Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಚರಂಡಿ ನೀರಿನಲ್ಲಿ ಸ್ನಾನ ಮಾಡಿ ಆಹಾರ ಸೇವನೆ: ಪುನೀತ್ ಸೂಪರ್‌ಸ್ಟಾರ್ ಅಸಹ್ಯಕರ ವಿಡಿಯೋ ವೈರಲ್!

Spread the love

ನವದೆಹಲಿ: ಫೇಮಸ್ ಆಗಲು ಜನ ಏನೇನೆಲ್ಲಾ ಸಾಹಸಗಳನ್ನು ಮಾಡುವುದನ್ನು ನೋಡಿದ್ದೇವೆ ಆದರೆ ಈ ವ್ಯಕ್ತಿ ಚರಂಡಿ ನೀರೊಳಗೆ ಸ್ನಾನ ಮಾಡುವ ವಿಡಿಯೋ ವೈರಲ್ ಆಗಿದೆ. ಅಷ್ಟೇ ಅಲ್ಲದೆ ಅದೇ ನೀರಿನಲ್ಲಿ ಆಹಾರವನ್ನು ಅದ್ದಿ ತಿನ್ನುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಜನಪ್ರಿಯ ಇನ್ಫ್ಲುಯೆನ್ಸರ್ ಪುನೀತ್ ಸೂಪರ್‌ಸ್ಟಾರ್ ಈ ವಿಡಿಯೋದಲ್ಲಿದ್ದು, ವ್ಯೂಸ್‌ಗಳಿಗಾಗಿ ಅವರು ಮಾಡಿರುವ ಕೆಲಸ ಎಲ್ಲರನ್ನು ಬೆಚ್ಚಿಬೀಳಿಸಿದೆ.
ಈ ವೈರಲ್ ಕ್ಲಿಪ್‌ನಲ್ಲಿ ಪುನೀತ್ ಅವರು ತಾವು ಇರುವ ಜಾಗವನ್ನು ನಾಲಾ ಕೆಫೆ ಎಂದು ಕರೆದಿದ್ದಾರೆ, ಇಂದು ನಾನು ನಾಲಾ ಕೆಫೆಗೆ ಬಂದಿದ್ದೇನೆ ಮತ್ತು ಚೋಲೆ ಕುಲ್ಚೆ ತಿನ್ನುತ್ತಿದ್ದೇನೆ ಎಂದು ಹೇಳುತ್ತಾ, ಚರಂಡಿ ನೀರಿನಲ್ಲಿ ಮುಳುಗೆದ್ದು, ಅದೇ ನೀರಿನಲ್ಲಿ ಆಹಾರವನ್ನು ಅದ್ದಿ ತಿಂದಿರುವ ವಿಡಿಯೋವನ್ನು ಕಂಡು ಜನರು ಹೌಹಾರಿದ್ದಾರೆ.
ವಿಡಿಯೋ ಹರಡುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳ ಸುರಿಮಳೆಯೇ ಹರಿದುಬಂದಿದೆ. ಈ ವ್ಯಕ್ತಿ ಕೇವಲ ಹಣ ಮತ್ತು ಪ್ರಚಾರಕ್ಕಾಗಿ ದೇಶದ ವರ್ಚಸ್ಸನ್ನು ಜಗತ್ತಿನ ಮುಂದೆ ವಿರೂಪಗೊಳಿಸುತ್ತಿದ್ದಾರೆ ಎಂದು ಹಲವರು ಕಿಡಿಕಾರಿದ್ದಾರೆ. ಈ ಚರ್ಚೆಯು ಕೆಲವು ಹಂತಗಳಲ್ಲಿ ರಾಜಕೀಯ ಮತ್ತು ಧಾರ್ಮಿಕ ದೃಷ್ಟಿಕೋನಗಳಿಗೂ ತಿರುಗಿ ಮತ್ತಷ್ಟು ವಿವಾದವನ್ನು ಹುಟ್ಟುಹಾಕಿದೆ.


Spread the love
Share:

administrator

Leave a Reply

Your email address will not be published. Required fields are marked *