Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅಸ್ಸಾಂ ಗುಂಪು ಹ*ತ್ಯೆ ಪ್ರಕರಣ: 20 ಮಂದಿ ದೋಷಿ ಎಂದು ಘೋಷಿಸಿದ ವಿಶೇಷ ನ್ಯಾಯಾಲಯ

Spread the love

ಗುವಾಹಟಿ,: 2018ರಲ್ಲಿ ಇಬ್ಬರು ವ್ಯಕ್ತಿಗಳನ್ನು ಥಳಿಸಿ ಹತ್ಯೆಗೈದಿದ್ದ ಪ್ರಕರಣದಲ್ಲಿ 20 ಆರೋಪಿಗಳನ್ನು ದೋಷಿಗಳು ಎಂದು ಸೋಮವಾರ ಘೋಷಿಸಿರುವ ಅಸ್ಸಾಂನ ವಿಶೇಷ ನ್ಯಾಯಾಲಯವು ಇತರ 25 ಜನರನ್ನು ಖುಲಾಸೆಗೊಳಿಸಿದೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.
ಗುಂಪು ಅವರನ್ನು ಮಕ್ಕಳ ಅಪಹರಣಕಾರರು ಎಂದು ಆರೋಪಿಸಿ ಹತ್ಯೆ ಮಾಡಿತ್ತು. ಅಪರಾಧಿಗಳಿಗೆ ನ್ಯಾಯಾಲಯವು ಶುಕ್ರವಾರ ಶಿಕ್ಷೆಯನ್ನು ಪ್ರಕಟಿಸಲಿದೆ.
ಜೂನ್ 2018ರಲ್ಲಿ ಈ ಘಟನೆ ನಡೆದಿತ್ತು. ಕರ್ಬಿ ಆಂಗ್ಲಾಂಗ್‌ನಲ್ಲಿಯ ಕಾಂಗ್ತಿಲಾಂಗ್ ಜಲಪಾತಕ್ಕೆ ತೆರಳಿದ್ದಗುವಾಹಟಿ ನಿವಾಸಿಗಳಾಗಿದ್ದ ನೀಲೋತ್ಪಲ ದಾಸ್ (29) ಮತ್ತು ಅಭಿಜೀತ್ ನಾಥ್ (30) ಅವರು ಅಲ್ಲಿಂದ ಮರಳುತ್ತಿರುವಾಗ ಪಂಜುರಿ ಎಂಬಲ್ಲಿ ಗ್ರಾಮಸ್ಥರ ಗುಂಪೊಂದು ಅವರ ಕಾರನ್ನು ತಡೆದು, ಇಬ್ಬರನ್ನೂ ಹೊರಗೆಳೆದು ಥಳಿಸಿ ಕೊಂದಿತ್ತು. ಆ ಸಮಯದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದ ವೀಡಿಯೊದಲ್ಲಿ ದಾಸ್ ಮತ್ತು ನಾಥ್ ತಾವು ಮಕ್ಕಳ ಅಪಹರಣಕಾರರ)ಕರ್ಬಿ ಆಂಗ್ಲಾಂಗ್‌ಗೆ ಭೇಟಿ ನೀಡಿದ್ದೆವು ಎಂದು ಗುಂಪಿಗೆ ಹೇಳುತ್ತಿರುವುದು ಕೇಳಿಸಿತ್ತು.

ಸಾಮಾಜಿಕ ಮಾಧ್ಯಮಗಳಲ್ಲಿ ಮಕ್ಕಳ ಅಪಹರಣದ ಕುರಿತು ವದಂತಿಗಳ ನಡುವೆಯೇ ಈ ದುರಂತ ಸಂಭವಿಸಿತ್ತು.
ಸೋಮವಾರ ತೀರ್ಪು ಪ್ರಕಟಿಸಿದ ನಾಗಾಂವ್ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಡಿ.ಜೆ.ಮಹಂತ ಅವರು 45 ಆರೋಪಿಗಳ ಪೈಕಿ 20 ಜನರನ್ನು ದೋಷಿಗಳೆಂದು ಎತ್ತಿ ಹಿಡಿದಿದ್ದಾರೆ. ಖುಲಾಸೆಗೊಂಡಿರುವ 24 ಆರೋಪಿಗಳನ್ನು ಜೈಲಿನಿಂದ ಬಿಡುಗಡೆಗೊಳಿಸುವಂತೆ ಆದೇಶಿಸಿದ್ದಾರೆ. ಅವರ ವಿರುದ್ಧ ಪ್ರಕರಣವನ್ನು ಸಾಬೀತುಗೊಳಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲಗೊಂಡಿದೆ ಎಂದು ಅವರು ತೀರ್ಪಿನಲ್ಲಿ ಹೇಳಿದ್ದಾರೆ.
ಘಟನೆ ನಡೆದಿದ್ದ ಸಂದರ್ಭದಲ್ಲಿ ಒಟ್ಟು 48 ಜನರನ್ನು ಬಂಧಿಸಲಾಗಿತ್ತು. ಈ ಪೈಕಿ ಮೂವರು ಅಪ್ರಾಪ್ತ ವಯಸ್ಕರಾಗಿದ್ದು,ಅವರನ್ನು ಬಾಲಾಪರಾಧಿಗಳ ಗೃಹಕ್ಕೆ ರವಾನಿಸಲಾಗಿತ್ತು.


Spread the love
Share:

administrator

Leave a Reply

Your email address will not be published. Required fields are marked *