Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಶಬರಿಮಲೆ ವಿವಾದ: ಇದು ಲಿಂಗ ತಾರತಮ್ಯವಲ್ಲ, ಧಾರ್ಮಿಕ ಸಂಪ್ರದಾಯ; ಸುಪ್ರೀಂ ಕೋರ್ಟ್‌ಗೆ ಕೇಂದ್ರದ ಸ್ಪಷ್ಟನೆ

Spread the love

ಹೊಸದಿಲ್ಲಿ: ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿಚಾರವು ಲಿಂಗ ತಾರತಮ್ಯದ ವಿಷಯವಲ್ಲ; ಅದು ಧಾರ್ಮಿಕ ಸಂಪ್ರದಾಯ ಮತ್ತು ನಂಬಿಕೆಗೆ ಸಂಬಂಧಿಸಿದ್ದು ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.ಕೇರಳದ ಪ್ರಸಿದ್ಧ ಶಬರಿಮಲೆ ದೇವಸ್ಥಾನಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಪ್ರವೇಶವನ್ನು ಅನುಮತಿಸಿದ್ದ 2018ರ ತೀರ್ಪಿನ ವಿರುದ್ಧ ಸಲ್ಲಿಸಿದ ದೀರ್ಘಕಾಲದಿಂದ ಬಾಕಿ ಇರುವ ಪರಿಶೀಲನಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಳ್ಳಲಿರುವ ಹಿನ್ನೆಲೆಯಲ್ಲಿ ಕೇಂದ್ರವು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.ಶಬರಿಮಲೆಯಲ್ಲಿ 10ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶದ ಮೇಲಿನ ನಿರ್ಬಂಧವು ಅಯ್ಯಪ್ಪ ಸ್ವಾಮಿಯ ‘ನೈಷ್ಠಿಕ ಬ್ರಹ್ಮಚಾರಿ’ ಸ್ವಭಾವದಿಂದ ಉಗಮಿಸಿದ್ದು, ಅದು ಅಶುದ್ಧತೆ ಅಥವಾ ಕೀಳರಿಮೆ ಆಧಾರಿತವಲ್ಲ ಎಂದು ಕೇಂದ್ರವು ವಿಚಾರಣೆಗೆ ಮುನ್ನ ಸಲ್ಲಿಸಿದ ಲಿಖಿತ ಅರ್ಜಿಯಲ್ಲಿ ತಿಳಿಸಿದೆ.


“ಮಹಿಳೆಯರಿಗೆ ಪ್ರವೇಶ ನೀಡಿದರೆ ದೇವಸ್ಥಾನದ ಪೂಜಾ ಪದ್ಧತಿಯ ಸ್ವರೂಪವೇ ಬದಲಾಗುತ್ತದೆ. ಇದರಿಂದ ಸಂವಿಧಾನ ರಕ್ಷಿಸುವ ಧಾರ್ಮಿಕ ವೈವಿಧ್ಯತೆ ದುರ್ಬಲವಾಗಬಹುದು ಎಂದು ಕೇಂದ್ರ ಸರಕಾರ ಹೇಳಿದೆ. ಶತಮಾನಗಳಿಂದ ಭಕ್ತರು ಸಂಪ್ರದಾಯದಂತೆ ಪೂಜೆ ಮಾಡುತ್ತಿದ್ದಾರೆ” ಎಂದು ಕೇಂದ್ರವನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ರಾ ನ್ಯಾಯಾಲಯಕ್ಕೆ ತಿಳಿಸಿದರು.
ಈ ವಿಷಯವು ಧಾರ್ಮಿಕ ನಂಬಿಕೆ ಹಾಗೂ ಪಂಗಡದ ಸ್ವಾಯತ್ತತೆಯ ವ್ಯಾಪ್ತಿಗೆ ಸೇರಿದ್ದು, ನ್ಯಾಯಾಂಗ ಪರಿಶೀಲನೆಯ ವ್ಯಾಪ್ತಿಯನ್ನು ಮೀರುತ್ತದೆ ಎಂದು ಕೇಂದ್ರ ವಾದಿಸಿದೆ. ಮುಟ್ಟಿನ ವಯಸ್ಸಿನ ಮಹಿಳೆಯರ ಪ್ರವೇಶದ ಮೇಲಿನ ನಿರ್ಬಂಧವನ್ನು ಮುಂದುವರಿಸುವಂತೆ ಸುಪ್ರೀಂ ಕೋರ್ಟ್‌ಗೆ ಕೇಂದ್ರವು ಆಗ್ರಹಿಸಿದೆ.


ಧಾರ್ಮಿಕ ಆಚರಣೆಗಳನ್ನು “ವೈಚಾರಿಕತೆ, “ಆಧುನಿಕತೆ” ಅಥವಾ “ವೈಜ್ಞಾನಿಕ ಮಾನದಂಡಗಳ ಆಧಾರದ ಮೇಲೆ ನಿರ್ಧರಿಸಬಾರದು ಎಂದು ಕೇಂದ್ರ ಸರಕಾರ ಎಚ್ಚರಿಸಿದೆ. ಇಂತಹ ವಿಧಾನವು ನ್ಯಾಯಾಲಯಗಳನ್ನು ನಂಬಿಕೆಯ ವಿಷಯಗಳಲ್ಲಿ ತಾತ್ವಿಕ ನಿರ್ಧಾರ ತೆಗೆದುಕೊಳ್ಳುವ ಸ್ಥಿತಿಗೆ ತಳ್ಳಬಹುದು ಎಂದು ಹೇಳಿದೆ.
ಒಂದು ಪದ್ಧತಿ ತರ್ಕಬದ್ಧವೇ ಅಥವಾ ಆಧುನಿಕ ಮೌಲ್ಯಗಳಿಗೆ ಹೊಂದಿಕೆಯಾಗುತ್ತದೆಯೇ ಎಂಬುದನ್ನು ಪರಿಶೀಲಿಸುವುದು ಸಾಂವಿಧಾನಿಕ ವಿಮರ್ಶೆಯ ಭಾಗವಲ್ಲ ಎಂದು ಕೇಂದ್ರ ಸರಕಾರ ವಾದಿಸಿದೆ. ನ್ಯಾಯಾಧೀಶರು ಧಾರ್ಮಿಕ ಪಠ್ಯಗಳನ್ನು ಅರ್ಥೈಸಲು ಅಥವಾ ದೇವತಾಶಾಸ್ತ್ರದ ಪ್ರಶ್ನೆಗಳನ್ನು ತೀರ್ಮಾನಿಸಲು ತರಬೇತಿ ಪಡೆದವರಲ್ಲ ಎಂಬುದನ್ನೂ ಅದು ಸೂಚಿಸಿದೆ.


Spread the love
Share:

administrator

Leave a Reply

Your email address will not be published. Required fields are marked *