Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪಠಾಣ್‌ಕೋಟ್: ಪಾಕ್ ಬೇಹುಗಾರಿಕೆ ಜಾಲದ ಕಿಂಗ್‌ಪಿನ್ ಬಲ್ಕಿತ್ ಸಿಂಗ್ ಬಂಧನ; ದುಬೈ ಲಿಂಕ್ ಪತ್ತೆ ಹಚ್ಚಿದ ಪೊಲೀಸರು!

Spread the love

ಹೊಸದಿಲ್ಲಿ: ಪಂಜಾಬ್‌ನ ಪಠಾಣ್ ಕೋಟ್ ಪೊಲೀಸರು ಶಂಕಿತ ಬೇಹುಗಾರಿಕೆ ಜಾಲವನ್ನು ಭೇದಿಸಿದ್ದಾರೆ. ಭಾರತೀಯ ಸೇನೆ ಮತ್ತು ಅರೆಸೈನಿಕ ಪಡೆಗಳ ಚಲನವಲನಗಳ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನದೊಂದಿಗೆ ಹಂಚಿಕೊಳ್ಳುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಚಕ್ ಧಾರಿವಾಲ್ ಗ್ರಾಮದ ನಿವಾಸಿ ಬಲ್ಟಿತ್ ಸಿಂಗ್ ಅಲಿಯಾಸ್ ಬಿಟ್ಟು ಬಂಧಿತ ಆರೋಪಿ. ಈತ ಸೇನೆ ಮತ್ತು ಅರೆಸೈನಿಕ ಪಡೆಗಳ ಚಲನವಲನಗಳ ಮೇಲೆ ಕಣ್ಣಿಡಲು ರಾಷ್ಟ್ರೀಯ ಹೆದ್ದಾರಿ -44ರ ಪಠಾಣ್ ಕೋಟ್-ಜಮ್ಮು ಪ್ರದೇಶದ ಸೇತುವೆಯ ಬಳಿಯ ಅಂಗಡಿಯಲ್ಲಿ ಸಿಸಿಟಿವಿ ಅಳವಡಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಬಲ್ಕಿತ್ ಸಿಂಗ್‌ಗೆ ದುಬೈನಲ್ಲಿರುವ ಅಪರಿಚಿತ ವ್ಯಕ್ತಿಯಿಂದ ನಿರ್ದೇಶನಗಳು ಬರುತ್ತಿದ್ದವು. ಅವನಿಗೆ 40,000ರೂ.ಗಳನ್ನು ನೀಡಲಾಗಿತ್ತು ಎಂದು ವರದಿಯು ತಿಳಿಸಿದೆ. ಬಂಧಿತನಿಂದ ಸಿಸಿಟಿವಿ ಕ್ಯಾಮೆರಾ ಜೊತೆಗೆ ಇಂಟರ್ನೆಟ್ ವೈಫೈ ರೂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಪಠಾಣ್ ಕೋಟ್-ಜಮ್ಮು ಹೆದ್ದಾರಿಯಲ್ಲಿ ಅನುಮಾನಾಸ್ಪದ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಗುಪ್ತಚರ ಮಾಹಿತಿ ಹಿನ್ನೆಲೆ ಕಾರ್ಯಾಚರಣೆ ನಡೆಸಿದ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಲ್ಟಿತ್ ಸಿಂಗ್ ಜೊತೆಗೆ, ವಿಕ್ರಮಿತ್ ಸಿಂಗ್ ಅಲಿಯಾಸ್ ವಿಕ್ಯಾ ಬಲ್ವಿಂದರ್ ಸಿಂಗ್ ಅಲಿಯಾಸ್ ವಿಕ್ಕಿ ಮತ್ತು ತರಣೀತ್ ಸಿಂಗ್ ಅಲಿಯಾಸ್ ತನ್ನು ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳು ಕ್ರಿಮಿನಲ್ ಮತ್ತು ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಈ ಕುರಿತು ಹಿರಿಯ ಅಧಿಕಾರಿಗಳಿಗೆ ವಿವರವಾದ ವರದಿಯನ್ನು ನೀಡಲಾಗಿದೆ. ಬೇಹುಗಾರಿಕೆಯ ಹಿಂದಿನ ಹಣಕಾಸಿನ ಮೂಲವನ್ನು ಪತ್ತೆಹಚ್ಚಲು ಹೆಚ್ಚಿನ ತನಿಖೆ ನಡೆಯುತ್ತಿದೆ. ಉಳಿದ ಆರೋಪಿಗಳನ್ನು ಬಂಧಿಸಲು ದಾಳಿಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *