20 ವರ್ಷಗಳ ಸೌದಿ ಜೈಲು ವಾಸದಿಂದ ಅಬ್ದುಲ್ ರಹೀಮ್ ಮುಕ್ತಿ; ಕೇರಳಕ್ಕೆ ಮರಳಿದ ಭಾರತೀಯ ಪ್ರಜೆ!

ರಿಯಾದ್: ಸೌದಿ ಅರೇಬಿಯಾದ ಜೈಲಿನಲ್ಲಿ ಕಳೆದ ಎರಡು ದಶಕಗಳಿಂದ ಶಿಕ್ಷೆ ಅನುಭವಿಸುತ್ತಿದ್ದ ಕೇರಳಂನ ಕೋಝಿಕ್ಕೋಡ್ ಜಿಲ್ಲೆಯ ಕೊಡಂಪುಳ ನಿವಾಸಿ ಅಬ್ದುಲ್ ರಹೀಮ್ ಬಿಡುಗಡೆಯಾಗಿದ್ದು, ಕೇರಳಂಗೆ ಪ್ರಯಾಣವನ್ನು ಬೆಳೆಸಿದ್ದಾರೆ.
ರಹೀಮ್ ಅವರಿಗೆ ವಿಧಿಸಲಾಗಿದ್ದ 20 ವರ್ಷಗಳ ಜೈಲು ಶಿಕ್ಷೆ ಮೇ 19ರ ಮಧ್ಯರಾತ್ರಿ ಅಂತ್ಯಗೊಂಡಿತ್ತು. ಈದ್ ರಜೆಯ ಹಿನ್ನೆಲೆ ಆಡಳಿತಾತ್ಮಕ ಪ್ರಕ್ರಿಯೆಗಳಲ್ಲಿ ವಿಳಂಬವಾಗಿತ್ತು. ಆದರೆ,
ರಹೀಮ್ ಬಿಡುಗಡೆಗೆ ಸಂಬಂಧಿಸಿದ ಅಧಿಕೃತ ಆದೇಶಕ್ಕೆ ಸೌದಿ ಅಧಿಕಾರಿಗಳು ಇತ್ತೀಚೆಗೆ ಸಹಿ ಹಾಕಿದ್ದರು.
2006ರಲ್ಲಿ ತಮ್ಮ ಉದ್ಯೋಗದಾತರ 14 ವರ್ಷದ ವಿಶೇಷ ಚೇತನ ಮಗನ ಸಾವಿನ ಪ್ರಕರಣದಲ್ಲಿ ರಹೀಮ್ ಬಂಧಿತರಾಗಿದ್ದರು. ಮಗುವಿನ ಆರೈಕೆಯ ಜವಾಬ್ದಾರಿ ಅವರಿಗೇ ನೀಡಲಾಗಿತ್ತು. ಈ ಸಾವು ಅಪಘಾತದಿಂದ
ಸಂಭವಿಸಿದೆ ಎಂದು ರಹೀಮ್ ವಾದಿಸಿದ್ದರೂ, ಉದ್ಯೋಗದಾತರ ವಾದಕ್ಕೆ ನ್ಯಾಯಾಂಗದಲ್ಲಿ ಹೆಚ್ಚಿನ ಮಾನ್ಯತೆ ದೊರಕಿತ್ತು.
ಈ ಪ್ರಕರಣದಲ್ಲಿ 2012ರಲ್ಲಿ ಸೌದಿ ನ್ಯಾಯಾಲಯವು ಅವರಿಗೆ ಮರಣದಂಡನೆ ವಿಧಿಸಿತ್ತು. ಬಳಿಕ ಈ ಸಾವು ಉದ್ದೇಶಪೂರ್ವಕ ಕೃತ್ಯವಲ್ಲ, ಅಪಘಾತದ ಪರಿಣಾಮ ಎಂಬ ಅಂಶಕ್ಕೂ ನ್ಯಾಯಾಂಗದಲ್ಲಿ ಉಲ್ಲೇಖ
ಸಿಕ್ಕಿತ್ತು.
2024ರಲ್ಲಿ ಪ್ರಕರಣದಲ್ಲಿ ಮಹತ್ವದ ತಿರುವು ಕಂಡುಬಂದಿತ್ತು. ಕೇರಳದ ವಲಸೆ ಸಮುದಾಯದ ನೇತೃತ್ವದಲ್ಲಿ ನಡೆದ ಜಾಗತಿಕ ಕ್ರೌಡಂಡಿಂಗ್ ಅಭಿಯಾನದಲ್ಲಿ ಸಂತ್ರಸ್ತ ಕುಟುಂಬ
ಬೇಡಿಕೆ ಇಟ್ಟಿದ್ದ 15 ಮಿಲಿಯನ್ ಸೌದಿ ರಿಯಾಲ್ ಗಳಷ್ಟು ದಿಯಾ (ರಕ್ತದ ಹಣ) ಸಂಗ್ರಹಿಸಲಾಗಿತ್ತು. ಭಾರತೀಯ ಮೌಲ್ಯದಲ್ಲಿ ಇದು 34 ಕೋಟಿ ರೂಪಾಯಿಗೂ ಅಧಿಕವಾಗಿತ್ತು
ಪರಿಹಾರದ ಮೊತ್ತ ಸ್ವೀಕರಿಸಿದ ಬಳಿಕ ಸಂತ್ರಸ್ತರ ಕುಟುಂಬ ಮರಣದಂಡನೆ ರದ್ದುಪಡಿಸಲು ಒಪ್ಪಿಕೊಂಡಿತ್ತು. ಅದರಂತೆ ಜುಲೈ 2024ರಲ್ಲಿ ಸೌದಿ ನ್ಯಾಯಾಲಯವು ಮರಣದಂಡನೆಯನ್ನು ರದ್ದುಗೊಳಿಸಿತ್ತು.
