Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮುಂಬೈ: ಜನಸಾಮಾನ್ಯರಿಗೆ ಮತ್ತೊಂದು ಶಾಕ್; ಇಂದಿನಿಂದಲೇ ಸಿಎನ್‌ಜಿ ಮತ್ತು ಪಿಎನ್‌ಜಿ ದರ ಭಾರಿ ಏರಿಕೆ!

Spread the love

ಮುಂಬೈ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಬಿಸಿಯಿಂದ ಕಂಗಾಲಾಗಿದ್ದ ಜನಸಾಮಾನ್ಯರಿಗೆ ಇದೀಗ CNG ಮತ್ತು ಪೈಪ್ಡ್ ನೈಸರ್ಗಿಕ ಅನಿಲ (PNG) ದರ ಏರಿಕೆಯ ಮತ್ತೊಂದು ಬರೆ ಎಳೆಯಲಾಗಿದೆ. ಪ್ರಮುಖ ಸರ್ಕಾರಿ ಅನಿಲ ವಿತರಕ ಸಂಸ್ಥೆಯಾದ ಮಹಾನಗರ ಗ್ಯಾಸ್ ಲಿಮಿಟೆಡ್ (MGL), ಮುಂಬೈ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂದಿನಿಂದಲೇ ಜಾರಿಗೆ ಬರುವಂತೆ ಹೊಸ ಪರಿಷ್ಕೃತ ದರಗಳನ್ನು ಘೋಷಿಸಿದೆ.

ಹೊಸ ಪರಿಷ್ಕೃತ ದರದ ಅನ್ವಯ, ಸಿಎನ್‌ಜಿ ಬೆಲೆಯನ್ನು ಪ್ರತಿ ಕೆಜಿಗೆ 2 ರೂಪಾಯಿಗಳಷ್ಟು ಹೆಚ್ಚಳ ಮಾಡಲಾಗಿದ್ದು, ಮುಂಬೈನಲ್ಲಿ ಈಗ ಸಿಎನ್‌ಜಿ ದರ ಪ್ರತಿ ಕೆಜಿಗೆ 86 ರೂಪಾಯಿಗಳಿಗೆ ತಲುಪಿದೆ. ಇಷ್ಟೇ ಅಲ್ಲದೆ, ಗೃಹ ಬಳಕೆಯ ಪಿಎನ್‌ಜಿ (PNG) ದರವನ್ನು ಕೂಡ ಪ್ರತಿ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್‌ಗೆ (SCM) 50 ಪೈಸೆಯಷ್ಟು ಹೆಚ್ಚಿಸಲಾಗಿದೆ. ಈ ಹೊಸ ದರಗಳು ಮುಂಬೈ ಸೇರಿದಂತೆ ಥಾಣೆ, ನವಿ ಮುಂಬೈ ಮತ್ತು ಮುಂಬೈ ಮೆಟ್ರೋಪಾಲಿಟನ್ ಪ್ರದೇಶದ (MMR) ಇತರ ಭಾಗಗಳಿಗೆ ಅನ್ವಯವಾಗಲಿವೆ.

ಮುಂಬೈ ಮಹಾನಗರ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದಿರುವ ಎರಡನೇ ದರ ಏರಿಕೆ ಇದಾಗಿದೆ. ಇದಕ್ಕೂ ಮುನ್ನ ಮೇ 14 ರಂದು ಪ್ರತಿ ಕೆಜಿಗೆ 2 ರೂಪಾಯಿ ಹೆಚ್ಚಿಸಲಾಗಿತ್ತು. ಕೇವಲ ಮುಂಬೈ ಮಾತ್ರವಲ್ಲದೆ, ಇತ್ತೀಚೆಗಷ್ಟೇ ಅಂದರೆ ಮೇ 26 ರಂದು ದೇಶದ ರಾಜಧಾನಿ ದೆಹಲಿಯಲ್ಲೂ ಸಿಎನ್‌ಜಿ ಬೆಲೆಯನ್ನು ಪ್ರತಿ ಕೆಜಿಗೆ 2 ರೂಪಾಯಿಗಳಷ್ಟು ಏರಿಕೆ ಮಾಡಲಾಗಿತ್ತು. ಮಹಾನಗರ ಗ್ಯಾಸ್ ಲಿಮಿಟೆಡ್ ಸಂಸ್ಥೆಯು ಮಹಾರಾಷ್ಟ್ರದ ಕಲ್ಯಾಣ್, ರಾಯಗಢ, ರತ್ನಗಿರಿ, ಲಾತೂರ್, ಉಸ್ಮಾನಾಬಾದ್ ಮಾತ್ರವಲ್ಲದೆ ಕರ್ನಾಟಕದ ಚಿತ್ರದುರ್ಗ ಮತ್ತು ದಾವಣಗೆರೆ ನಗರಗಳಿಗೂ ಅನಿಲ ಪೂರೈಕೆ ಮಾಡುತ್ತದೆ.
ಸಿಎನ್‌ಜಿ ಬೆಲೆ ಏರಿಕೆಯು ಪ್ರಮುಖವಾಗಿ ಆಟೋ, ಟ್ಯಾಕ್ಸಿ, ಶಾಲಾ ವ್ಯಾನ್‌ಗಳು ಹಾಗೂ ಖಾಸಗಿ ಸಿಎನ್‌ಜಿ ಕಾರು ಚಾಲಕರಿಗೆ ಭಾರಿ ಆರ್ಥಿಕ ಹೊರೆಯಾಗಲಿದೆ. ಈ ದರ ಏರಿಕೆಯಿಂದಾಗಿ ಮುಂಬರುವ ದಿನಗಳಲ್ಲಿ ಸಾರ್ವಜನಿಕ ಪ್ರಯಾಣ ದರ ಹಾಗೂ ಅಗತ್ಯ ವಸ್ತುಗಳ ಸರಕು ಸಾಗಣೆ ವೆಚ್ಚವೂ ಕೂಡ ದುಬಾರಿಯಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಆಟೋ ಮತ್ತು ಟ್ಯಾಕ್ಸಿ ಚಾಲಕರ ಒಕ್ಕೂಟಗಳು ಕಳವಳ ವ್ಯಕ್ತಪಡಿಸಿವೆ.


Spread the love
Share:

administrator

Leave a Reply

Your email address will not be published. Required fields are marked *