Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕಾಮುಕ ಜಿಎಂ ಮುಖಕ್ಕೆ ಮಸಿ ಬಳಿದು ಥಳಿಸಿದ ಮಹಿಳೆ; ಶೋರೂಮ್‌ನಲ್ಲಿ ಹೈಡ್ರಾಮಾ!

Spread the love

ಮಾರುತಿ ಸುಜುಕಿ ಶೋರೂಮ್‌ನ ಮಹಿಳಾ ಉದ್ಯೋಗಿಯೊಬ್ಬರು ತಮಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಜನರಲ್ ಮ್ಯಾನೇಜರ್ (GM) ಮುಖಕ್ಕೆ ಮಸಿ ಬಳಿದು, ಥಳಿಸಿರುವ ಘಟನೆ ಛತ್ತೀಸ್‌ಗಢದ ದುರ್ಗ್ ಜಿಲ್ಲೆಯ ಭಿಲಾಯಿಯಲ್ಲಿ ನಡೆದಿದೆ. ಜಿಎಂ ಅಂಕಿತ್ ಆನಂದ್ ತಮಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಾ, ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ.
ವಿಡಿಯೋದಲ್ಲಿ ಏನಿದೆ?
‘ದೈನಿಕ್ ಭಾಸ್ಕರ್’ ವರದಿ ಪ್ರಕಾರ, ಭಿಲಾಯಿಯ ಚೌಹಾಣ್ ಆಟೋಮೊಬೈಲ್ಸ್‌ನಲ್ಲಿ ಮೇ 22 ರಂದು ಈ ಘಟನೆ ನಡೆದಿದೆ. ಮಹಿಳಾ ಉದ್ಯೋಗಿ ನೀಡಿದ ದೂರಿನ ಮೇರೆಗೆ ಪೊಲೀಸ್ ಅಧಿಕಾರಿಯೊಬ್ಬರು ಶೋರೂಮ್‌ಗೆ ಆಗಮಿಸಿದ ಬೆನ್ನಲ್ಲೇ ಈ ಹೈಡ್ರಾಮಾ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಪೊಲೀಸ್ ಅಧಿಕಾರಿ ಮತ್ತು ಜಿಎಂ ಅಂಕಿತ್ ಆನಂದ್ ಒಟ್ಟಿಗೆ ಶೋರೂಮ್ ಒಳಗೆ ಪ್ರವೇಶಿಸುತ್ತಿದ್ದಂತೆ, ಅಲ್ಲಿಯೇ ಕಾಯುತ್ತಿದ್ದ ಸಂತ್ರಸ್ತ ಮಹಿಳೆ ತಕ್ಷಣವೇ ಜಿಎಂ ಮುಖಕ್ಕೆ ಮಸಿ ಎರೆದಿದ್ದಾರೆ. ಅಲ್ಲದೆ, ಮಧ್ಯಪ್ರವೇಶಿಸಲು ಯತ್ನಿಸಿದ ಪೊಲೀಸರ ಸಮ್ಮುಖದಲ್ಲೇ ಜಿಎಂಗೆ ತರಾಟೆಗೆ ತೆಗೆದುಕೊಂಡು ಸರಣಿ ಪೆಟ್ಟುಗಳನ್ನು ನೀಡಿದ್ದಾರೆ.
ಇತರ ಮಹಿಳಾ ಉದ್ಯೋಗಿಗಳಿಂದಲೂ ದೂರು:
ಭಿಲಾಯಿ ನಗರದ ಸಿಎಸ್‌ಪಿ ಸತ್ಯಪ್ರಕಾಶ್ ತಿವಾರಿ ಅವರು ನೀಡಿರುವ ಮಾಹಿತಿಯ ಪ್ರಕಾರ, ಸಂತ್ರಸ್ತ ಉದ್ಯೋಗಿ ಅಮೃತಾ ಸಿಂಗ್ ಅವರು ಚೌಹಾಣ್ ಆಟೋಮೊಬೈಲ್ಸ್‌ನ ಜಿಎಂ ಅಂಕಿತ್ ಆನಂದ್ ವಿರುದ್ಧ ಲಿಖಿತ ದೂರನ್ನು ದಾಖಲಿಸಿದ್ದಾರೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ, ಶೋರೂಮ್‌ನ ಮತ್ತಿಬ್ಬರು-ಮೂವರು ಮಹಿಳಾ ಉದ್ಯೋಗಿಗಳು ಕೂಡ ಮುಂದೆ ಬಂದು ಜಿಎಂ ವಿರುದ್ಧ ಲೈಂಗಿಕ ಕಿರುಕುಳದ ಗಂಭೀರ ಆರೋಪಗಳನ್ನು ಮಾಡಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.


Spread the love
Share:

administrator

Leave a Reply

Your email address will not be published. Required fields are marked *