Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನವದೆಹಲಿ: ಭಾರತದಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ ಎಕ್ಸ್ ಖಾತೆ ಬ್ಲಾಕ್; ಇದರ ಹಿಂದಿರುವ ಮಾಸ್ಟರ್ ಮೈಂಡ್ ಯಾರು?

Spread the love

ನವದೆಹಲಿ: ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ ಹೆಸರಿನ ಎಕ್ಸ್ ಖಾತೆಯನ್ನು ಭಾರತದಲ್ಲಿ ತಡೆಹಿಡಿಯಲಾಗಿದೆ. ಎಕ್ಸ್‌ನಲ್ಲಿ CJP_2029 ಯೂಸರ್‌ನೇಮ್ ಹೊಂದಿದ್ದ ಖಾತೆ ತೆರೆಯಲು ಪ್ರಯತ್ನಿಸಿದಾಗ, “Account Withheld in India in response to a legal demand” ಎಂಬ ಸಂದೇಶ ಕಾಣಿಸುತ್ತಿದೆ.ಏನಿದು ‘ಕಾಕ್ರೋಚ್ ಜನತಾ ಪಾರ್ಟಿ’? : ಹಿರಿಯ ವಕೀಲರ ಪದನಾಮಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠ, ಉದ್ಯೋಗವಿಲ್ಲದ ಕೆಲ ಯುವಕರು ವ್ಯವಸ್ಥೆಯ ವಿರುದ್ಧ ಜಿರಳೆಗಳಂತೆ ದಾಳಿ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿತ್ತು. ಮಾಧ್ಯಮ, ಸಾಮಾಜಿಕ ಜಾಲತಾಣ ಮತ್ತು ಆರ್‌ಟಿಐ ಕಾರ್ಯಕರ್ತರ ಬಗ್ಗೆ ಮಾಡಿದ ಈ ಟೀಕೆಯ ನಂತರ ‘ಕಾಕ್ರೋಚ್ ಜನತಾ ಪಾರ್ಟಿ’ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭವಾಗಿತ್ತು.ಯುವಕರಿಂದ ಹೊಸ ರಾಜಕೀಯ ವ್ಯಂಗ್ಯ ಅಭಿಯಾನ : ಅಭಿಜೀತ್ ದಿಪ್ಕೆ ಎಂಬ ಯುವಕ ಈ ಹೆಸರಿನಲ್ಲಿ ಎಕ್ಸ್ ಖಾತೆ ಮತ್ತು ವೆಬ್‌ಸೈಟ್ ಆರಂಭಿಸಿ ರಾಜಕೀಯ ವ್ಯವಸ್ಥೆಯನ್ನು ಪ್ರಶ್ನಿಸುವ ಪೋಸ್ಟ್‌ಗಳನ್ನು ಹಂಚಿಕೊಳ್ಳಲು ಆರಂಭಿಸಿದ್ದರು. ಕೆಲವೇ ದಿನಗಳಲ್ಲಿ ಈ ಖಾತೆಗೆ ದೊಡ್ಡ ಮಟ್ಟದ ಜನಮೆಚ್ಚುಗೆ ದೊರೆತಿದ್ದು, ವಿಶೇಷವಾಗಿ Gen Z ಯುವಕರಿಂದ ಬೆಂಬಲ ವ್ಯಕ್ತವಾಗಿತ್ತು.

ಅಭಿಜಿತ್ ದಿಪ್ಕೆ ಯಾರು? : ಪತ್ರಿಕೋದ್ಯಮ ಪದವಿ ಪಡೆದಿರುವ ಅಭಿಜೀತ್ ದಿಪ್ಕೆ ಪ್ರಸ್ತುತ ಅಮೆರಿಕದ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಸಂಪರ್ಕ ವಿಷಯದಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿದ್ದಾರೆ. ಇವರು ಈ ಹಿಂದೆ ಆಮ್ ಆದ್ಮಿ ಪಕ್ಷ (AAP) ಡಿಜಿಟಲ್ ಮತ್ತು ಸೋಶಿಯಲ್ ಮೀಡಿಯಾ ತಂಡದಲ್ಲೂ ಕೆಲಸ ಮಾಡಿದ್ದರು ಎಂಬ ಮಾಹಿತಿ ಹೊರಬಂದಿದೆ.ಅಭಿಜೀತ್ ದಿಪ್ಕೆ ಈ ಹಿಂದೆ ಆಪ್ ಪಕ್ಷದೊಂದಿಗೆ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ, ಬಿಜೆಪಿ ಬೆಂಬಲಿತ ಖಾತೆಗಳು ಈ ವಿಚಾರವನ್ನು ಎತ್ತಿಹಿಡಿದು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿವೆ. ಆದರೆ ದಿಪ್ಕೆ ಅವರು ಬಿಜೆಪಿ ಮಾತ್ರವಲ್ಲ ಕಾಂಗ್ರೆಸ್ ವಿರುದ್ಧವೂ ಟೀಕೆಗಳನ್ನು ಮಾಡಿದ್ದರು ಎನ್ನಲಾಗಿದೆ.ಖಾತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಫಾಲೋವರ್ಸ್ ಹೆಚ್ಚಾಗಿದ್ದು, ಪಾಕಿಸ್ತಾನ, ಬಾಂಗ್ಲಾದೇಶ, ಟರ್ಕಿ ಮತ್ತು ಸೌದಿ ಅರೇಬಿಯಾದ ಬಳಕೆದಾರರೂ ಈ ಖಾತೆಯನ್ನು ಅನುಸರಿಸುತ್ತಿರುವುದು ಗಮನಸೆಳೆದಿದೆ.ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ : ‘Cockroach Janata Party’ ಖಾತೆ ತಡೆಹಿಡಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಪರ ಮತ್ತು ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕೆಲವರು ಇದನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆ ಎಂದು ಹೇಳುತ್ತಿದ್ದರೆ, ಇನ್ನು ಕೆಲವರು ರಾಜಕೀಯ ಉದ್ದೇಶದ ಪ್ರಚಾರ ಎಂದು ಟೀಕಿಸುತ್ತಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *