Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಂಗಳೂರು: ಕೇಂದ್ರ ಸಚಿವರ ‘ಡೀಪ್‌ಫೇಕ್’ ವಿಡಿಯೋ ನಂಬಿ 18.81 ಲಕ್ಷ ಕಳೆದುಕೊಂಡ ವೃದ್ಧ!

Spread the love

ಮಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಆಕರ್ಷಕ ಜಾಹೀರಾತುಗಳನ್ನು ನಂಬುವ ಮುನ್ನ ಎಚ್ಚರ! ಕೇಂದ್ರ ಹಣಕಾಸು ಸಚಿವರ ವಿಡಿಯೋ ಬಳಸಿ ನಡೆದ ನಕಲಿ ಆನ್‌ಲೈನ್ ಟ್ರೇಡಿಂಗ್ ದಂದೆಗೆ ಸಿಲುಕಿ 75 ವರ್ಷದ ಹಿರಿಯ ನಾಗರಿಕರೊಬ್ಬರು ಬರೋಬ್ಬರಿ 18.81 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ.

ಕಳೆದ ಡಿಸೆಂಬರ್‌ನಲ್ಲಿ ಸಂತ್ರಸ್ತರು ಫೇಸ್‌ಬುಕ್‌ನಲ್ಲಿ ಹಣಕಾಸು ಸಚಿವರ ಭಾಷಣವಿರುವ ಆನ್‌ಲೈನ್ ಟ್ರೇಡಿಂಗ್ ಕುರಿತ ವಿಡಿಯೋವೊಂದನ್ನು ನೋಡಿದ್ದರು. ಇದನ್ನು ನಿಜವೆಂದು ನಂಬಿದ ಅವರು ವಿಡಿಯೋ ಕೆಳಗಿದ್ದ ಲಿಂಕ್ ಕ್ಲಿಕ್ ಮಾಡಿ ತಮ್ಮ ವಿವರಗಳನ್ನು ನೋಂದಾಯಿಸಿಕೊಂಡಿದ್ದರು. ಇದಾದ ಬೆನ್ನಲ್ಲೇ ‘ಮೀನಾಕ್ಷಿ’ ಎಂಬ ಹೆಸರಿನ ವ್ಯಕ್ತಿಯಿಂದ ಕರೆ ಬಂದಿದ್ದು, ಹೆಚ್ಚಿನ ಲಾಭದ ಆಸೆ ತೋರಿಸಿ ಹಂತ ಹಂತವಾಗಿ ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸಲಾಗಿದೆ. ಮೊದಲ ಹಂತವಾಗಿ ₹21,000 ಹಣವನ್ನು ವರ್ಗಾಯಿಸಿಕೊಂಡಿದ್ದಳು.

ನಂತರ ಅಕ್ಷರಗೌಡ ಎಂಬ ವ್ಯಕ್ತಿ ಆನಂದ ಉನ್ನಿಕೃಷ್ಣ ಅವರ ಅಸಿಸ್ಟೆಂಟ್ ಎಂದು ಪರಿಚಯಿಸಿಕೊಂಡು, ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ ವಾಟ್ಸಪ್ ಮೂಲಕ ಹೂಡಿಕೆಗೆ ಪ್ರೇರೇಪಿಸಿದ್ದನು. ಆರೋಪಿಗಳ ಮಾತು ನಂಬಿದ ವೃದ್ಧರು ಡಿಸೆಂಬರ್ 18ರಂದು ₹3 ಲಕ್ಷ, ಡಿಸೆಂಬರ್ 26ರಂದು ₹7 ಲಕ್ಷ, ಜನವರಿ 6ರಂದು ₹3 ಲಕ್ಷ ಹಾಗೂ ಜನವರಿ 12ರಂದು ₹5.60 ಲಕ್ಷ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದರು.
ಒಟ್ಟು ₹18,81,000 ಹಣವನ್ನು ಹೂಡಿಕೆ ಮಾಡಿಸಿಕೊಂಡ ಆರೋಪಿಗಳು ₹1 ಕೋಟಿ ಲಾಭ ನೀಡುವುದಾಗಿ ನಂಬಿಸಿದ್ದರು. ಆದರೆ ಯಾವುದೇ ಲಾಭ ನೀಡದೆ ವಂಚಿಸಿರುವುದು ತಿಳಿದುಬಂದಾಗ ಸಂತ್ರಸ್ತರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *