Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಜಕಾರ್ತ: ಇಂಡೋನೇಶ್ಯ ಓಪನ್‌ನಿಂದ ಪಿ.ವಿ. ಸಿಂಧು ಔಟ್; ಅನ್ ಸೆ ಯಂಗ್ ವಿರುದ್ಧ ಮತ್ತೊಮ್ಮೆ ಸೋಲು!

Spread the love

ಜಕಾರ್ತ: ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು ಗುರುವಾರ ಇಂಡೋನೇಶ್ಯ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ. ಪ್ರಿಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರನ್ನು ವಿಶ್ವದ ನಂ. 1 ಆಟಗಾರ್ತಿ ದಕ್ಷಿಣ ಕೊರಿಯದ ಅನ್ ಸೆ ಯಂಗ್ 21-17, 21-14 ಗೇಮ್‌ ಗಳಿಂದ ಸೋಲಿಸಿದರು.
ಇದು ಆನ್ ಸೆ ಯಗ್ ವಿರುದ್ಧ ಸಿಂಧು ಎರಡು ವಾರಗಳಲ್ಲಿ ಅನುಭವಿಸಿದ ಎರಡನೇ ಸೋಲಾಗಿದೆ. ಕಳೆದ ವಾರ ಸಿಂಗಾಪುರ ಓಪನ್ ಕ್ವಾರ್ಟ‌್ರಫೈನಲ್‌ನಲ್ಲೂ ಆನ್ ಸೆ ಯಂಗ್ ವಿರುದ್ಧ ಸಿಂಧು ಸೋತಿದ್ದರು. ಗುರುವಾರ, ಕೇವಲ ಕೆಲವು ಸಂದರ್ಭಗಳಲ್ಲಿ ಮಾತ್ರ ಉತ್ತಮ ಆಟ ಪ್ರದರ್ಶಿಸಿದರು. ಈ ಸೋಲಿನೊಂದಿಗೆ, ಪ್ರಸ್ತುತ ಒಲಿಂಪಿಕ್ ಚಾಂಪಿಯನ್ ಆಗಿರುವ ಅನ್ ಸೆ ಯಂಗ್ ವಿರುದ್ಧ ಸಿಂಧು ಅವರ ಸತತ ಸೋಲಿನ ಸರಣಿ 10 ಪಂದ್ಯಗಳಿಗೆ ವಿಸ್ತರಿಸಿದೆ. ಸಿಂಧು ಇದುವರೆಗೆ ಅನ್ ವಿರುದ್ಧ ಒಂದೂ ಪಂದ್ಯವನ್ನೂ ಗೆದ್ದಿಲ್ಲ.

ಮೊದಲ ಗೇಮ್‌ನ ಮಧ್ಯಭಾಗದಲ್ಲಿ ಇಬ್ಬರ ಸ್ಕೋರ್ 10-10 ರ ಸಮಬಲದಲ್ಲಿದ್ದಾಗ ಪಂದ್ಯವು ಅತ್ಯಂತ ರೋಚಕವಾಗಿತ್ತು. ಸಿಂದು ತನ್ನ ಅತ್ಯುತ್ತಮ ಫಾರ್ಮ್‌ ಕೆಲವು ತುಣುಕುಗಳನ್ನು ಪ್ರದರ್ಶಿಸುತ್ತಾ ಕೆಲವೊಮ್ಮೆ ಕೊರಿಯದ ಆಟಗಾರ್ತಿಯನ್ನು ಒತ್ತಡಕ್ಕೆ ಸಿಲುಕಿಸುವಲ್ಲಿ ಯಶಸ್ವಿಯಾದರು.
ಕೆಲವು ಅತ್ಯುತ್ತಮ ಹಾಗೂ ಆಕ್ರಮಣಕಾರಿ ಹೊಡೆತಗಳ ಮೂಲಕ ಸಿಂಧು 15-14 ರ ಮುನ್ನಡೆ ಕಾಯ್ದುಕೊಂಡರಾದರೂ, ಅನ್ ಸೆ ಯಂಗ್ ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ತಿರುಗೇಟು ನೀಡಿ ಆ ಗೇಮನ್ನು ಗೆದ್ದುಕೊಂಡರು.
ಅದೇ ಲಯವನ್ನು ಎರಡನೇ ಗೇಮ್ ಗೂ ಕೊಂಡೊಯ್ದ ಅನ್ ಪಂದ್ಯವನ್ನು ಸುಲಭವಾಗಿ ಗೆದ್ದರು.


Spread the love
Share:

administrator

Leave a Reply

Your email address will not be published. Required fields are marked *