Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬಂಗಾಳ ರಣಕಣದಲ್ಲಿ ಹಿಂಸಾಚಾರ: ಜೀವ ಉಳಿಸಿಕೊಳ್ಳಲು ಹೊಲದಲ್ಲಿ ಓಡಿದ ಬಿಜೆಪಿ ಅಭ್ಯರ್ಥಿ!

Spread the love

ಕೊಲ್ಕತ್ತಾ,: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ (West Bengal Assembly Elections) ಮೊದಲ ಹಂತದ ಮತದಾನ ಇಂದು ನಡೆಯುತ್ತಿದೆ. ಬಂಗಾಳದ ದಕ್ಷಿಣ ದಿನಾಜ್‌ಪುರದ ಬಿಜೆಪಿ ಅಭ್ಯರ್ಥಿ ಸುವೇಂದು ಸರ್ಕಾರ್ ಅವರನ್ನು ಟಿಎಂಸಿ ಕಾರ್ಯಕರ್ತರು ಬೆನ್ನಟ್ಟಿ ಹಲ್ಲೆ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಹಲ್ಲೆಯಿಂದ ತಪ್ಪಿಸಿಕೊಳ್ಳಲು ಸುವೇಂದು ಸರ್ಕಾರ್ ಪೊಲೀಸರ ಜೊತೆ ಮೈದಾನದೊಳಗೆ ಓಡಿದ್ದಾರೆ. ಭದ್ರತಾ ಸಿಬ್ಬಂದಿಯೊಬ್ಬರು ಬಿಜೆಪಿ ಅಭ್ಯರ್ಥಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿರುವಾಗ ಟಿಎಂಸಿ ಕಾರ್ಯಕರ್ತರು ಸುವೇಂದು ಸರ್ಕಾರ್ ಅವರನ್ನು ಗದರಿಸುತ್ತಾ, ಹಲ್ಲೆ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಮತಗಟ್ಟೆಗೆ ತೆರಳುತ್ತಿದ್ದ ಸುವೇಂದು ಸರ್ಕಾರ್ ಅವರನ್ನು ತಡೆದು ಹಲ್ಲೆ ನಡೆಸಲಾಗಿದೆ. ಈ ಹಲ್ಲೆಯಿಂದ ಪಾರಾಗಲು ಅವರು ಹೊಲದಲ್ಲಿ ಓಡಿದ್ದಾರೆ. ಆದರೂ ಬೆನ್ನಟ್ಟಿ ಬಂದ ಜನರು ಅವರ ಮೇಲೆ ದಾಳಿ ನಡೆಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *