Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಡೆಹ್ರಾಡೂನ್: 10 ತಿಂಗಳು ಶೌಚಾಲಯದಲ್ಲೇ ಮಹಿಳೆಯ ಬಂಧನ; ಗಂಡನ ಮನೆಯವರಿಂದ ಅಮಾನುಷ ಪೈಶಾಚಿಕ ಹಲ್ಲೆ!

Spread the love

ಡೆಹ್ರಾಡೂನ್ : ಸುಮಾರು 32 ವರ್ಷ ವಯಸ್ಸಿನ ವಿವಾಹಿತ ಮಹಿಳೆಯನ್ನು 10 ತಿಂಗಳ ಕಾಲ ಶೌಚಾಲಯದಲ್ಲಿ ಕೂಡಿಹಾಕಿ ಅಮಾನುಷವಾಗಿ ಹಲ್ಲೆ ನಡೆಸಿರುವ ಪೈಶಾಚಿಕ ಘಟನೆ ಇಲ್ಲಿನ ಸೇಲಕಿ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಮಹಿಳೆಯ ಗುಪ್ತಾಂಗಕ್ಕೆ ಬಾಟಲಿ ಹಾಗೂ ದೊಣ್ಣೆಗಳಿಂದ ದಾಳಿ ಮಾಡಲಾಗಿದೆ. ಎರಡು ವರ್ಷದ ಹಿಂದಷ್ಟೇ ದೆಹಲಿ ಕೇಂದ್ರೀಯ ವಿದ್ಯಾಲಯದ ಶಿಕ್ಷಕನ ಜತೆ ಮಹಿಳೆಯ ವಿವಾಹ ನಡೆದಿತ್ತು.
ಸಂತ್ರಸ್ತೆಯ ತಂದೆ, ಭಾರತೀಯ ಸೇನೆಯ ನಿವೃತ್ತ ಹವಾಲ್ದಾರ್ ಸೇಲಕಿ ಪೊಲೀಸ್ ಠಾಣೆಯಲ್ಲಿ ಸೋಮವಾರ, ಮಗಳನ್ನು ಗಂಡನ ಮನೆಯಿಂದ ರಕ್ಷಿಸಿ, ಬಳಿಕ ದೂರು ನೀಡಿದ ಹಿನ್ನೆಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

“ಕಳೆದ ಫೆಬ್ರವರಿಯಲ್ಲಿ ಪುತ್ರಿ ಅವಳಿ ಮಕ್ಕಳಿಗೆ ಜನ್ಮನೀಡಿದ ದಿನದಿಂದಲೇ ಈ ಅಮಾನವೀಯ ದಾಳಿ ನಡೆಯುತ್ತಿದೆ” ಎಂದು ತಂದೆ ದೂರಿನಲ್ಲಿ ವಿವರಿಸಿದ್ದಾರೆ. “2024ರಲ್ಲಿ ಮಗಳನ್ನು ಕೇಂದ್ರೀಯ ವಿದ್ಯಾಲಯದ ಶಿಕ್ಷಕನೊಬ್ಬನಿಗೆ ವಿವಾಹ ಮಾಡಿಕೊಡಲಾಗಿತ್ತು. ಆತನ ಪೋಷಕರಿಗೆ ಆತ ಒಬ್ಬನೇ ಮಗ. ಮಧ್ಯವರ್ತಿಯೊಬ್ಬರ ಮೂಲಕ ಈ ವಿವಾಹ ಸಂಬಂಧ ನೆರವೇರಿಸಲಾಗಿತ್ತು. ಆರಂಭದಲ್ಲಿ ಕುಟುಂಬದವರನ್ನು ನೋಡಿದಾಗ ಒಳ್ಳೆಯವರು ಎನಿಸಿತ್ತು. ಆದರೆ ವಿವಾಹದ ಕೆಲವೇ ತಿಂಗಳ ಬಳಿಕ ಅತ್ತೆ ಕ್ಷುಲ್ಲಕ ಕಾರಣಕ್ಕೆ ಕಿರುಕುಳ ನೀಡಲು ಆರಂಭಿಸಿದಾಗ ಈ ಭಾವನೆ ಛಿದ್ರವಾಯಿತು” ಎಂದು ತಂದೆ ದೂರಿನಲ್ಲಿ ವಿವರಿಸಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ಗಂಡುಮಗು ಸೇರಿದಂತೆ ಅವಳಿ ಮಕ್ಕಳಿಗೆ ಜನ್ಮನೀಡಿದ ಬಳಿಕ ಚಿತ್ರಹಿಂಸೆ ಹೆಚ್ಚಿತು ಎಂದು ಅವರು ದೂರಿದ್ದಾರೆ.
“ಗರ್ಭಿಣಿಯಾಗಿದ್ದ ವೇಳೆ ಪುತ್ರಿ ನಮ್ಮ ಜತೆಗಿದ್ದಳು. ಮಕ್ಕಳಿಗೆ ಜನ್ಮನೀಡಿದ ಬಳಿಕ ಆಕೆಯ ಅತ್ತೆ-ಮಾವ ಒಮ್ಮೆ ಮಾತ್ರ ಬಂದಿದ್ದರು. ಅವಳಿ ಮಕ್ಕಳನ್ನು ತಮಗೆ ಹಸ್ತಾಂತರಿಸಬೇಕು ಎಂಬ ಷರತ್ತು ವಿಧಿಸಿದರು. ಕೆಲ ದಿನಗಳ ಬಳಿಕ ತಾಯಿ-ಮಕ್ಕಳನ್ನು ಗಂಡನ ಮನೆಗೆ ಕಳುಹಿಸಲಾಯಿತು. ಅಲ್ಲಿಗೆ ತಲುಪಿದ ಬಳಿಕ ಮಕ್ಕಳನ್ನು ತಾಯಿಯಿಂದ ಬೇರ್ಪಡಿಸಲಾಯಿತು ಹಾಗೂ ಹಾಲುಣಿಸಲು ಕೂಡಾ ಅವಕಾಶ ನೀಡಲಿಲ್ಲ. 2025ರ ಜುಲೈನಿಂದ 2026ರ ಮೇ ತಿಂಗಳವರೆಗೆ ಶೌಚಾಲಯದಲ್ಲಿ ಭಯಾನಕ ವಾತಾವರಣದಲ್ಲಿ ಕೂಡಿಹಾಕಲಾಗಿತ್ತು” ಎಂದು ಹೇಳಿದ್ದಾರೆ. ಈ ಬಂಧನದ ಅವಧಿಯಲ್ಲಿ ಕೇವಲ ಅನ್ನ, ಈರುಳ್ಳಿ, ಹಸಿಮೆಣಸು ಮತ್ತು ಉಪ್ಪು ಮಾತ್ರ ನೀಡಲಾಗುತ್ತಿತ್ತು ಎಂದು ಸಂತ್ರಸ್ತೆಯ ತಾಯಿ ವಿವರಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *