Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

83 ಸಾವಿರಕ್ಕೂ ಅಧಿಕ ವ್ಯಾಟ್ಸ್‌ಆಪ್ ಖಾತೆಗಳು, 800ಕ್ಕೂ ಹೆಚ್ಚು ಆ್ಯಪ್‌ಗಳನ್ನು ನಿರ್ಬಂಧಿಸಿದ ಕೇಂದ್ರ

Spread the love

ಹೊಸದಿಲ್ಲಿ: ಹೆಚ್ಚುತ್ತಿರುವ ಡಿಜಿಟಲ್ ಅರೆಸ್ಟ್ ಹಾಗೂ ಹೂಡಿಕೆ ವಂಚನೆ ವಿರುದ್ಧ ಭಾರೀ ಕ್ರಮದ ಭಾಗವಾಗಿ, ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಸೈಬರ್ ವಿಭಾಗವಾದ ಭಾರತೀಯ ಸೈಬ‌ರ್ ಅಪರಾಧ ಸಮನ್ವಯ ಕೇಂದ್ರವು ಸೈಬ‌ರ್ ಅಪರಾಧಿಗಳ ವಿರುದ್ಧ ‘ಡಿಜಿಟಲ್ ದಾಳಿ’ ಆರಂಭಿಸಿದೆ.
ಮೂಲಗಳ ಪ್ರಕಾರ, 2025ರ ಆರಂಭದಿಂದ ವಂಚನೆಗಳನ್ನು ನಡೆಸಲು ಬಳಸಲಾಗುತ್ತಿದ್ದ 3,962 ಸ್ಕ್ರಿಪ್ ಐಡಿಗಳು ಹಾಗೂ 83,867 ವ್ಯಾಟ್ಸ್‌ಆಪ್ ಖಾತೆಗಳನ್ನು ಸೈಬ‌ರ್ ವಿಭಾಗ ನಿರ್ಬಂಧಿಸಿದೆ.
ಇದು ದೂರಸಂಪರ್ಕ ಇಲಾಖೆ, ಪೊಲೀಸ್ ಪಡೆ ಹಾಗೂ ದೂರಸಂಪರ್ಕ ಸೇವೆ ಪೂರೈಕೆದಾರರ ಸಮನ್ವಯದಲ್ಲಿ ನಡೆಸಲಾದ ಅತ್ಯಂತ ಪ್ರಬಲ ಕಾರ್ಯಾಚರಣೆಯಾಗಿದೆ. ಇದರಿಂದ ವಂಚಕರು ಬಳಸುತ್ತಿದ್ದ ಡಿಜಿಟಲ್ ಮೂಲಭೂತ ವ್ಯವಸ್ಥೆ ದೊಡ್ಡ ಪ್ರಮಾಣದಲ್ಲಿ ನಿಷ್ಕ್ರಿಯಗೊಂಡಿದೆ.

ನ್ಯಾಷನಲ್ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ (ಎನ್‌ಸಿಆರ್‌ಪಿ) ವ್ಯವಸ್ಥೆಯ ಮೂಲಕ ಗುರುತಿಸಲಾದ 8.45 ಲಕ್ಷ ಸಿಮ್ ಕಾರ್ಡ್ ಗಳು ಹಾಗೂ 2.39 ಲಕ್ಷ ಮೊಬೈಲ್ ಐಎಂಇಐ ಸಂಖ್ಯೆಗಳನ್ನೂ ನಿರ್ಬಂಧಿಸುವ ಮೂಲಕ ಈ ದಾಳಿಯನ್ನು ಮೊಬೈಲ್ ಹಾಗೂ ನೆಟ್‌ವರ್ಕ್ ಭದ್ರತೆಯ ಕಡೆಗೂ ವಿಸ್ತರಿಸಲಾಗಿದೆ.
ಆನ್‌ಲೈನ್ ವಂಚನೆಯ ವ್ಯವಸ್ಥೆಯನ್ನು ಇನ್ನಷ್ಟು ನಾಶಗೊಳಿಸಲು ಸಚಿವಾಲಯವು 827 ಹಾನಿಕರ ಮೊಬೈಲ್‌ ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಿದೆ. ಅಲ್ಲದೆ, 1.11 ಲಕ್ಷಕ್ಕೂ ಅಧಿಕ ಸಂದೇಹಾಸ್ಪದ ಆನ್ ಲೈನ್ ವಿಷಯವನ್ನು ತೆಗೆದುಹಾಕಲು ಅಥವಾ ನಿರ್ಬಂಧಿಸಲು ಸಹಯೋಗ್ ಪೋರ್ಟಲ್ ಅನ್ನು ಕೂಡ ಬಳಸಿದೆ.


Spread the love
Share:

administrator

Leave a Reply

Your email address will not be published. Required fields are marked *