Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸಿಎಂ ವಿಜಯ್ ಯು-ಟರ್ನ್: ಜ್ಯೋತಿಷಿ ನೇಮಕಾತಿ ಆದೇಶ ಒಂದೇ ದಿನದಲ್ಲಿ ವಾಪಸ್

Spread the love

ಚೆನ್ನೈ: ಜ್ಯೋತಿಷಿ ರಿಕ್ಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ತಮ್ಮ ವಿಶೇಷ ಕರ್ತವ್ಯಾಧಿಕಾರಿಯನ್ನಾಗಿ ನೇಮಕ ಮಾಡಿದ ಕ್ರಮಕ್ಕೆ ಸಾರ್ವತ್ರಿಕ ವಲಯ ಹಾಗೂ ವಿಪಕ್ಷಗಳಿಂದ ವ್ಯಾಪಕ ಟೀಕೆ ಕೇಳಿ ಬಂದ ಹಿನ್ನೆಲೆಯಲ್ಲಿ ಕೇವಲ ಒಂದೇ ದಿನದಲ್ಲಿ ಅವರ ನೇಮಕಾತಿ ಆದೇಶವನ್ನು ಮುಖ್ಯಮಂತ್ರಿ ವಿಜಯ್ ಹಿಂಪಡೆದಿದ್ದಾರೆ.
ಬುಧವಾರ ಈ ಸಂಬಂಧ ಆದೇಶ ಹೊರಡಿಸಲಾಗಿತ್ತು. ಇದರ ಬೆನ್ನಿಗೇ, ವಿಪಕ್ಷಗಳು ಹಾಗೂ ವಿಜಯ್ ರ ಮೈತ್ರಿಪಕ್ಷಗಳೂ ರಾಧನ್ ಪಂಡಿತ್ ರ ನೇಮಕಾತಿಯನ್ನು ಪ್ರಶ್ನಿಸಿದ್ದವು.
ತಕ್ಷಣದಿಂದಲೇ ಜಾರಿಗೆ ಬರುವಂತೆ ರಿಕ್ಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ತಮ್ಮ ವಿಶೇಷ ಕರ್ತವ್ಯಾಧಿಕಾರಿಯನ್ನಾಗಿ ನೇಮಕ ಮಾಡಿರುವ ಮುಖ್ಯಮಂತ್ರಿ ವಿಜಯ್ ಅವರ ನೇಮಕಾತಿ ಪತ್ರವನ್ನು ಕಾಂಗ್ರೆಸ್ ಸಂಸದ ಶಶಿಕಾಂತ್ ಸೆಂಥಿಲ್ ಮಂಗಳವಾರ ಮತ್ತೆ ರೀಪೋಸ್ಟ್ ಮಾಡಿದ್ದರು.

“ನನಗೆ ಆಘಾತವಾಗಿದೆ. ಜ್ಯೋತಿಷಿಯೊಬ್ಬರಿಗೆ ವಿಶೇಷ ಕರ್ತವ್ಯಾಧಿಕಾರಿ ಹುದ್ದೆಯ ಅಗತ್ಯವೇನಿದೆ? ಯಾರಾದರೂ ವಿವರಿಸಬಲ್ಲಿರಾ?” ಎಂದು ತಿರುವಳ್ಳುವ‌ರ್ ಲೋಕಸಭಾ ಕ್ಷೇತ್ರದ ಸಂಸದರೂ ಆದ ಶಶಿಕಾಂತ್ ಸೆಂಥಿಲ್ ಪ್ರಶ್ನಿಸಿದ್ದರು. ಸಾರ್ವತ್ರಿಕ ವಲಯದಲ್ಲಿಯೂ ಈ ನಡೆಯ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ, ಜ್ಯೋತಿಷಿ ರಿಕ್ಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ತಮ್ಮ ವಿಶೇಷ ಕರ್ತವ್ಯಾಧಿಕಾರಿಯನ್ನಾಗಿ ನೇಮಿಸಿಕೊಂಡಿದ್ದ ಆದೇಶವನ್ನು ಮುಖ್ಯಮಂತ್ರಿ ವಿಜಯ್ ಹಿಂಪಡೆದಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡಿದ್ದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಯಶಸ್ಸು ಗಳಿಸಲಿದ್ದಾರೆ ಎಂದು ಜ್ಯೋತಿಷಿ ರಿಕ್ಕಿ ರಾಧನ್ ಪಂಡಿತ್ ವೆಟ್ರಿವೇಲ್ ಭವಿಷ್ಯ ನುಡಿದಿದ್ದರು.


Spread the love
Share:

administrator

Leave a Reply

Your email address will not be published. Required fields are marked *