Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಟ್ರಂಪ್ ಮಹತ್ವದ ನಿರ್ಧಾರ: ಇರಾನ್ ವಿರುದ್ಧದ ಕದನ ವಿರಾಮ ವಿಸ್ತರಣೆ; ಪಾಕಿಸ್ತಾನದ ಮನವಿಗೆ ಅಮೆರಿಕ ಓಗೊಟ್ಟಿದ್ದೇಗೆ?

Spread the love

ವಾಷಿಂಗ್ಟನ್: ಪಾಕಿಸ್ತಾನದ ಮನವಿಯನ್ನು ಪರಿಗಣಿಸಿ, ಇರಾನ್ ವಿರುದ್ಧದ ಕದನ ವಿರಾಮವನ್ನು ವಿಸ್ತರಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಹಿಂದಿನ ಕದನ ವಿರಾಮದ ಅವಧಿ ಮುಕ್ತಾಯವಾಗುವ ಕೆಲವೇ ಗಂಟೆಗಳ ಮೊದಲು ಇರಾನ್ ಮೇಲಿನ ಯೋಜಿತ ದಾಳಿಯನ್ನು ವಿಳಂಬಿಸುವ ಘೋಷಣೆ ಹೊರಬಿದ್ದಿದೆ.
ಇದಾಗ್ಯೂ, ಇರಾನ್ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ ಟ್ರಂಪ್, ಇರಾನಿಂದ ಏಕೀಕೃತ ಪ್ರಸ್ತಾವನೆ ಬರುವವರೆಗೆ ಇರಾನ್ ಬಂದರುಗಳ ಮೇಲೆ ಅಮೆರಿಕ ವಿಧಿಸಿರುವ ದಿಗಂಧನ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

“ಇರಾನ್ ಸರ್ಕಾರ ಗಂಭೀರವಾಗಿ ಘಾಸಿಗೊಂಡಿದೆ. ಇದು ಅನಿರೀಕ್ಷಿತವೇನೂ ಅಲ್ಲ; ಫೀಲ್ಡ್ ಮಾರ್ಷಲ್ ಅಸೀಂ ಮುನೀರ್ ಹಾಗೂ ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಷರೀಫ್ ಅವರ ಮನವಿಯ ಮೇರೆಗೆ ಇರಾನ್ ಮುಖಂಡರು ಸಮಗ್ರ ಪ್ರಸ್ತಾವನೆಯೊಂದಿಗೆ ಮುಂದೆ ಬರುವವರೆಗೆ ಆ ದೇಶದ ಮೇಲಿನ ದಾಳಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ,’ ಎಂದು ಟ್ರಂಪ್ ಟ್ರುತ್ ಸೋಶಿಯಲ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಆದರೆ ಟ್ರಂಪ್‌ ಹೇಳಿಕೆಗೆ ತೀಕ್ಷ್ಮವಾಗಿ ಪ್ರತಿಕ್ರಿಯಿಸಿರುವ ಇರಾನ್, “ಸೋತವರು ಷರತ್ತು ವಿಧಿಸಲು ಸಾಧ್ಯವಿಲ್ಲ: ಟ್ರಂಪ್ ಘೋಷಿಸಿರುವ ಕದನ ವಿರಾಮ ವಿಸ್ತರಣೆ ಇರಾನ್ ಪಾಲಿಗೆ ಅರ್ಥಹೀನ” ಎಂದು ಹೇಳಿದೆ. ಇರಾನ್ ಸಂಸತ್ತಿನ ಸ್ಪೀಕರ್ ಅವರ ಸಲಹೆಗಾರ ಮಹಿ ಮುಹಮ್ಮದಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
“ಕದನ ವಿರಾಮ ವಿಸ್ತರಣೆ ನಮಗೆ ಅರ್ಥಹೀನ. ಸೋಲು ಅನುಭವಿಸಿದವರು ಷರತ್ತುಗಳನ್ನು ವಿಧಿಸಲು ಸಾಧ್ಯವಿಲ್ಲ. ಯುದ್ಧ ಮುಂದುವರಿಸುವುದು ಬಾಂಬ್ ದಾಳಿ ನಡೆಸುವುದಕ್ಕಿಂತ ಭಿನ್ನವೇನೂ ಅಲ್ಲ. ನಮ್ಮಸೇನೆ ಸೂಕ್ತ ಪ್ರತಿಕ್ರಿಯೆ ನೀಡಲಿದೆ. ಟ್ರಂಪ್ ಘೋಷಿಸಿರುವ ಕದನ ವಿರಾಮ ವಿಸ್ತರಣೆ ಅಚ್ಚರಿಯ ದಾಳಿಗೆ ನಡೆಸುತ್ತಿರುವ ಸಿದ್ಧತೆ. ಇದೀಗ ಮುಂದಿನ ಉಪಕ್ರಮ ಆರಂಭಿಸುವ ಸರದಿ ಇರಾನ್ ದೇಶದ್ದು” ಎಂದು ಅವರು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *