Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಜಪಾನ್‌ನಲ್ಲಿ ಭೀಕರ ಭೂಕಂಪ: 7.5 ತೀವ್ರತೆಗೆ ನಡುಗಿದ ದ್ವೀಪರಾಷ್ಟ್ರ; ಸುನಾಮಿ ಭೀತಿ!

Spread the love

ಟೋಕಿಯೊ : ಉತ್ತರ ಜಪಾನ್‌ನ ಇವಾಟೆ ಪ್ರಾಂತ್ಯದಲ್ಲಿ ಇಂದು ಸಂಜೆ ಪ್ರಬಲ ಭೂಕಂಪ ಸಂಭವಿಸಿದ್ದು, ಇಡೀ ದ್ವೀಪರಾಷ್ಟ್ರವನ್ನು ಆತಂಕಕ್ಕೆ ತಳ್ಳಿದೆ. ಆರಂಭದಲ್ಲಿ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.4 ಎಂದು ಅಂದಾಜಿಸಲಾಗಿದ್ದರೂ, ಜಪಾನ್ ಹವಾಮಾನ ಸಂಸ್ಥೆ (JMA) ಈಗ ಅದನ್ನು 7.5ಕ್ಕೆ ಏರಿಸಿದೆ. ಭೂಮಿಯ ಮೇಲ್ಮೈಯಿಂದ ಕೇವಲ 10 ಕಿಲೋಮೀಟರ್ ಆಳದಲ್ಲಿ ಕೇಂದ್ರಬಿಂದು ಇರುವುದು ಹಾನಿಯ ಭೀತಿಯನ್ನು ಮತ್ತಷ್ಟು ಹೆಚ್ಚಿಸಿದೆ.ಭೂಕಂಪ ಸಂಭವಿಸಿದ ಕೆಲವೇ ನಿಮಿಷಗಳಲ್ಲಿ ಉತ್ತರ ಜಪಾನ್‌ನ ಕರಾವಳಿ ಭಾಗಕ್ಕೆ ಸುನಾಮಿ ಅಲೆಗಳು ಅಪ್ಪಳಿಸಲು ಆರಂಭಿಸಿವೆ. ಇವಾಟೆ ಪ್ರಾಂತ್ಯದ ಕುಜಿ ಬಂದರಿನಲ್ಲಿ ಈಗಾಗಲೇ ಸುಮಾರು 80 ಸೆಂಟಿಮೀಟರ್ ಎತ್ತರದ ಸುನಾಮಿ ಅಲೆಗಳು ದಾಖಲಾಗಿದ್ದು, ಮಿಯಾಕೊ ಮತ್ತು ಹೊಕ್ಕೈಡೋ ಭಾಗಗಳಲ್ಲಿ ಸಮುದ್ರದ ಮಟ್ಟ ಅಪಾಯಕಾರಿ ರೀತಿಯಲ್ಲಿ ಏರಿಕೆಯಾಗುತ್ತಿದೆ. “ಇದು ಕೇವಲ ಆರಂಭಿಕ ಅಲೆಗಳಷ್ಟೇ, ಮುಂದಿನ ಅಲೆಗಳು 10 ಅಡಿಗಿಂತಲೂ ಹೆಚ್ಚು ಎತ್ತರವಿರಬಹುದು” ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಕರಾವಳಿ ನಿವಾಸಿಗಳು ತಕ್ಷಣವೇ ಎತ್ತರದ ಪ್ರದೇಶಗಳಿಗೆ ತೆರಳುವಂತೆ ಜಪಾನ್ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಟೋಕಿಯೊ ಮತ್ತು ಶಿನ್-ಆಮೋರಿ ನಡುವಿನ ‘ಶಿಂಕನ್ಸೆನ್’ ಬುಲೆಟ್ ರೈಲು ಸಂಚಾರವನ್ನು ತಕ್ಷಣವೇ ಸ್ಥಗಿತಗೊಳಿಸಲಾಗಿದೆ. ರಾಜಧಾನಿ ಟೋಕಿಯೊದಲ್ಲಿಯೂ ಗಗನಚುಂಬಿ ಕಟ್ಟಡಗಳು ದೀರ್ಘಕಾಲದವರೆಗೆ ಕಂಪಿಸಿದ್ದು, ಜನರಲ್ಲಿ ಆತಂಕ ಮನೆಮಾಡಿದೆ. ರಕ್ಷಣಾ ಕಾರ್ಯಾಚರಣೆಗಾಗಿ ಸೇನಾ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ.

https://youtu.be/79DZ4gW8t_0

Spread the love
Share:

administrator

Leave a Reply

Your email address will not be published. Required fields are marked *