ಮಕ್ಕಳ ಪ್ರಾಣ ಉಳಿಸಲು ಹೋಗಿ ಇಬ್ಬರು ಮಹಿಳೆಯರು ಜಲಸಮಾಧಿ; ಅರಹಳ್ಳಿ ಕೆರೆಯಲ್ಲಿ ನಡೆದ ಭೀಕರ ದುರಂತ

ಕೋಲಾರ: ಕೆರೆಗೆ ಬಿದ್ದಿದ್ದ ಮಕ್ಕಳನ್ನು ರಕ್ಷಿಸಲು ಹೋಗಿ ಇಬ್ಬರು ಮಹಿಳೆಯರು ಸಾವನಪ್ಪಿದ ಘಟನೆ ಕೊಲಾರ ಜಿಲ್ಲೆಯ ಅರಹಳ್ಳಿ ಎಂಬಲ್ಲಿ ಸಂಭವಿಸಿದೆ.ಮೃತರನ್ನು ಮೊಹಮದಿ (25) ಹಾಗೂ ಸಲ್ಮಾ (26) ಎಂದು ಗುರುತಿಸಲಾಗಿದ್ದು, ಇವರು ನಿಸಾರ್ ನಗರದ ನಿವಾಸಿಗಳಾಗಿದ್ದಾರೆ. ಕೋಲಾರದ ಅರಹಳ್ಳಿ ಕೆರೆಗೆ ಮಹಿಳೆಯರು ಸೇರಿದಂತೆ ಮಕ್ಕಳು ಬಟ್ಟೆ ತೊಳೆಯಲು ಹೋಗಿದ್ದಾರೆ. ಈ ವೇಳೆ ಮಕ್ಕಳು ನೀರಿಗೆ ಬಿದ್ದಿದ್ದಾರೆ. ಅವರನ್ನು ರಕ್ಷಣೆ ಮಾಡಲು ನೀರಿಗೆ ಇಳಿದ ಮೊಹಮದಿ ಮತ್ತು ಸಲ್ಮಾ ಸಾವನ್ನಪ್ಪಿದ್ದಾರೆ.
