ಅರೆಬರೆ ಬಟ್ಟೆ ತೊಟ್ಟು ರೀಲ್ಸ್ ಮಾಡ್ತಿದ್ದ ಹೆಂಡತಿ ಪತಿಗೆ ‘ಸತ್ತಂತೆ’: ಹರಿದ್ವಾರದಲ್ಲಿ ಪಿಂಡ ಬಿಟ್ಟ ಗಂಡ! ವಿಡಿಯೋ ವೈರಲ್!

ಹರಿದ್ವಾರ: ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ರೀಲ್ಸ್ ಹುಚ್ಚು ಸಂಸಾರಗಳ ಮಧ್ಯೆ ಎಂತಹ ಬಿರುಕು ಮೂಡಿಸುತ್ತಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ತನ್ನ ಮಾತನ್ನು ಕೇಳದೆ ಸದಾ ಅರೆಬರೆ ಬಟ್ಟೆ ತೊಟ್ಟು ರೀಲ್ಸ್ ಮಾಡುವುದರಲ್ಲಿ ಮಗ್ನಳಾಗಿದ್ದ ಪತ್ನಿಯ ವರ್ತನೆಯಿಂದ ರೋಸಿಹೋದ ವ್ಯಕ್ತಿಯೊಬ್ಬ, ಆಕೆ ಬದುಕಿದ್ದಾಗಲೇ ಹರಿದ್ವಾರದಲ್ಲಿ ಆಕೆಗೆ ‘ಪಿಂಡದಾನ’ ಮಾಡಿದ ಆಘಾತಕಾರಿ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಏನಿದು ಘಟನೆ?
ವರದಿಗಳ ಪ್ರಕಾರ, ರೀಲ್ಸ್ ಸ್ಟಾರ್ ಆಗಿರುವ ಹೇಮಾ ಚೌಧರಿ(@hemachoudhary986) ಎಂಬುವವರ ಪತಿಯೇ ಈ ವಿಚಿತ್ರ ಸಾಹಸಕ್ಕೆ ಕೈಹಾಕಿದವರು. ಹೇಮಾ ಅವರು ಸದಾ ಕಾಲ ಸೋಶಿಯಲ್ ಮೀಡಿಯಾದಲ್ಲಿ ಕಂಟೆಂಟ್ ಕ್ರಿಯೇಟ್ ಮಾಡುವುದು ಮತ್ತು ರೀಲ್ಸ್ ಮಾಡುವುದರಲ್ಲಿ ಬ್ಯುಸಿಯಾಗಿರುತ್ತಿದ್ದಳು. ಈ ವಿಚಾರವಾಗಿ ದಂಪತಿಗಳ ನಡುವೆ ಸಾಕಷ್ಟು ಬಾರಿ ಜಗಳ ನಡೆದಿತ್ತು. “ರೀಲ್ಸ್ ಮಾಡುವುದನ್ನು ನಿಲ್ಲಿಸು, ಸಂಸಾರದ ಕಡೆ ಗಮನ ಕೊಡು” ಎಂಬ ಪತಿಯ ಮನವಿಗೆ ಹೇಮಾ ಕಿವಿಗೊಟ್ಟಿರಲಿಲ್ಲ ಎನ್ನಲಾಗಿದೆ.ಬದುಕಿರುವಾಗಲೇ ಪತ್ನಿಗೆ ಅಂತ್ಯಸಂಸ್ಕಾರದ ವಿಧಿವಿಧಾನ:
ಅರೆಬರೆ ಬಟ್ಟೆತೊಟ್ಟು ರೀಲ್ಸ್ ಮಾಡುತ್ತಿದ್ದ ಪತ್ನಿಯಿಂದ ಅಸಮಾಧಾನಗೊಂಡ ಪತಿ ಆಯ್ದುಕೊಂಡ ದಾರಿ ಹರಿದ್ವಾರ. ಅಲ್ಲಿಗೆ ತೆರಳಿದ ಆತ, ಸಾಮಾನ್ಯವಾಗಿ ಸತ್ತವರಿಗೆ ಮಾಡುವ ‘ಪಿಂಡದಾನ’ ವಿಧಿವಿಧಾನವನ್ನು ತನ್ನ ಪತ್ನಿಯ ಹೆಸರಿನಲ್ಲಿ ನೆರವೇರಿಸಿದ್ದಾರೆ. ವಿಶೇಷವೆಂದರೆ, ಪತ್ನಿ ರೀಲ್ಸ್ ಮಾಡುವುದನ್ನು ವಿರೋಧಿಸುತ್ತಿದ್ದ ಪತಿ, ತಾನು ಮಾಡಿದ ಈ ಪಿಂಡದಾನದ ಇಡೀ ಪ್ರಕ್ರಿಯೆಯನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. “ನನ್ನ ಪತ್ನಿ ಈಗ ನನಗೆ ಸತ್ತಂತೆ” ಎಂಬ ಸಂದೇಶವನ್ನು ರವಾನಿಸಲು ಆತ ಈ ರೀತಿ ಮಾಡಿದ್ದಾರೆ ಎನ್ನಲಾಗುತ್ತಿದೆ.
