ಕುವೈತ್: ಅಮೆರಿಕ ದಾಳಿಗೆ ಇರಾನ್ ಭೀಕರ ಪ್ರತಿಕಾರ; ಕುವೈತ್, ಬಹ್ರೇನ್, ಜೋರ್ಡಾನ್ ಯುಎಸ್ ನೆಲೆಗಳ ಮೇಲೆ ಮಿಸೈಲ್ ದಾಳಿ!

ಕುವೈತ್ : ಹಾರ್ಮುಝ್ ಜಲಸಂಧಿಯಲ್ಲಿರುವ ಇರಾನಿನ ಬಂದರುಗಳು ಮತ್ತು ದ್ವೀಪಗಳ ಮೇಲೆ ಅಮೆರಿಕದ ದಾಳಿಗೆ ಪ್ರತಿಕಾರವಾಗಿ, ಬದ್ರೇನ್, ಕುವೈತ್ ಮತ್ತು ಜೋರ್ಡಾನ್ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿರುವುದಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹೇಳಿಕೊಂಡಿದೆ.
ಬಕ್ರೇನ್‌ನಲ್ಲಿರುವ ಅಮೆರಿಕದ ನೌಕಾ ನೆಲೆ ಮತ್ತು ಕುವೈತ್‌ನಲ್ಲಿರುವ ಅಲಿ ಅಲ್ ಸಲೇಮ್ ವಾಯುನೆಲೆ ಮತ್ತು ಜೋರ್ಡಾನ್‌ನ ಅಝಾಕ್‌ನಲ್ಲಿರುವ ವಾಯುನೆಲೆಯ ಮೇಲೆ ದೀರ್ಘ-ಶ್ರೇಣಿಯ ಕ್ಷಿಪಣಿ ದಾಳಿ ನಡೆಸಿರುವುದಾಗಿ IRGC ತಿಳಿಸಿದೆ.

ಇದಲ್ಲದೆ ಇರಾನ್ ವಾಯುಪ್ರದೇಶದಲ್ಲಿ ಅಮೆರಿಕದ MQ-9 ಡೋನ್ ಅನ್ನು ಹೊಡೆದುರುಳಿಸಿರುವುದಾಗಿ ಐಆರ್‌ಜಿಸಿ ಹೇಳಿದೆ.
ಅಪಾಚೆ ಹೆಲಿಕಾಪ್ಟರ್ ಉರುಳಿಸಿದ ಬೆನ್ನಲ್ಲೇ ಇರಾನ್ ಮೇಲೆ ಅಮೆರಿಕ ದಾಳಿಯನ್ನು ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಐಆರ್‌ಜಿಸಿ ದಾಳಿಯನ್ನು ನಡೆಸಿದೆ.
ಅಝಾಕ್ ಕಡೆಗೆ ಹಾರಿಸಲಾದ ಐದು ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ ಎಂದು ಜೋರ್ಡಾನ್ ಮಿಲಿಟರಿ ತಿಳಿಸಿದೆ.
ಇರಾನ್ ದಾಳಿಯಿಂದ ಬಕ್ರೇನ್, ಕುವೈತ್‌ನಲ್ಲಿ ಎಚ್ಚರಿಕೆಯ ಸೈರನ್‌ಗಳನ್ನು ನೀಡಲಾಗುತ್ತಿದೆ ಎಂದು ವರದಿಯಾಗಿದೆ.