“ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ: ಆರು ಪುಟ್ಟ ಮಕ್ಕಳ ಸಾವು; ಹಾರ್ಮುಝ್ ಜಲಸಂಧಿ ವಿವಾದದ ಬೆನ್ನಲ್ಲೇ ಭೀಕರ ಕೃತ್ಯ”

ಟೆಹ್ರಾನ್: ಇರಾನ್‌ನ ಟೆಹ್ರಾನ್ ಪ್ರಾಂತ್ಯದ ಮೇಲೆ ಅಮೆರಿಕ-ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಆರು ಮಕ್ಕಳು ಮೃತಪಟ್ಟಿದ್ದಾರೆ ಎಂದು aljazeera ವರದಿ ಮಾಡಿದೆ.
Fars news agency ಪ್ರಕಾರ, ಟೆಹ್ರಾನ್ ಪ್ರಾಂತ್ಯದ ಮೇಲೆ ತಡರಾತ್ರಿ ಅಮೆರಿಕ-ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ 10 ವರ್ಷದೊಳಗಿನ ನಾಲ್ವರು ಬಾಲಕಿಯರು ಮತ್ತು ಇಬ್ಬರು ಬಾಲಕರು ಮೃತಪಟ್ಟಿದ್ದಾರೆ.
ಇದಲ್ಲದೆ ಬಹರೆಸ್ತಾನ್ ಕೌಂಟಿಯ ವಸತಿ ಪ್ರದೇಶದ ಮೇಲೆ ಈ ಹಿಂದೆ ನಡೆದ ದಾಳಿಯಲ್ಲಿ 13 ಜನರು ಮೃತಪಟ್ಟಿದ್ದರು.
ಹಾರ್ಮುಝ್ ಜಲಸಂಧಿ ಕುರಿತ ಒಪ್ಪಂದಕ್ಕೆ ಟ್ರಂಪ್ ಇರಾನ್ ಗೆ 48 ಗಂಟೆಗಳ ಗಡುವು ವಿಧಿಸಿದ ಬೆನ್ನಲ್ಲೆ ಈ ದಾಳಿ ನಡೆದಿದೆ.
