ಮಧ್ಯಪ್ರಾಚ್ಯದ ಸಂಘರ್ಷದ ನಡುವೆ ಹಾರ್ಮುಝ್ ಜಲಸಂಧಿ ದಾಟಿ ಭಾರತಕ್ಕೆ ಬಂದ ‘ಗ್ರೀನ್ ಆಶಾ’

ಮುಂಬೈ: ಪಶ್ಚಿಮ ಎತ್ಯಾ ಸಂಘರ್ಷದ ಮಧ್ಯೆ ಭಾರತದ ಧ್ವಜ ಹೊಂದಿರುವ 15,400 ಟನ್ ಎಲ್ಪಿಜಿ ಹೊತ್ತ ಟ್ಯಾಂಕರ್ ಹಾರ್ಮುಝ್ ಜಲಸಂಧಿಯನ್ನು ದಾಟಿ ಸುರಕ್ಷಿತವಾಗಿ ಬಂದಿರುವುದಾಗಿ ನವಿ ಮುಂಬೈನ ಜವಾಹರಲಾಲ್ ನೆಹರು ಬಂದರು ಪ್ರಾಧಿಕಾರವು ತಿಳಿಸಿದೆ.
ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಮತ್ತು ಕದನ ವಿರಾಮದ ಹಿನ್ನೆಲೆ ಜವಾಹರಲಾಲ್ ನೆಹರು ಬಂದರು ಪ್ರಾಧಿಕಾರವು ಈ ಬೆಳವಣಿಗೆಯನ್ನು ಗಮನಾರ್ಹ ಎಂದು ಬಣ್ಣಿಸಿದೆ.
‘ಇಂದು, ಹಾರ್ಮುಝ್ ಜಲಸಂಧಿಯನ್ನು ದಾಟಿ ಭಾರತದ ಧ್ವಜ ಹೊತ್ತ ಎಲ್ಪಿಜಿ ಹಡಗಾದ “ಗ್ರೀನ್ ಆಶಾ” ಜವಾಹರಲಾಲ್ ನೆಹರು ಬಂದರನ್ನು ತಲುಪಿದೆ. ಇದನ್ನು ನಾವು ಹೆಮ್ಮೆಯಿಂದ ಸ್ವಾಗತಿಸಿದ್ದೇವೆ’ ಎಂದು ಜವಾಹರಲಾಲ್ ನೆಹರು ಬಂದರು ಪ್ರಾಧಿಕಾರ ತಿಳಿಸಿದೆ..
ಯುದ್ಧ ಪ್ರಾರಂಭವಾದ ನಂತರ INPA ತಲುಪಿದ ಮೊದಲ ಹಡಗು ಇದಾಗಿದೆ. ಹಡಗು ಮತ್ತು ಅದರ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ. ಹಡಗು 15,400 ಟನ್ ಎಲ್ಪಿಜಿಯನ್ನು ತಂದಿದೆ ಎಂದು ತಿಳಿಸಿದೆ.
