವರನ್ನು ಎದುರಿಸಲಿದ್ದಾರೆ. ರಾಣಿ ಚೀನಾದ ಹಾನ್ ಕ್ಸಿಯಾನ್‌ರನ್ನು 22-20, 10-21, 21-14 ಗೇಮ್‌ಗಳ ಅಂತರದಿಂದ ಮಣಿಸಿದರು.
17ರ ವಯಸ್ಸಿನ ತನ್ನಿ ವಿಶ್ವದ ನಂ.11ನೇ ಆಟಗಾರ್ತಿ ಚಿಯು ಪಿನ್-ಚಿಯಾನ್‌ರನ್ನು 45 ನಿಮಿಷಗಳಲ್ಲಿ 21-12, 22-20 ಗೇಮ್‌ಗಳ ಅಂತರದಿಂದ ಮಣಿಸಿದರು.
ಪುರುಷರ ಸಿಂಗಲ್ಸ್‌ನಲ್ಲಿ ಕಿರಣ್ ಜಾರ್ಜ್ ಅವರು ಮಲೇಶ್ಯದ ಜಸ್ಟಿನ್ ಹೋಹ್ ವಿರುದ್ಧ 19-21, 21-14, 15-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.
ಕ್ವಾಲಿಫೈಯ‌ರ್ ದಯಾನಂದ್ ಅವರು ಚೀನಾದ ಹು ಝಿಯಾನ್ ವಿರುದ್ಧ 8-21, 10-21 ಅಂತರದಿಂದ ಸೋತಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *