ಪೆರಂಬ್ರಾದಲ್ಲಿ ಐತಿಹಾಸಿಕ ಜಯ: ಸಿಪಿಐ(ಎಂ) ಭದ್ರಕೋಟೆ ಧೂಳೀಪಟ ಮಾಡಿದ ಫಾತಿಮಾ ತಹ್ಲಿಯಾ

ತಿರುವನಂತಪುರಂ: ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್ (ಐಯುಎಂಎಲ್) ಪಕ್ಷದ ಫಾತಿಮಾ ತಹಿಯಾ ಅವರು ಪೆರಂಬ್ರಾ ಕ್ಷೇತ್ರದಲ್ಲಿ ಜಯ ಗಳಿಸಿದ್ದಾರೆ.
ಅವರು ಕೇರಳದ ಆಡಳಿತಾರೂಢ ಎಲ್ ಡಿಎಫ್‌ನ ಸಂಚಾಲಕ ಮತ್ತು ಸಿಪಿಐ (ಎಂ)ನ ಹಿರಿಯ ನಾಯಕ ಟಿ.ಪಿ. ರಾಮಕೃಷ್ಣನ್ ಅವರನ್ನು 4700 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ. 1980ರಿಂದಲೂ ಸಿಪಿಐ (ಎಂ) ನಿರಂತರ ಜಯ ಗಳಿಸುತ್ತಾ ಬಂದಿದ್ದ ಪೆರಂಬ್ರಾ ಕ್ಷೇತ್ರದಲ್ಲಿ ಜಯ ಗಳಿಸುವ ಮೂಲಕ ತಹ್ಲಿಯಾ ಅವರು ಸಂಚಲನ ಮೂಡಿಸಿದ್ದಾರೆ.
ತಹ್ಲಿಯಾ ಅವರು ಐಯುಎಂಎಲ್ ಪಕ್ಷದ ಇತಿಹಾಸದಲ್ಲಿ ಮೊದಲ ಶಾಸಕಿಯಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
