Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಟ್ರಂಪ್‌ಗೆ ಬಿಗ್ ಶಾಕ್: ಶೇ. 10ರಷ್ಟು ಜಾಗತಿಕ ಸುಂಕ ರದ್ದುಗೊಳಿಸಿದ ಅಮೆರಿಕ ಕೋರ್ಟ್.

Spread the love

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿದ್ದ ಶೇಕಡ 10ರ ಜಾಗತಿಕ ಸುಂಕವನ್ನು ಅಮೆರಿಕದ ಫೆಡರಲ್ ಕೋರ್ಟ್ ಕಾನೂನುಬಾಹಿರ ಎಂದು ತಳ್ಳಿಹಾಕಿದೆ. ಅಮೆರಿಕ ಕಾಂಗ್ರೆಸ್‌ನ ಅನುಮತಿ ಇಲ್ಲದೇ ದೊಡ್ಡ ಪ್ರಮಾಣದ ಆಮದು ಸುಂಕವನ್ನು ವಿಧಿಸಿದ ಟ್ರಂಪ್ ನಿರ್ಧಾರಕ್ಕೆ ಇದು ದೊಡ್ಡ ಹಿನ್ನಡೆಯಾಗಿದೆ.
ಅಂತರರಾಷ್ಟ್ರೀಯ ವ್ಯಾಪಾರ ಕುರಿತ ಅಮೆರಿಕನ್ ನ್ಯಾಯಾಲಯ ಗುರುವಾರ 2-1 ಬಹುಮತದ ತೀರ್ಪು ನೀಡಿದೆ. ಈ ವರ್ಷದ ಆರಂಭದಲ್ಲಿ ವಿಧಿಸಿದ ಈ ಸುಂಕ 1974ರ ವ್ಯಾಪಾರ ಕಾಯ್ದೆಯಡಿ ಸಮರ್ಥನೀಯವಲ್ಲ. ಆದ್ದರಿಂದ ಇದು ‘ಅಮಾನ್ಯ’ ಮತ್ತು ‘ಕಾನೂನು ಪ್ರಕಾರ ಅನಧಿಕೃತ’ ಎಂದು ಸ್ಪಷ್ಟಪಡಿಸಿದೆ.

ಕಳೆದ ಫೆಬ್ರುವರಿಯಲ್ಲಿ ಟ್ರಂಪ್ ಶೇಕಡ 10ರ ಜಾಗತಿಕ ಸುಂಕ ವಿಧಿಸುವ ಕಾರ್ಯಾದೇಶಕ್ಕೆ ಸಹಿ ಮಾಡಿದ್ದರು ಹಾಗೂ ಇದು ಎಲ್ಲ ಆಮದುಗಳಿಗೆ ಅನ್ವಯವಾಗುತ್ತದೆ ಎಂದು ತಿಳಿಸಿದ್ದರು. ಇದಕ್ಕೂ ಮುನ್ನ ಅಮೆರಿಕ ಅಧ್ಯಕ್ಷರು ವಿಧಿಸಿದ್ದ ದೊಡ್ಡ ಪ್ರಮಾಣದ ಸುಂಕವನ್ನು ಅಮೆರಿಕದ ಸುಪ್ರೀಂ ಕೋರ್ಟ್ ತಳ್ಳಿಹಾಕಿದ ಬಳಿಕ ಟ್ರಂಪ್ ಆಡಳಿತ ಈ ಕ್ರಮ ಕೈಗೊಂಡಿತ್ತು.
ಆ ಸಂದರ್ಭದಲ್ಲಿ ಟ್ರಂಪ್ 1974ರ ವ್ಯಾಪಾರ ಕಾಯ್ದೆಯ ಸೆಕ್ಷನ್ 122ರ ಅನ್ವಯ ಸುಂಕ ವಿಧಿಸಿದ್ದರು. ಈ ಕಾನೂನಿನ ಅನ್ವಯ ‘ಬ್ಯಾಲೆನ್ಸ್ ಆಫ್ ಪೇಮೆಂಟ್ಸ್’ ಕೊರತೆ ಇದ್ದಲ್ಲಿ ಅಥವಾ ನಗದು ಸ್ಥಿರತೆಗೆ ಸಂಬಂಧಿಸಿದ ಅಪಾಯ ಸಾಧ್ಯತೆಗಳಿದ್ದಲ್ಲಿ 150 ದಿನಗಳವರೆಗೆ ತಾತ್ಕಾಲಿಕವಾಗಿ ಸುಂಕ ವಿಧಿಸಲು ಅವಕಾಶವಿದೆ. ಅಮೆರಿಕ ಗಂಭೀರವಾದ ವ್ಯಾಪಾರ ಅಸಮತೋಲನ ಎದುರಿಸುತ್ತಿದ್ದು, 1.2 ಟ್ರಿಲಿಯನ್ ಡಾಲರ್ ಮೌಲ್ಯದ ಸರಕು ವ್ಯಾಪಾರ ಕೊರತೆ ಇದೆ ಎಂದು ಟ್ರಂಪ್ ಆಡಳಿತ ವಾದಿಸಿತ್ತು. ಜತೆಗೆ ಜಿಡಿಪಿಯ ಶೇಕಡ 4ರಷ್ಟು ಕೊರತೆ ಇದೆ ಎಂದು ಹೇಳಿತ್ತು. ಆದರೆ ನ್ಯಾಯಾಲಯ ಈ ಸಮರ್ಥನೆಯನ್ನು ತಿರಸ್ಕರಿಸಿದೆ. ಕಾನೂನಿನ ಅನ್ವಯ ಅಗತ್ಯವಿರುವ ಮಾನದಂಡದ ಮಟ್ಟವನ್ನು ಈ ಕೊರತೆಯ ಪ್ರಮಾಣ ತಲುಪುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.


Spread the love
Share:

administrator

Leave a Reply

Your email address will not be published. Required fields are marked *